ಕಡಬ: ಮನೆಯ ಬೀಗ ಮುರಿದು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯಲ್ಲಿ ಕಳ್ಳತವಾಗಿದ್ದು, ಮನೆ ಮಂದಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಇನ್ನೊಂದು ಮನೆಯ ಬೀಗ ಮುರಿಯುವ ವೇಳೆ ಆಟೋ ರಿಕ್ಷಾ ಬರುತ್ತಿರುವುದನ್ನು ನೋಡಿದ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Trending
- ಮಂಗಳೂರು: ನಗರದ ಬಹುನಿರೀಕ್ಷಿತ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ಕೆಲ ಸೇತುವೆ ಭಾನುವಾರ ಉದ್ಘಾಟನೆ. ತುಳುನಾಡ ರಕ್ಷಣಾ ವೇದಿಕೆ ದಶಕಗಳ ಹೋರಾಟದ ಪ್ರತಿಫಲ
- ಮಂಗಳೂರು ; ಇನ್ಸ್ಟಗ್ರಾಮ್ ರೀಲ್ ಸ್ಟಾರ್ ನಾಗುರಿ ಆಶಾ ಹೃದಯಾಘಾತದಿಂದ ನಿಧನ.
- ಜನರಲ್ಲಿ ದೈರ್ಯ ಬೆಳೆಸಬೇಕಾದ ಸಂಘಟನೆಗಳು — ಭಯ ಹುಟ್ಟಿಸುವುದು ಎಷ್ಟು ಸರಿ? – ಪ್ರಶಾಂತ್ ಭಟ್ ಕಡಬ
- ಬಿಗ್ಬಾಸ್ ಸೀಸನ್–12 ರನ್ನರ್ಅಪ್ ರಕ್ಷಿತಾ ಶೆಟ್ಟಿಗೆ ಹುಟ್ಟೂರಿನಲ್ಲಿ ರಾಜಮರ್ಯಾದೆ ಸ್ವಾಗತ
- ಬಂಟ್ಸ್ ಅಸೋಸಿಯೇಷನ್ ಪುಣೆ ವತಿಯಿಂದ 14ನೇ ವಾರ್ಷಿಕ ಸಮಾವೇಶ – ಫೆಬ್ರವರಿ 6ರಂದು
- ರಿಶೆಲ್ ಡಿಸೋಜ ಪ್ರಕರಣಕ್ಕೆ ನ್ಯಾಯ ಬೇಕು: ತನಿಖೆ ವಿಫಲವಾದರೆ ರಾಜ್ಯವ್ಯಾಪಿ ಹೋರಾಟ – ಅಲ್ವಿನ್ ಡಿಸೋಜ
- ತುಳು ಭಾಷೆಗೆ ಅಧಿಕೃತ ಸ್ಥಾನಮಾನ | ಆಂಧ್ರ ಮಾದರಿಯ ಅಧ್ಯಯನ
- ಎಂ.ಆರ್.ಪಿ.ಎಲ್. (MRPL) ಘಟಕದಲ್ಲಿ ಬೆಂಕಿ ಅವಘಡ
