ದಿನಾಂಕ 09/08/25 ರ ಬೆಳಿಗ್ಗೆ 6 ಗಂಟೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮಹಿಳಾ ನಾಯಕಿಯಾದ ಕಂದಾವರ ಗ್ರಾ ಪಂ ಮಾಜಿ ಅಧ್ಯಕ್ಷರಾದ ವಿಜಯ ಗೋಪಾಲ ಸುವರ್ಣ ರವರ ನೇತೃತ್ವದಲ್ಲಿ ಮುರ ನಗರದ ಅರಸು ವೃತ್ತದಲ್ಲಿ ,ಹದಗೆಟ್ಟ ರಸ್ತೆಯಾ ಹೊಂಡಗಳಿಗೆ ಮಣ್ಣು ತುಂಬಿಸುವ ಮೂಲಕ ಶ್ರಮದಾನ ಮಾಡಿದರು.

ಮುರ ನಗರದ ಆಟೋ ಚಾಲಕ ಮಾಲಕರು ಮತ್ತು ಮುರ ನಗರದ ನಾಗರಿಕರು ಸಾಥ್ ನೀಡಿದರು .ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಗೌರ್ವಾನಿತ ಸದಸ್ಯರಾದ ನಿಸಾರ್ ಕರಾವಳಿ ,SDPI ಕೊಳಂಬೆ ಭಾಗದ ಅಧ್ಯಕ್ಷರಾದ ಹಮೀದ್ ಕೊಳಂಬೆ,ಕಂದಾವರ ಗ್ರಾ ಪಂ ಮಾಜಿ ಸದಸ್ಯರಾದ ಶರ್ಮಿಳಾ,ಅಶ್ರಫ್ ,ಹಾಲಿ ರುಕಯ್ಯ್ ಕಿಶೋರ್ ಸಂತು ಹಫೀಜ್ ಕೊಳಂಬೆ ಚೆರಿಯೋಣಕ್ ಅಝರ್ ಚೆಯ್ಯ್ ಮತ್ತು ,ಸ್ಥಳೀಯ ನಾಗರಿಕರು ಶ್ರಮದಾನ ಮಾಡಿ ಊರಿನ ಜನರ ಪ್ರಶಂಸೆಗೆ ಪಾತ್ರರಾದರು


