ಬಂಟ್ವಾಳ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಅಂಗವಾಗಿ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ, ತುಳು ಸಾಹಿತ್ಯ ಸಮ್ಮೇಳನ ಫೆಬ್ರವರಿ 6 ರಂದು ನಡೆಯಿತು.

ಫೆಬ್ರವರಿ 6ರಂದು ಬೆಳಗ್ಗೆ ದೀಪೋಜ್ವಲನ ಮೂಲಕ ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆಯನ್ನು ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನೆರವೇರಿಸಿದರು. ಸಾಧ್ವಿ ಮಾತಾನಂದಮಯೀ ದಿವ್ಯ ಸಾನ್ನಿಧ್ಯದಲ್ಲಿ ಗಣ್ಯರು ಉಪಸ್ಥಿತರಿದ್ದರು.

ಮಧ್ಯಾಹ್ನ ನಡೆದ ತುಳು ಸಾಹಿತ್ಯ ಸಮ್ಮೇಳನವನ್ನು ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಸಾಹಿತಿ ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು.

ಯಾವುದೇ ಸಮಸ್ಯೆಗಳಿಗೆ ಪರಿಹಾರವಿರುವುದು ಆಧ್ಯಾತ್ಮಿಕತೆಯಲ್ಲಿ. ಅದರ ಉದ್ದೇಶದಲ್ಲಿ ಇಂದು ಆಧ್ಯಾತ್ಮ ಕೇಂದ್ರದ ಲೋಕಾರ್ಪಣೆಯಾಗಿದೆ ಅದು ಸದುಪಯೋಗವಾಗಬೇಕಾದರೆ ಭಕ್ತರ ಸಹಕಾರ ಅಗತ್ಯ ಎಂದು ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ, ಡಾ ರಾಮಾನಂದ ಶೆಟ್ಟಿ, ಹರೀಶ್ ಶೆಟ್ಟಿ ಐಕಳ, ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಕಡಂಜಾರು ವಿಕ್ರಮ ಹೆಗ್ಡೆ, ದಾಮೋದರ ಎಸ್ ಶೆಟ್ಟಿ ಮುಂಬಯಿ, ಲೋಟಸ್ ಪ್ರಾಪರ್ಟಿಸ್ ಸಂಪತ್ ಕುಮಾರ್ ಶೆಟ್ಟಿ, ಜಿತೇಂದ್ರ ಕೊಟ್ಟಾರಿ, ಸಂತೋಷ್ ಹೆಗ್ಡೆ, ದಯಾನಂದ ಹೆಗ್ಡೆ ಮುಲುಂಡು, ಡಾ. ಅಜಿತ್ ಕೆ ಶೆಟ್ಟಿ ಮುಂಬಯಿ, ಭರತ್ ಬೂಷನ್, ಸುರೇಶ ರೈ ಅಧ್ಯಕ್ಷರು ಒಡಿಯೂರು ಸಹಕಾರಿ ಬ್ಯಾಂಕ್, ನವನೀತ ಶೆಟ್ಟಿ ಕದ್ರಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, , ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಉಪಸ್ಥಿತರಿದ್ದರು.

ಉಡುಪಿ ಎಂ.ಜಿ.ಎಂ.ಕಾಲೇಜಿನ ಪ್ರಾದೇಶಿಕ ಸಂಶೋಧನಾ ಕೇಂದ್ರದ ಸಂಶೋಧಕ ಡಾ.ಎಸ್.ಆರ್.ಅರುಣ್ ಕುಮಾರ್ ಅವರು ತುಳುನಾಡಿನ ಸಂತ ಪರಂಪರೆ, ಗುರುವಾಯನಕೆರೆ ಎಕ್ಸೆಲ್ ಪ.ಪೂ.ಕಾಲೇಜಿನ ಪ್ರಾಚಾರ್ಯ ಡಾ.ನವೀನ್ ಮರಿಕೆ ತುಳುನಾಡಿನ ಜಾನಪದ ಪರಂಪರೆ, ಮಲ್ಲಿಕಾ ಜೆ. ರೈ ಗುಂಡ್ಕಡ್ಕ ಅವರು ತುಳುನಾಡಿನ ಸಾಹಿತ್ಯ ಪರಂಪರೆಯ ಬಗ್ಗೆ ವಿವ್ವರ್ ನೀಡಿದರು.
ಈ ಸಂದರ್ಭದಲ್ಲಿ ಪಾಡ್ದನ ಕಲಾವಿದೆ ಕರ್ಗಿ ಶೆಡ್ತಿ ಅಳದಂಗಡಿ,ತುಳು/ಕನ್ನಡ ಸಿನೆಮಾ ನಿರ್ಮಾಪಕ ಪುಷ್ಪರಾಜ ರೈ ಮಲಾರುಬೀಡು,ಸಮಾಜ ಸೇವಕ ಹರೀಶ್ ಶೆಟ್ಟಿ ಮಾಡ, ಸಾವಯವ ಕೃಷಿಕ ಕೃಷ್ಣಪ್ಪ ಪುರುಷ ಕೇಪು,ಪೊಲೀಸ್ ಇಲಾಖೆಯ ಪ್ರವೀಣ್ ರೈ ನಡುಕೂಟೇಲು ಅವರಿಗೆ ಅವರಿಗೆ ತುಳುಸಿರಿ ಗೌರವಾರ್ಪಣೆ ನಡೆಯಿತು.



ಫೆ.7ರಂದು ಬೆಳಗ್ಗೆ 9.00ಕ್ಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ,10.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆಯ ಮಹಾಮಂಗಳಾರತಿ
ಬೆಳಗ್ಗೆ 11ರಿಂದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ ಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದೆ.
ಅಪರಾಹ್ನ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ತಾಲೀಮು ಪ್ರದರ್ಶನ ಹಾಗೂ ಸಾಂಸ್ಕೃತಿಕ ವೈವಿಧ್ಯ, ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ (ರಿ.) ಪುತ್ತೂರು ಇದರ ನೃತ್ಯಗುರು ವಿದುಷಿ ಶ್ರೀಮತಿ ರೋಹಿಣಿ ಉದಯ್ ಇವರ ಶಿಷ್ಠೆಯರಿಂದ ‘ನೃತ್ಯ ರಂಜಿನಿ’ ನಡೆಯಲಿದೆ.
ಸಂಜೆ 7ರಿಂದ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ (ಮಿತ್ತನಡ್ಕ)ಕ್ಕೆ ಹೋಗಿ, ಕನ್ಯಾನ ಪೇಟೆಸವಾರಿ, ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ರಥವು ಹಿಂತಿರುಗಲಿದೆ
ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಹಾಗೂ ವಿವಿಧ ಭಜನ ಮಂಡಳಿಗಳಿಂದ ಕುಣಿತ ಭಜನೆ
ಸಂಜೆ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ, ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಬಳಿ ಶ್ರೀ ಟಿ.ಕೆ. ಭಟ್ ಮತ್ತು ಬಳಗದವರಿಂದ ‘ಸ್ವರಾಭಿಷೇಕ’, ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಒಡಿಯೂರು ಶ್ರೀ ಸಂಸ್ಥಾನದ ಪ್ರಕಟಣೆ ತಿಳಿಸಿದೆ