ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2023-24 ನೇ ಸಾಲಿನಲ್ಲಿ ₹1174 ಕೋಟಿ ವ್ಯವಹಾರ ನಡೆಸಿದ್ದು, ₹12.79 ಕೋಟಿ ನಿವ್ವಳ ಲಾಭ ದಾಖಲಿಸುವ ಮೂಲಕ ಮಹತ್ತರ ಸಾಧನೆ ಮಾಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ. ದೈನಂದಿನ ಹಾಲು ಶೇಖರಣೆಯು ಪ್ರಸ್ತುತ 3.97 ಲಕ್ಷ ಲೀಟರ್ಗೆ ಏರಿಕೆಯಾಗಿದೆ. 2024-25 ನೇ ಸಾಲಿನಲ್ಲಿ ದಿನದ ಸರಾಸರಿ ಶೇಖರಣೆಯು 3.42 ಲಕ್ಷ ಲೀಟರ್ ಆಗಿತ್ತು, ಮತ್ತು ಈಗ 2025-26 ನೇ ಸಾಲಿನಲ್ಲಿ 16% ಶೇಖರಣೆ ಪ್ರಗತಿ ಕಂಡುಬಂದಿದೆ.
ಮಾರಾಟ ಮತ್ತು ಉತ್ಪನ್ನಗಳ ವಿಸ್ತರಣೆ
ದಿನದ ಮೂಲದ ಮೇಲೆ 4.02 ಲಕ್ಷ ಲೀಟರ್ ಹಾಲು ಮತ್ತು 81,000 ಕೆ.ಜಿ. ಮೊಸರು ಮಾರಾಟವಾಗುತ್ತಿದೆ.
ಹಾಲು, ಮೊಸರು ಜೊತೆಗೆ ಕಹಾಮ್ ಉತ್ಪನ್ನಗಳ ಮಾರಾಟವೂ ಜೋರು ಹೊಂದಿದೆ.
ರೈತ ಕಲ್ಯಾಣ ಮತ್ತು ವಿಮಾ ಯೋಜನೆಗಳು
55000 ಹೈನುಗಾರ ರೈತರ ಹಿತದೃಷ್ಟಿಯಿಂದ ಸ್ಥಾಪಿಸಲಾದ ರೈತ ಕಲ್ಯಾಣ ಟ್ರಸ್ಟ್ ₹2.05 ಕೋಟಿ ಮೊತ್ತವನ್ನು ರೈತರ ಮರಣ, ವೈದ್ಯಕೀಯ ವೆಚ್ಚ, ಪಶುಗಳ ಮರಣಗಳಿಗಾಗಿ ಪಾವತಿಸಿದೆ.
ವಿಮಾನೀತ ಪಶುಗಳು:
ಒಟ್ಟು 30,629 ರಾಸುಗಳಿಗೆ ವಿಮೆ
1177 ರಾಸುಗಳಿಗೆ ಪರಿಹಾರ
229 ರಾಸುಗಳು 2024-25 ರಲ್ಲಿ ಖರೀದಿ
130 ರಾಸುಗಳು 2025-26 ರಲ್ಲಿ ಖರೀದಿ
ಅನುದಾನ ಮತ್ತು ನೆರವು ಯೋಜನೆಗಳು
ಒಟ್ಟು ₹2.60 ಕೋಟಿ ಅನುದಾನವು ಹಸಿರು ಹುಲ್ಲು, ಯಂತ್ರೋಪಕರಣಗಳು, ಮಿನಿ ಡೇರಿ ಘಟಕಗಳು, ಅನಿಲ ಸ್ಥಾವರ, ವಾಣಿಜ್ಯ ಘಟಕಗಳಿಗೆ ಹಂಚಿಕೆ ಮಾಡಲಾಗಿದೆ.
ಹಾಲು ಬೆಲೆಯ ವಿವರ (01.04.2025 ರಿಂದ):
3.5% ಫ್ಯಾಟ್ ಮತ್ತು 8.5% SNF ಗೆ:
ಸಂಘಗಳಿಗೆ ₹40.30
ಉತ್ಪಾದಕರಿಗೆ ₹39.00
4.4% ಫ್ಯಾಟ್ ಹಾಲಿಗೆ:
ಸಂಘಗಳಿಗೆ ₹42.06
ಉತ್ಪಾದಕರಿಗೆ ₹40.76
ಜಂತುಹುಳ ನಿರ್ಮೂಲನೆ – ವಿಶೇಷ ಕ್ರಮ
ಸೆಪ್ಟೆಂಬರ್ 16, 2025 ರಂದು ಉಭಯ ಜಿಲ್ಲೆಗಳ ಎಲ್ಲಾ 751 ಹಾಲು ಸಂಘಗಳಲ್ಲಿ ಸಾಮೂಹಿಕ ಜಂತುಹುಳ ನಿರ್ಮೂಲನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ಕಾಗಿ ₹8 ಲಕ್ಷ ಅನುದಾನ ನೀಡಲಾಗಿದೆ.
ಭ್ರೂಣ ಸಂಕ್ರಮನ ಯೋಜನೆ
ಉತ್ಕೃಷ್ಟ ದಾನಿಯ ಹಸುವಿನಿಂದ ಸಂಗ್ರಹಿಸಲಾದ ಅಂಡಾಣು ಮತ್ತು ಲಿಂಗ ವರ್ಗೀಕೃತ ವೀರಾಣುಗಳ ಬಳಕೆ, ಆಯ್ದ ರೈತರ ರಾಸುಗಳಿಗೆ ಭ್ರೂಣ ವರ್ಗಾವಣೆ ಪ್ರಕ್ರಿಯೆ ಮೂಲಕ ಹೈಬ್ರೀಡ್ ತಳಿಗಳನ್ನು ಉತ್ತೇಜಿಸಲು ಯೋಜನೆ ರೂಪಿಸಲಾಗಿದೆ.
ಮೌಲ್ಯವರ್ಧಿತ ಉತ್ಪನ್ನಗಳ ಪರಿಚಯ
ಒಕ್ಕೂಟದ ಮುಂದಿನ ಯೋಜನೆಗಳು:
Guava Chilly Lassi
Nandini Seeds Magic Ladoo
Protein Paneer
Nandini Protein Punch
Whey Drinks
ಈ ನೂತನ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.
ಪನ್ನೀರ್ ಉತ್ಪಾದನೆಗೆ ನವೀನ Vacuumized Thermoforming ಯಂತ್ರ ಖರೀದಿ
ಉಡುಪಿ ಡೇರಿಗೆ ನೀರಿನ ಒರತೆಗಾಗಿ ವಾರಾಹಿ ಯೋಜನೆಯ ಪೈಪ್ ಲೈನ್ ಅಳವಡಿಕೆ
ಉಡುಪಿ ಡೇರಿಯಲ್ಲಿ ನೂತನ ಆಡಳಿತ ಕಚೇರಿ ನಿರ್ಮಾಣ ಪ್ರಗತಿಯಲ್ಲಿದೆ
ಸಿಹಿ ಉತ್ಪನ್ನಗಳ ಘಟಕವನ್ನು ಆರಂಭಿಸಲು ಯೋಜನೆ
ಪತ್ರಿಕಾಗೋಷ್ಠಿಯಲ್ಲಿ ಉದಯ ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ, ಪ್ರಭಾಕರ್, ಚಂದ್ರಶೇಖರ್ ಮತ್ತು ಮಮತಾ ಶೆಟ್ಟಿಯವರು ಉಪಸ್ಥಿತರಿದ್ದರು.
