ಮಂಗಳೂರು, ಮೇ 12(ಕ.ವಾ):- ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತಿಳಿಸುವುದೇನೆಂದರೆ, ಯಾರೋ ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಅಧಿಕಾರಿ/ಸಿಬ್ಬಂದಿಯವರಿಗೆ ತಾನು ಲೋಕಾಯುಕ್ತ ಅಧಿಕಾರಿ/ಸಿಬ್ಬಂದಿಯೆಂದು ಹೇಳಿ ಬೆದರಿಸಿ ಕೆಲಸ ಕಾರ್ಯಗಳನ್ನು ಅಸಮುಚಿತವಾಗಿ ಮಾಡಿಕೊಳ್ಳುತ್ತಿರುವುದು, ಅಧಿಕಾರಿಗಳನ್ನು ಬೆದರಿಸುವುದಾಗಿ ಮಾಹಿತಿ ಬಂದಿರುತ್ತದೆ. ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಪೆÇಲೀಸ್ ಅಧೀಕ್ಷಕರಾಗಿ ಕುಮಾರಚಂದ್ರ, ಪೆÇಲೀಸ್ ಉಪಾಧೀಕ್ಷಕರಗಳಾಗಿ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ, ಪೆÇಲೀಸ್ ನಿರೀಕ್ಷಕರುಗಳಾಗಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಇವರು ಕರ್ತವ್ಯ ನಿರ್ವಹಿಸಿರುತ್ತಾರೆ. ಈ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಸಂಸ್ಥೆಯ ವೆಬ್ಸೈಟ್ನಲ್ಲಿ ಪರೀಕ್ಷಿಸಬಹುದು. ಈ ಅಧಿಕಾರಿಗಳು ಅಲ್ಲದೇ ಬೇರೆ ಯಾವ ಅಧಿಕಾರಿಗಳು ಕೂಡ ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ.
ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಕಚೇರಿಗಳ ಅಧಿಕಾರಿ ಅಥವಾ ಸಿಬ್ಬಂದಿಯವರಿಗೆ ಬೆದರಿಸಿ ಕರೆ ಮಾಡಿದ್ದಲ್ಲಿ ಲೋಕಾಯುಕ್ತ ಅಧಿಕಾರಿಯವರಿಗೆ ಅಥವಾ ಕಛೇರಿಗೆ ಅಥವಾ ಹತ್ತಿರದ ಪೆÇಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬಹುದು. ಮಂಗಳೂರು ಲೋಕಾಯುಕ್ತ ವಿಭಾಗದ ಪೆÇಲೀಸ್ ಅಧೀಕ್ಷಕರ ಮೊಬೈಲ್ ನಂಬರ್ 9364062517, ಕಚೇರಿ ದೂರವಾಣಿ ಸಂಖ್ಯೆ 08242950997 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ
Trending
- ಆಯುಷ್ ವೈದ್ಯರ ವಿರುದ್ಧ ಕ್ರಮ ಕೈಗೊಂಡರೆ ನ್ಯಾಯಾಂಗ ನಿಂದನೆ: ಡಾ. ರವೀಂದ್ರ ಎಚ್ಚರಿಕೆ
- ವಿಟ್ಲ: ಜಾತಿ ನಿಂದನೆ, ಜೀವ ಬೆದರಿಕೆ ಪ್ರಕರಣ – ಆರೋಪಿಗೆ ಒಂದು ವರ್ಷದ ಜೈಲು ಶಿಕ್ಷೆ
- Nrithya Sudha (R) Presents Bharatanatyam Rangapravesha of Vidushi Shriya Rao Sannayya
- ಪುತ್ತೂರುದಲ್ಲಿ ಭಾರೀ ದಾಳಿ: ಕೋವಿ ಠೇವಣಾತಿ ಕೇಂದ್ರದಿಂದ 1500ಕ್ಕೂ ಅಧಿಕ ಬಂದೂಕು ಪತ್ತೆ
- ಪುತ್ತೂರು: ಹೈಕೋರ್ಟ್ ನಿರ್ದೇಶನದಂತೆ ಕೋವಿ ಠೇವಣಾತಿ ಕೇಂದ್ರದಲ್ಲಿ ಭಾರೀ ದಾಳಿ – 1500ಕ್ಕೂ ಅಧಿಕ ಬಂದೂಕು ಪತ್ತೆ
- ಶ್ರೀ ಹರಿಹರ ಪಾಂಡುರಂಗ ವಿಠ್ಠಲ ಭಜನಾ ಮಂದಿರ ಟ್ರಸ್ಟ್ (ರಿ ). ಬಿಕರ್ನಕಟ್ಟೆ. ಶ್ರೀ ಅಡ್ಯಾರ್ ಗುತ್ತು, ಮನೋಹರ್ ರೈ ಯವರನ್ನು ಅಧ್ಯಕ್ಷರಾಗಿ ನೇಮಕ
- ಮಂಗಳೂರು: ರೆಡ್ ಕ್ರಾಸ್ ಡಿ.ಕೆ. ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಫೆ. 22ರಂದು ಚುನಾವಣೆ
- ಹೆಕ್ಕಡ್ಕ–ಬೈಲೂರು ಭಾಗದ ಹಿರಿಯ ಶಿಕ್ಷಕ ಭುಜಬಲಿ ಅಧಿಕಾರಿ ವಿಧಿವಶ
