ಮಂಗಳೂರು : ಕನ್ನಡ ಚಿತ್ರ ನಟ ಡಾ. ರಾಜ್‍ಕುಮಾರ್ ಅವರು ತಾನು ನಟಿಸಿದ ಚಲನಚಿತ್ರಗಳಲ್ಲಿ ಅಥವಾ ವೈಯಕ್ತಿಕ ಬದುಕಿನಲ್ಲಿ ಸಮಾಜಕ್ಕೆ ಕೆಡುಕನ್ನುಂಟು ಮಾಡುವ ಯಾವುದೇ ಅಂಶಗಳನ್ನು ತೋರಿಸದೆ, ತನ್ನ ಬದುಕನ್ನೇ ಆದರ್ಶವನ್ನಾಗಿ ತೋರಿಸಿದ್ದಾರೆ ಎಂದು ಕರ್ನಾಟಕ ಗೇರು ಅಭಿವೃಧ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಪಿ ದಯಾನಂದ ಪೈ ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇವರ ಸಹಕಾರದೊಂದಿಗೆ ಕನ್ನಡ ಚಿತ್ರನಟ ಡಾ. ರಾಜಕುಮಾರ್ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ರತಿಮ ನಟನಾಗಿ ಅವರು ಸಮಾಜಕ್ಕೆ ನೀಡಿದ ಸಂದೇಶ ಸ್ಮರಣೀಯ. ರಾಜಕುಮಾರ್ ಅವರನ್ನು ಸಮಾಜದ ಮಾದರಿ ವ್ಯಕ್ತಿ ಅಂದರೆ ತಪ್ಪಾಗಲಾರದು. ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ಸ್ಮರಿಸುವುದು ಬಹಳ ಅತ್ಯಗತ್ಯ. ಅವರ ಆದರ್ಶ, ಜೀವನ ಮೌಲ್ಯಗಳು ನಮ್ಮಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಡಾ. ರಾಜಕುಮಾರ್ ಕೇವಲ ನಟ, ಗಾಯಕನಾಗಿ ಮಾತ್ರ ಗುರುತಿಸಿಕೊಳ್ಳದೆ ಇಡೀ ನಾಡಿಗೆ ಮೌಲ್ಯಯುತವಾದ ಸಂದೇಶ ನೀಡಿದ ಮಹಾನ್ ಶಕ್ತಿ. ಧೂಮಪಾನ, ಮದ್ಯಪಾನ ಸೇರಿದಂತೆ ತಮ್ಮ ಸಿನಿಮಾದಲ್ಲಿ ಯುವಜನತೆ ಮೇಲೆ ಕೆಟ್ಟ ಪ್ರಭಾವ ಬೀರುವ ಯಾವ ದೃಶ್ಯಗಳನ್ನು ಮಾಡಲು ಒಪ್ಪಿಕೊಂಡಿಲ್ಲ. ಅವರು ಕನ್ನಡ, ನಾಡಿನ ಸಂಸ್ಕøತಿಗೆ ಸಿನಿಮಾ ಮೂಲಕ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
ಡಾ. ರಾಜ್ ನಟಿಸಿದ ‘ಅನುರಾಗ ಅರಳಿತು’ ಚಲನಚಿತ್ರವು 9 ಭಾಷೆಗಳಿಗೆ ಡಬ್ಬಿಂಗ್ ಆಯಿತು. ‘ಬೇಡರ ಕಣ್ಣಪ್ಪ’ ಚಿತ್ರವು ಇಡೀ ಭಾರತ ದೇಶದಲ್ಲಿ ಪರಿಣಾಮ ಬೀರಿತು. ‘ಬಂಗಾರದ ಮನುಷ್ಯ’ ಚಿತ್ರವು ಗ್ರಾಮೀಣ ಬದುಕಿಗೆ ಜನರನ್ನು ಹಿಂದಿರುಗಿಸಿತು . ಕೃಷಿಗೆ ಪ್ರೋತ್ಸಾಹ ನೀಡಿದ ಅವರ ಚಿತ್ರವು ನಗರಗಳಿಗೆ ಹೋಗಿದ್ದ ಹಲವು ಯುವಕರನ್ನು ಮತ್ತೆ ಊರಿನ ವೃತ್ತಿಯತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು ಎಂದರು.
ಡಾ. ರಾಜ್‍ಕುಮಾರ್ ಅವರಿಗೆ ರಾಜಕೀಯದಲ್ಲಿ ಹಲವಾರು ಅವಕಾಶಗಳು ಮನೆಬಾಗಿಲಿಗೆ ಬಂದರೂ, ಒಪ್ಪಲಿಲ್ಲ. ಗೋಕಾಕ್ ಚಳುವಳಿಗೆ ಧುಮುಕುವ ಮೂಲಕ ಕನ್ನಡ ಅಸ್ಮಿತೆ ಉಳಿಸಲು ಕಾರಣರಾಗಿದ್ದಾರೆ. ಕನ್ನಡ ಕಡ್ಡಾಯ ಜಾರಿಯಾಗಲು ಡಾ. ರಾಜ್ ಹೋರಾಟವೇ ಮೂಲ ಪ್ರೇರಣೆಯಾಗಿದೆ ಎಂದು ಹರೀಶ್ ರೈ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಜಯಕರ ಭಂಡಾರಿ ಮಾತನಾಡಿ, ಇಂದಿನ ಕನ್ನಡ ಚಿತ್ರರಂಗದ ನಟರ ತೆರೆಯ ಮೇಲಿನ ಪಾತ್ರಕ್ಕೂ ತೆರೆಯ ಹಿಂದಿನ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಆದರೆ ಕನ್ನಡದ ಮೇರು ನಟ ಎಂಬ ಖ್ಯಾತಿಯ ಡಾ ರಾಜಕುಮಾರ್ ತೆರೆಯ ಮುಂದೆ ಇದ್ದ ಹಾಗೆಯೇ ನಿಜ ಜೀವನದಲ್ಲಿಯೂ ಬದುಕಿದವರು. ಅಂದಿನ ಕಾಲದ ಸಿನಿಮಾಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾಗಿ, ಸಾಂಸ್ಕøತಿಕ ಶಕ್ತಿಯನ್ನು ನಾಡಿಗೆ ತೋರಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿಪ್ರಿಯ ಉಪಸ್ಥಿತರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಸ್ವಾಗತಿಸಿ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಕೃಷ್ಣಪ್ರಭಾ ವಂದಿಸಿದರು. ಸ್ಶೆದುದ್ದೀನ್ ಕಾರ್ಯಕ್ರಮ ನಿರೂಪಿಸಿದರು
Trending
- ದಕ್ಷಿಣ ಕನ್ನಡದಲ್ಲಿ ಮಳೆಯ ಅಬ್ಬರ ಮುಂದುವರಿಕೆ: ಆಗಸ್ಟ್ 4ರಂದು ಅಂಗನವಾಡಿ, ಶಾಲೆಗಳಿಗೆ ಮತ್ತೆ ರಜೆ
- ಶಿಕ್ಷಣ, ಕಲಾ ಹಾಗೂ ಸಮಾಜಸೇವೆಗೆ ಯು.ಆರ್. ಶೆಟ್ಟಿಗೆ ‘ಸ್ವಾಮಿ ವಿವೇಕಾನಂದ ಪ್ರಶಸ್ತಿ’ ಪ್ರದಾನ
- ಸಹಕಾರ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾವ್ ಬದುಕಿನ ಅನಾವರಣ: ‘ತ್ಯಾಗಮಯಿ ಮೊಳಹಳ್ಳಿ’ ಕೃತಿ ಬಿಡುಗಡೆ
- ಕ್ರಿಸ್ಟಲ್ ಪ್ಯೂರ್ ಹರ್ಬಲ್ ಬ್ಯೂಟಿ & ವೆಲ್ನೆಸ್ ಉತ್ಪನ್ನಗಳ ಭವ್ಯ ಅನಾವರಣ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರಿಗೆ ಸನ್ಮಾನ
- ಉಡುಪಿ: ಬಾರ್-ಪಬ್ಗಳ ಮೇಲೆ ಪೊಲೀಸರ ವಿಶೇಷ ದಾಳಿ; ಅಪ್ರಾಪ್ತರು ಮದ್ಯ ಸೇವನೆ ವೇಳೆ ಪತ್ತೆ
- ಕಾಪು ತಾಲೂಕು–ಬೈರಂಪಳ್ಳಿ ಘಟಕದ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರ ಸ್ನೇಹ ಸಮ್ಮಿಲನ ಯಶಸ್ವಿ ,ಹಲವರು ಸದಸ್ಯತ್ವ ಪಡೆದು ಸಂಘಟನೆಗೆ ಸೇರ್ಪಡೆ – ತುಳುನಾಡಿನ ಭಾಷೆ, ಸಂಸ್ಕೃತಿ ಉಳಿವಿಗೆ ಯುವಜನತೆಗೆ ಯೋಗಿಶ್ ಶೆಟ್ಟಿ ಜಪ್ಪು ಕರೆ
- ಉಳ್ಳಾಲ – ಭಗವತೀ ಕ್ಷೇತ್ರ ವಿವಾದದಲ್ಲಿ ಬೆದರಿಕೆ ಆರೋಪ: ಕಾಂಗ್ರೆಸ್ ಮುಖಂಡನ ಆಡಿಯೋ ವೈರಲ್ ಆಡಿಯೋ ಕುರಿತು ಪೊಲೀಸರಿಗೆ ದೂರು
- ಕುಂದಾಪುರ ಶೂಟೌಟ್ ಪ್ರಕರಣ: ಪ್ರಮುಖ ಆರೋಪಿ ಡೆರಿಕ್ ಕ್ರಾಸ್ತಾ ಬಂಧನ
