ಮಂಗಳೂರು : Sarojini M. Kushe ಅವರು ಪಿವಿಎಸ್ ಸಂಸ್ಥೆಯ ಆಡಳಿತವನ್ನು ತಾವು ಸ್ವತಂತ್ರವಾಗಿ ನೋಡಿಕೊಳ್ಳುತ್ತಿದ್ದು, ಅದರಲ್ಲಿ ಯಾರದ್ದೇ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದ Mangalore Press Club ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವ್ಯಕ್ತಿಗಳು ಸಂಸ್ಥೆಯ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದ ಹೆಸರಿನಲ್ಲಿ ನಮ್ಮ ಸಂಸ್ಥೆ ಹಾಗೂ ಆಸ್ತಿಪಾಸ್ತಿಗಳನ್ನು ಕಬಳಿಸುವ ಉದ್ದೇಶದಿಂದ ತೊಂದರೆ ನೀಡುತ್ತಿರುವುದಾಗಿ ಆರೋಪಿಸಿದರು. ವಿಶೇಷವಾಗಿ Krishnadatta ಎಂಬ ವ್ಯಕ್ತಿಯ ಮೂಲಕ ಇಂತಹ ಸಮಸ್ಯೆಗಳನ್ನು ಉಂಟುಮಾಡಲಾಗುತ್ತಿದೆ ಎಂದು ಹೇಳಿದರು.
“ನಾನು ನ್ಯಾಯಾಲಯದ ಮೊರೆ ಹೋಗಿ ಕೃಷ್ಣದತ್ತ ನನ್ನ ಮಗನಲ್ಲ ಎಂಬ ತಡೆಯಾಜ್ಞೆಯನ್ನು ಪಡೆದಿದ್ದೇನೆ. ಆದ್ದರಿಂದ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕೃಷ್ಣದತ್ತ ಮತ್ತು ಅವರ ಸಹಚರರು ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು” ಎಂದು ಅವರು ಮನವಿ ಮಾಡಿದರು.
ಇದೇ ವೇಳೆ, ತಮ್ಮ ಕುಟುಂಬ ಹಿನ್ನೆಲೆಯ ಕುರಿತು ಮಾತನಾಡಿದ ಅವರು, “ನನ್ನ ಅಜ್ಜ ದಿ. Puttu Vaikuntha Shet ಅವರ ಪತ್ನಿಯ ತಂಗಿಯ ಮಗಳಾದ Vasanthi H. ಬಾಲ್ಯದಿಂದಲೇ ನಮ್ಮೊಂದಿಗಿದ್ದುಕೊಂಡಿದ್ದಾರೆ. ನನ್ನ ಪತಿ ನಿಧನವಾದ ಬಳಿಕ ಅವರು ನನ್ನೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಪಿವಿಎಸ್ ಕಂಪನಿಗಳ ಆಡಳಿತವನ್ನು ಮುನ್ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ Santhosh Chandra (ವೈಶ್ಯ ಎಜುಕೇಶನ್ ಸೊಸೈಟಿ), Jayaram Bhat, Ashok Bhat, Gopi Shet ಹಾಗೂ Praveen Nagekar ಉಪಸ್ಥಿತರಿದ್ದರು.
