ಬಂಟ್ವಾಳ: ಯೂತ್ ಬಂಟರ ಸಂಘ ವಾಮದಪದವಿನ ವತಿಯಿಂದ ಕ್ರಿಕೆಟ್ ಪಂದ್ಯಾಟ ನಡೆಯಿತು. ಅಜ್ಜಿಬೆಟ್ಟುˌ ಕೊಡಂಬೆಟ್ಟುˌ ಪಿಲಿಮೊಗರುˌ ಚೆನೈತ್ತೋಡಿ A ಮತ್ತು ಚೆನೈತ್ತೋಡಿ B ತಂಡಗಳ ಮದ್ಯೆ 4 ಓವರ್ ಗಳ ಲೀಗ್ ಪಂದ್ಯಾಟ ನಡೆಯಿತು.

ಲೀಗ್ ನಲ್ಲಿ ಹೆಚ್ಟು ಅಂಕ ಪಡೆದ ಚೆನೈತ್ತೋಡಿ A ತಂಡ ಮತ್ತು ಚೆನೈತ್ತೋಡಿ B ತಂಡ ಗಳಿಗೆ 6 ಓವರ್ ಗಳ ಪೈನಲ್ ಪಂದ್ಯಾಟ ನಡೆಯಿತು ಅತ್ಯುತ್ತಮ ರೊಮಾಂಚಾನಕಾರಿಯಾಗಿ ಚೆನೈತ್ತೋಡಿ B ತಂಡ ಎಲ್ಲಾ ಲೀಗ್ ಪಂದ್ಯಾಟವನ್ನ ಗೆದ್ದ ಬಲಿಷ್ಟ ಚೆನೈತ್ತೋಡಿ A ತಂಡವನ್ನು ಮಣಿಸಿ ವಿಜಯಶಾಲಿಯಾಗಿ ಯೂತ್ ಟ್ರೋಪಿ ಪಡೆದುಕೊಂಡರು.
