ಉಳ್ಳಾಲ: ಮೆಹಂದಿ ಶಾಸ್ತ್ರದ ದಿನವೇ ನಾಪತ್ತೆಯಾಗಿದ್ದ ಮದುಮಗ, ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಪುತ್ರ ಕಿಶನ್ ಶೆಟ್ಟಿ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾರೆ. ಭಾನುವಾರ ಮಧ್ಯಾಹ್ನ ತನ್ನ ತಂಗಿಗೆ ಮೊಬೈಲ್ ಸಂದೇಶ ಕಳುಹಿಸಿರುವ ಕಿಶನ್ ಶೆಟ್ಟಿ ನಾನು ಬಳ್ಳಾ ರಿಯಲ್ಲಿದ್ದೇ ನೆ. ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.ಈ ಮೂಲಕ ಪುತ್ರನ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ತಿಳಿದುಬಂದಿದೆ. ಮೇ31ರಂದು ರಾತ್ರಿ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲೆಂದು ಹೋಗಿದ್ದ ಕಿಶನ್ ಶೆಟ್ಟಿ ಆ ಬಳಿಕ ನಾಪತ್ತೆಯಾಗಿದ್ದರು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈತ ಭಾನುವಾರ ಮಧ್ಯಾಹ್ನ ಸಹೋದರಿ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದಾನೆ. ನಾನು ಬಳ್ಳಾರಿಯಲ್ಲಿ ಇದ್ದೇನೆ. ಸ್ಕೂಟರ್ ಮೆಲ್ಕಾರ್ ಆರ್‌ಟಿಒ ಕಚೇರಿ ಮುಂದೆ ಇಟ್ಟಿದ್ದೇನೆ. ಆದರೆ ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾನೆ. ತಂಗಿ ಕರೆ ಮಾಡಲು ಯತ್ನಿಸಿದ್ದು, ಆದರೆ ಕಿಶನ್ ಶೆಟ್ಟಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ತಂಗಿ ತಂದೆಗೆ ಮಾಹಿತಿ ನೀಡಿದ್ದು, ಐತಪ್ಪ ಶೆಟ್ಟಿ ಅವರು ಕೊಣಾಜೆ ಠಾಣೆಗೆ ಹೋಗಿ ಕರೆಬಂದ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಟವರ್ ಲೋಕೇಶನ್ ಸರ್ಚ್ ಮಾಡಿದಾಗ ಬಳ್ಳಾರಿಯ ಗ್ರಾಮಾಂತರ ಭಾಗವೊಂದರ ಟವರ್ ಲೊಕೇಶನ್ ತೋರಿಸಿದೆ. ಅರ್ಧ ಗಂಟೆಗೊಮ್ಮೆ ಕೆಲವು ಕಿಲೋ ಮೀಟರ್ ಅಂತರ ಲೊಕೇಶನ್ ತೋರಿಸುತ್ತಿದ್ದು, ಪೊಲೀಸರು ಆತನ ಪತ್ತೆಗೆ ನಿರಂತರ ಯತ್ನ ಮುಂದುವರಿಸಿದ್ದಾರೆ.
©2021 Tulunada Surya | Developed by CuriousLabs