Monday, December 4, 2023

ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತ ಲೋಕಾಯುಕ್ತ ಬಲೆಗೆ

ಕುಂದಾಪುರ : ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿ ಲೋಕಾಯಕ್ತ...
More

  Latest Posts

  ಬ್ರಹ್ಮಾವರ: ಮಹಿಳೆ ನಾಪತ್ತೆ

  ಬ್ರಹ್ಮಾವರ: ಇಲ್ಲಿನ ಉಪ್ಪಿನಕೋಟೆಯಲ್ಲಿ ವಾಸವಿದ್ದ ಲಲಿತಾ ಪೂಜಾರಿ (31) ಅವರು ನ. 30ರಿಂದ ನಾಪತ್ತೆಯಾಗಿದ್ದಾರೆ. ಬಳಿಕ ಮನೆಯ ಒಳಗಡೆ ಪರಿಶೀಲಿಸುವಾಗ ಚಿಕ್ಕ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ...

  ಹಾಸನ: 8 ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ

  ಮೈಸೂರು: ಜಿಲ್ಲೆಯ ಬಳ್ಳೆ ಆನೆ ಶಿಬರದಲ್ಲಿದ್ದಂತ ಸತತ 8 ಬಾರಿ ಮೈಸೂರಿನ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದಂತ ಅರ್ಜುನ (64) ಆನೆ ಒಂಟಿ ಸಲಗದ ದಾಳಿಯಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

  ‘ಭಾರತೀಯ ನೌಕಾಪಡೆ’ಯಲ್ಲಿ ವಿವಿಧ 275 ಹುದ್ದೆಗಳಿಗೆ ಅರ್ಜಿ ಆಹ್ವಾನ

  ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೌಕಾಪಡೆಯಲ್ಲಿ ಹಲವಾರು ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ...

  ಪುತ್ತೂರು : ಗ್ರಾಮ ಪಂಚಾಯತ್‌ ಸದಸ್ಯ ನೇಣಿಗೆ ಶರಣು..!

  ಪುತ್ತೂರು : ಪುತ್ತೂರಿನಲ್ಲಿ ಗ್ರಾಮ ಪಂಚಾಯತ್‌ ಸದಸ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಡನ್ನೂರು ಗ್ರಾಮದ ಕಾವು ಬಂಗ್ಲೆಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತ್‌ನ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆಗೆ...

  ತುಳು ಲಿಪಿಯಲ್ಲಿ ಭಗವದ್ಗೀತೆ ರಚಿಸಿದ ಪುತ್ತೂರಿನ ಯುವತಿ

  ಮಂಗಳೂರು: ತುಳು ಭಾಷೆಗೆ ಲಿಪಿ ಇದೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತೇ ಇಲ್ಲ.ಆದರೆ ತುಳು ಭಾಷೆಗೂ ಲಿಪಿ ಇದೆ. ಅದಕ್ಕೂ ನೂರಾರು ವರ್ಷಗಳ ಇತಿಹಾಸ ವಿದೆ ಎನ್ನುವುದನ್ನು ತುಳು ಅಧ್ಯಯನಕಾರರು ಹಲವು ರೂಪದಲ್ಲಿ ರುಜುವಾತು ಪಡಿಸಿದ್ದಾರೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವತಿ ತುಳು ಭಾಷೆಯಲ್ಲೇ ಭಗವದ್ಗೀತೆ ಬರೆಯುವ ಮೂಲಕ ತುಳು ಭಾಷೆಗೆ ಹೊಸ ಕೊಡುಗೆ ನೀಡಿದ್ದಾರೆ.

  ಪುತ್ತೂರಿನ ನರಿಮೊಗರಿನ ಕೊಡಂಕೇರಿ ನಿವಾಸಿ ಅಪರ್ಣಾ ಈ ನೂತನ ಪ್ರಯತ್ನವನ್ನು ಮಾಡಿದ ಸಾಧಕಿ. ಭರತನಾಟ್ಯ ಕಲಾವಿದೆಯೂ ಆಗಿರುವ ಅಪರ್ಣಾ ಈಗ ಭಗವದ್ಧೀತೆಯ 18 ಅಧ್ಯಾಯದ ಶ್ಲೋಕ ಮತ್ತು ಸಾರವನ್ನು ತುಳು ಲಿಪಿಯಲ್ಲಿ ಮತ್ತು ಕನ್ನಡ ಲಿಪಿಯ ಮೂಲಕ ತುಳುವಿನಲ್ಲಿ ಬರೆದಿದ್ದು, ತುಳು ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.

  ಹಿಂದೂ ಧರ್ಮದ ಪರಮೋಚ್ಚ ಗ್ರಂಥವಾದ ‘ಭಗವದ್ಗೀತೆ’ಯನ್ನು ತುಳು ಲಿಪಿಯನ್ನು ಬಳಸಿ ಅನುವಾದಿಸಿ ಮೊದಲ ಪ್ರಯತ್ನದಲ್ಲೇ ಅಪರ್ಣಾ ಎಲ್ಲರ‌ ಮೆಚ್ಚುಗೆ ಗಳಿಸಿದ್ದಾರೆ. ಸರಳವಲ್ಲದ ತುಳು ಭಾಷೆಯಲ್ಲಿ ಭಗವದ್ಗೀತೆ ಬರೆಯುವ ಮೂಲಕ ತುಳು ಭಾಷಾ ಅಧ್ಯಯನಕಾರರಿಗೆ ಹೊಸ ಮೇಲ್ಪಂಕ್ತಿಯನ್ನು ಅಪರ್ಣಾ ಹಾಕಿದ್ದಾರೆ.

  ಅಪರ್ಣಾ ಅವರ ಈ ಪುಸ್ತಕವನ್ನು ಇತ್ತೀಚಿಗೆ ಶ್ರೀಕ್ಷೇತ್ರ ನರಸಿಂಹ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು, ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮತ್ತು ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನಾ ಕೇಂದ್ರದ ಆನಂದತೀರ್ಥ ಸಗ್ರಿ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ.

  ಕೋವಿಡ್ ಸಮಯದಲ್ಲಿ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಅಪರ್ಣಾ ಕೊಡಂಕೇರಿ ತನ್ನ ಸಹೋದರ ಮುಕುಂದ ಅವರು ಕಲಿಸಿಕೊಟ್ಟ ತುಳು‌ ಲಿಪಿಯನ್ನು ಅಭ್ಯಾಸ ಮಾಡಿ ಬರೆಯಲು ಶುರು ಮಾಡಿದ್ದರು. ಹೀಗೆ ಬರೆಯುವ ಸಮಯದಲ್ಲಿ ಮಹಾಭಾರತದಲ್ಲಿ ಶ್ರೀ ಕೃಷ್ಣ ಭೋಧಿಸಿದ ಭಗವದ್ಗೀತೆಯನ್ನು ತುಳು ಭಾಷೆ ಮತ್ತು ಲಿಪಿಯಲ್ಲಿ ಏಕೆ ಬರೆಯಬಾರದು ಎನ್ನುವ ಮನಸ್ಸಲ್ಲಿ ಮೂಡಿತ್ತು.

  ತುಳು ಮಾತೃಭಾಷೆಯ ಜನಕ್ಕೆ ತುಳುವಲ್ಲಿ ಬರೆದರೆ, ಮಾತನಾಡಿದರೆ ಅದು ಹೃದಯಕ್ಕೆ ತೀರಾ ಹತ್ತಿರವಾಗಿರುತ್ತೆ ಎನ್ನುವ ಕಾರಣಕ್ಕೆ ಭಗವದ್ಗೀತೆಯ 18 ಅಧ್ಯಾಯದ ಶ್ಲೋಕದ ಸಾರ ಹಾಗು ತಾತ್ಪರ್ಯಗಳನ್ನು ತುಳು ಲಿಪಿ ಮತ್ತು ಕನ್ನಡ ಲಿಪಿಯನ್ನು ಬಳಸಿ ತುಳುವಲ್ಲಿ ಅಪರ್ಣಾ ಬರೆದಿದ್ದಾರೆ.

  ಪುಸ್ತಕದ ಪ್ರತೀ ಪುಟದಲ್ಲಿ ಎಡ ಭಾಗದಲ್ಲಿ ಸಂಪೂರ್ಣ ತುಳು ಲಿಪಿಯನ್ನು ಬಳಸಿ ಶ್ಲೋಕ ಮತ್ತು ಸಾರವನ್ನು ಬರೆಯಲಾಗಿದ್ದು, ಬಲ ಭಾಗದಲ್ಲಿ ಕನ್ನಡ ಲಿಪಿ ಬಳಸಿ ತುಳುವಿನಲ್ಲಿ ಶ್ಲೋಕದ ಅರ್ಧವನ್ನು ಬರೆಯಲಾಗಿದೆ. ತುಳು ಲಿಪಿಯಲ್ಲಿ ಭಗವದ್ಗೀತೆಯನ್ನು ಬರೆದಿರುವುದು ಇದೇ ಮೊದಲಾಗಿದ್ದು, ತುಳು ಭಾಷೆಯ ಬೆಳವಣಿಗೆಗೆ ಅಪರ್ಣಾ ಕೊಡಂಕೇರಿ ತನ್ನದೇ ಆದ ಕೊಡುಗೆಯನ್ನು ಈ ಸಾಧನೆಯ ಮೂಲಕ ನೀಡಿದ್ದಾರೆ.

  ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ಅಪರ್ಣಾ, ‘ತುಳು ಲಿಪಿ ಕಲಿಯಬೇಕೆಂಬ ಆಸೆ ಇತ್ತು. ತುಳು ಲಿಪಿಯಲ್ಲಿ ನೈಪುಣ್ಯತೆಯನ್ನು ಪಡೆದಿದ್ದ ಅಣ್ಣ, ಲಾಕ್‌ಡೌನ್‌ ವೇಳೆ ತುಳು ಲಿಪಿಯನ್ನು ಕಲಿಸಿದ್ದರು. ಮೊದಲು ಕಷ್ಟ ಅನಿಸಿದರೂ ಬಳಿಕ ತುಳು ಲಿಪಿ ಕಲಿಯೋದು, ಬರೆಯೋದು ಆಸಕ್ತಿಯ ವಿಚಾರವಾಯಿತು. ತುಳು ಲಿಪಿಯಲ್ಲಿ ಭಗವದ್ಗೀತೆ ಬರೆಯಬೇಕೆಂಬ ದೊಡ್ಡ ನಿರ್ಧಾರ ತೆಗೆದುಕೊಂಡ ಬಳಿಕ ಅದಕ್ಕಾಗಿ ಸಮಯ ಇರಿಸಿ ಇದೀಗ ಪುಸ್ತಕ ಬಿಡುಗಡೆಯಾಗಿದೆ. ಖುಷಿಯಾಗಿದೆ’ ಎಂದು ಅಪರ್ಣಾ ಹೇಳಿದ್ದಾರೆ.

  Latest Posts

  ಬ್ರಹ್ಮಾವರ: ಮಹಿಳೆ ನಾಪತ್ತೆ

  ಬ್ರಹ್ಮಾವರ: ಇಲ್ಲಿನ ಉಪ್ಪಿನಕೋಟೆಯಲ್ಲಿ ವಾಸವಿದ್ದ ಲಲಿತಾ ಪೂಜಾರಿ (31) ಅವರು ನ. 30ರಿಂದ ನಾಪತ್ತೆಯಾಗಿದ್ದಾರೆ. ಬಳಿಕ ಮನೆಯ ಒಳಗಡೆ ಪರಿಶೀಲಿಸುವಾಗ ಚಿಕ್ಕ ಮೂರು ಚೀಟಿಯಲ್ಲಿ ಹಾಗೂ ಪುಸ್ತಕದ...

  ಹಾಸನ: 8 ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಬಲಿ

  ಮೈಸೂರು: ಜಿಲ್ಲೆಯ ಬಳ್ಳೆ ಆನೆ ಶಿಬರದಲ್ಲಿದ್ದಂತ ಸತತ 8 ಬಾರಿ ಮೈಸೂರಿನ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದಂತ ಅರ್ಜುನ (64) ಆನೆ ಒಂಟಿ ಸಲಗದ ದಾಳಿಯಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

  ‘ಭಾರತೀಯ ನೌಕಾಪಡೆ’ಯಲ್ಲಿ ವಿವಿಧ 275 ಹುದ್ದೆಗಳಿಗೆ ಅರ್ಜಿ ಆಹ್ವಾನ

  ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೌಕಾಪಡೆಯಲ್ಲಿ ಹಲವಾರು ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ...

  ಪುತ್ತೂರು : ಗ್ರಾಮ ಪಂಚಾಯತ್‌ ಸದಸ್ಯ ನೇಣಿಗೆ ಶರಣು..!

  ಪುತ್ತೂರು : ಪುತ್ತೂರಿನಲ್ಲಿ ಗ್ರಾಮ ಪಂಚಾಯತ್‌ ಸದಸ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಡನ್ನೂರು ಗ್ರಾಮದ ಕಾವು ಬಂಗ್ಲೆಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತ್‌ನ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆಗೆ...

  Don't Miss

  ಪ್ರಯಾಣಿಕರು, ಫುಟ್ಬೋರ್ಡ್‌ನಲ್ಲಿ ನೇತಾಡಿದರೆ ವಾಹನಗಳ ಪರವಾನಿಗೆ ರದ್ದು’ -ಎಸ್ಪಿ ಋಷ್ಯಂತ್

  ಮಂಗಳೂರು: ಸರಕಾರಿ ಬಸ ಸೇರಿದಂತೆ, ಖಾಸಗಿ ಬಸ್ಸುಗಳ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು, ಶಾಲಾ ವಾಹನಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು,...

  ಮಂಗಳೂರು: ಮನೆಗೆ ನುಗ್ಗಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

  ಮಂಗಳೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬಿಜೈ ನ್ಯೂರೋಡ್‌ನ‌ ಸಂಕೈಗುಡ್ಡದಲ್ಲಿ ನಡೆದಿದೆ. ನ.24ರ...

  ಬೆಳ್ತಂಗಡಿ: ಕಾರಿನ ಮೇಲೆ ಆನೆ ದಾಳಿ – ಓರ್ವನಿಗೆ ಗಾಯ

  ಬೆಳ್ತಂಗಡಿ: ನೆರಿಯ ಸಮೀಪದ ತೋಟತ್ತಾಡಿಯ ಬಯಲು ಬಸ್ತಿ ಬಳಿ ಆನೆಯೊಂದು ರಸ್ತೆಯಲ್ಲಿ ಚಲಿಸುತಿದ್ದ ಕಾರಿಗೆ ಹಾನಿ ಮಾಡಿದ ಪರಿಣಾಮ ಓರ್ವ ಗಾಯಗೊಂಡ ಘಟನೆ ನಡೆದಿದೆ. ಆನೆ ರಸ್ತೆಯಲ್ಲಿ ನಡೆದು ಹೋಗುತ್ತಿರುವುದನ್ನ...

  ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್!

  ಬೆಂಗಳೂರು: ನಗರದಲ್ಲಿ ನಡೆದ ಭರ್ಜರಿ ಕಾರ್ಯಾಚರಣೆಯಲ್ಲಿ ಹಸುಗೂಸುಗಳ ಮಾರಾಟ ದಂಧೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪುಟ್ಟ ಕಂದಮ್ಮಗಳನ್ನು ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈವರೆಗೆ ಸುಮಾರು 60ಕ್ಕೂ ಹೆಚ್ಚು...

  ಮಂಗಳೂರು: ಸಾಕು ನಾಯಿಗಳಿಗೆ ಪಾಲಿಕೆಯಿಂದ ಡಾಗ್ ಲೆಸೆನ್ಸ್ ಪಡೆಯಲು ಸೂಚನೆ

  ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‍ಗಳಲ್ಲಿ ಈಗಾಗಲೇ ಬೀದಿ ನಾಯಿಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ಆದ್ದರಿಂದ ನಗರದ ಸಾರ್ವಜನಿಕರ ಆರೋಗ್ಯಕ್ಕೆ ತುಂಬಾ ಗಾಢವಾದ...