ವಿಟ್ಲ: ಪಿಕಪ್ ವಾಹನ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ವಿಟ್ಲದ ಕೇಪು ಮೈರ ಎಂಬಲ್ಲಿ ನಡೆದಿದೆ.
ಸಂದೇಶ್(33)ಮೃತ ದುರ್ದೈವಿ.ಈತ ಚಾಲಕನಾಗಿ ಕೆಲಸಮಾಡುತ್ತಿದ್ದ ಇಂದು ಮಧ್ಯಾಹ್ನ ವಿಟ್ಲ ಕಡೆಯಿಂದ ಬದಿಯಡ್ಕ ಕಡೆ ತೆರಳುವಾಗ ಪಿಕಪ್ ವಾಹನ ಬೈಕ್ ಗೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಸಂದೇಶ್ ಗಂಭೀರವಾಗಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ವಿಟ್ಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
