ಮಂಗಳೂರು : ಯುವಕನೊಬ್ಬ ಮರವೂರು ಸೇತುವೆಯಿಂದ ಫಲ್ಲುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೃತ ಯುವಕನನ್ನು ಆಕಾಶಭವನ ನಿವಾಸಿ ಹಿತೇಶ್ (21) ಎಂದು ಗುರುತಿಸಲಾಗಿದೆ.
ಹಿತೇಶ್ ಮೆಡಿಕಲ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ಸಮಯದಿಂದ ಮಾನಸಿಕ ಖಿನ್ನತೆಯಿಂದಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮನೆಯವರು ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೆ ಗುರುವಾರ ಸಂಜೆ ಮರವೂರು ಸೇತುವೆ ಬಳಿಯಲ್ಲಿ ಸ್ಕೂಟರ್ ನಿಲ್ಲಿಸಿ, ದಿಢೀರ್ ನದಿಗೆ ಹಾರಿದ್ದಾನೆ.ಶುಕ್ರವಾರ ಬೆಳಗ್ಗೆ ಸೇತುವೆ ಪಕ್ಕದಲ್ಲಿ ಶವ ಪತ್ತೆಯಾಗಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.