ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಏನು ಆ ಲಾಭಗಳು ತಿಳಿಯೋಣ.
ಜೀರ್ಣಕ್ರಿಯೆ
ಮೊಸರಿನಲ್ಲಿ ಪ್ರೊಬಯೊಟಿಕ್ ಬ್ಯಾಕ್ಟೀರಿಯಾಗಳಿದ್ದು, ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
ಹೀಗಾಗಿ ಅಸಿಡಿಟಿ, ಗ್ಯಾಸ್ಟಿಕ್ ಸಮಸ್ಯೆ ಇರುವವರು ಮೊಸರು ಸೇವಿಸಿದರೆ ಒಳ್ಳೆಯದು.
ರೋಗ ನಿರೋಧಕ
ಮೊಸರಿನಲ್ಲಿರುವ ಅಂಶಗಳು ನಮ್ಮ ದೇಹಕ್ಕೆ ಬೇಡದ ರೋಗಾಣುಗಳು ಬಾರದಂತೆ ತಡೆದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೌಂದರ್ಯ
ಮೊಸರಿನಲ್ಲಿ ತೇವಾಂಶ ಗುಣವಿದ್ದು, ಇದನ್ನು ಸೇವಿಸುವುದರಿಂದ ಚರ್ಮದ ತೇವಾಂಶ ಹೆಚ್ಚಿ ಸೌಂದರ್ಯ ವರ್ಧಿಸುತ್ತದೆ. ಹಲವು ಫೇಸ್ ಪ್ಯಾಕ್ ಗಳಲ್ಲಿ ಮೊಸರನ್ನು ಬಳಸಲಾಗುತ್ತದೆ.
ರಕ್ತದೊತ್ತಡ
ಕಡಿಮೆ ಕೊಬ್ಬಿನಂಶವಿರುವ ಮೊಸರು ಸೇವನೆಯಿಂದ ಶೇ.31 ರಷ್ಟು ರಕ್ತದೊತ್ತಡ ಸಮಸ್ಯೆ ಕಡಿಮೆಯಿರುತ್ತದೆ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ.
ಮೂತ್ರ ಸಮಸ್ಯೆ
ಮೂತ್ರ ಸಂಬಂಧಿ ಸೋಂಕು ಇತ್ಯಾದಿ ಸಮಸ್ಯೆಗಳಿಗೆ ಮೊಸರು ಪರಿಹಾರ ನೀಡುತ್ತದೆ.