Thursday, March 28, 2024
spot_img
More

    Latest Posts

    ಸೇವೆಯೇ ಕರ್ತವ್ಯವೆನ್ನುವ ತುಳುನಾಡ ವೇದಿಕೆಯ ರೂವಾರಿ ಯೋಗಿಶ್ ಶೆಟ್ಟಿ ಜಪ್ಪು ರವರ ಜನಪರ ಸೇವೆಯನ್ನು ಗುರುತಿಸಿ ಸನ್ಮಾನ

    ಮಂಗಳೂರು: ಅಂತರಾಷ್ಟ್ರಿಯ ಲಯನ್ಸ್ ಸೇವಾ ಸಂಸ್ಥೆ – 317 ಡಿ ಪಾಂಡೇಶ್ವರ್ , ಮಂಗಳೂರು ಕ್ಲಬ್ ವತಿಯಿಂದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜೆಪ್ಪು ರವರು ಕಳೆದ ಮೂರು ದಶಕಗಳಿಂದ ಸಲ್ಲಿಸಿದ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

    ಒಂದೆಡೆ ಪಶ್ಚಿಮ ಘಟ್ಟಗಳ ಸಾಲು ಇನ್ನೊಂದೆಡೆ ಭೋರ್ಗರೆಯುವ ಕಡಲು ಇವುಗಳ ನಡುವಿನ
    ಪುಟ್ಟ ಪ್ರದೇಶ ತುಳುವ ಜನ್ಮಭೂಮಿ, ತುಳುನಾಡಿನ ಭಕ್ತಿ, ಆಚಾರ, ವಿಚಾರ, ಸಂಪ್ರದಾಯ, ನಂಬಿಕೆ,
    ಆರಾಧನೆ-ಎಲ ವೂ ಬೇರೆಡೆಗಳಿಂತ ಭಿನ್ನ. ಇಲ್ಲಿ ಸಂಸ್ಕೃತಿಯ ನಡುವೆ ಕೊಡು-ಕೊಳ್ಳುವಿಕೆಯ ಪ್ರಕ್ರಿಯೆ
    ನಿರಂತರ ಮತ್ತು ಸಮೂಹ ಆರಾಧನೆ ಕೂಡಾ. ಒಂಜಿ ಕಮ್ಮಿ ನಲ್ಪ ಭೂತೊಲು – ಅಂದರೆ 39 ದೈವ-
    ಭೂತಗಳಿಗೆ ಸಮೂಹ ಆರಾಧನೆ ಇಲ್ಲಿ ಪ್ರಚಲಿತದಲ್ಲಿದೆ.
    ಇಂಥ ತುಳುನಾಡಿನಲ್ಲಿ ಸಂಘ-ಸಂಸ್ಥೆ, ಸಂಘಟನೆಗಳಿಗೇನೂ ಕೊರತೆಯಿಲ್ಲ . ಸಾಕಷು
    ಸಂಘಟನೆಗಳು ಇಲ್ಲಿವೆ. ಆದರೆ ಜೀವಪರ ಕಾಳಜಿಯುಳ್ಳ ಸಂಘಟನೆಗಳು ಕೆಲವೇ ಕೆಲವು ಅಂಥವುಗಲ್ಲಿ
    ಮುಂಚೂಣಿಯಲ್ಲಿರುವುದು 2009 ರಲ್ಲಿ ಜನ್ಮತಾಳಿದ “ತುಳುನಾಡ ರಕ್ಷಣಾ ವೇದಿಕೆ”.
    ತುಳುನಾಡ ರಕ್ಷಣಾ ವೇದಿಕೆ (ತುರವೇ) ಎಂದಾಕ್ಷಣ ನೆನಪಾಗುವುದು ಇದರ ರೂವಾರಿ
    ಯೋಗೀಶ್ ಶೆಟ್ಟಿ ಜಪ್ಪು. ಯೋಗೀಶ್ ಶೆಟ್ಟಿ ಜಪ್ಪು ಎಂದರೆ ತುಳುನಾಡ ರಕ್ಷಣಾ ವೇದಿಕೆ ಎಂಬಷ್ಟರ
    ಮಟ್ಟಿಗೆ ಅವರು ಬೆಳೆದಿದ್ದಾರೆ ಮತ್ತು ಸಂಘಟನೆಯನ್ನು ಬೆಳೆಸಿದ್ದಾರೆ.
    ಪಡ್ಯಾರ ಮನೆ ಸೀತಾರಾಮ ಶೆಟ್ಟಿ ಉಳಿದೊಟ್ಟು ಕಲ್ಯಾಣಿ ಶೆಟ್ಟಿ ಅವರ ಪುತ್ರ ಯೋಗೀಶ್
    ಶೆಟ್ಟಿಯವರು ಎಳವೆಯಲ್ಲೇ ಅಂದರೆ ಅಖಿಲ ಭಾರತ್ ವಿದ್ಯಾರ್ಥಿ ಪರಿಷತ್ ಸಂಘಟನೆ ಮೂಲಕ
    ವಿದ್ಯಾರ್ಥಿದೆಸೆಯಲ್ಲೇ ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚನ್ನು ಬೆಳೆಸಿಕೊಂಡವರು. ಪಾದರಸದಂತಹ
    ಚುರುಕಿನ ವ್ಯಕ್ತಿತ್ವ, ಸಮಯಪಾಲನೆ ಸಂಘಟನಾ ಕೌಶಲ್ಯ, ಅದ್ಭುತ ಮಾತುಗಾರಿಕೆ, ಶ್ರದ್ಧೆ, ನಿರ್ಭೀತ ಮತ್ತು
    ನಿಷ್ಪಕ್ಷಪಾತ ನಿಲುವು, ನಿಸ್ವಾರ್ಥ, ಎಲ ಕ್ಕಿಂತ ಹೆಚ್ಚಾಗಿ ನೊಂದವರಿಗೆ ಸಾಂತ್ವಾನ ಹೇಳಿ ಅವರಿಗೆ ಎಲ್ಲ
    ಬಗೆಯ ಸಹಾಯಹಸ್ತ ಚಾಚುವ ಹೃದಯವಂತಿಕೆ – ಹೀಗೆ ಹತ್ತು ಹಲವು ಸದ್ಗುಣಗಳನ್ನು ರಕ್ತಗತವಾಗಿ
    ಮೈಗೂಡಿಸಿಕೊಂಡಿರುವ ಯೋಗೀಶ್ ಶೆಟ್ಟಿಯವರು ಯಾವುದೇ ಸಮಾರಂಭ ಅಥವಾ ಪ್ರತಿಭಟನಾ
    ಸಭೆಗ ಲ್ಲಿ ಮಾತಿಗೆ ನಿಂತರೆಂದರೆ ಕಂಚಿನ ಕಂಠದ ಅಪೂರ್ವ ವಾಗ್ಝರಿಗೆ ನೆರೆದವರು
    ಮಂತ್ರಮುಗ್ಧರಾಗುತ್ತಾರೆ. ರಕ್ಷಣಾ ವೇದಿಕೆಯ ಮೂಲಕ ಸಮಾಜದ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ,
    ತುಳು ಭಾಷೆ, ನೆಲ, ಜಲದ ಸಂರಕ್ಷಣೆಯ ದೀಕ್ಷೆ ತೊಟ್ಟು ಕಾರ್ಯೋನ್ಮುಖರಾಗಿರುವ ಯೋಗೀಶ್
    ಶೆಟ್ಟಿಯವರು ಜನಪರ ಹೋರಾಟಗಳಿಂದಲೇ ಬೆಳಕಿಗೆ ಬಂದ, ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ಔದಾರ್ಯವಂತ.


    1997ರಲ್ಲಿ ರಾಜ್ಯದಲ್ಲಿ ಜೆ.ಎಚ್. ಪಟೇಲ್ ಉಪಸ್ಥಿತಿಯಲ್ಲಿ ನೇತೃತ್ವದ ಜನತಾಳದ ಸೇರಿದ ಇವರು
    ಪಕ್ಷದ ಕುರ್ನಾಡು ಎಚ್. ರಾಮಯ್ಯ ನಾಕ್, ವಸಂತ್ ಬಂಗೇರ, ವೈ.ಎಸ್.ವಿ ದತ್ತ, ಅಮರನಾಥ್ ಶೆಟ್ಟಿ,
    ಜಯಪ್ರಕಾಶ್ ಹೆಗ್ಡೆ, ಡಿ.ಟಿ ಜಯ ಕುಮಾರ್, ಎಂ.ಸಿ ನಾಣಯ್ಯ, ರವಿಶಂಕರ್ ಶೆಟ್ಟಿಯವರಂತಹ ರಾಜ್ಯ
    ಮಟ್ಟದ ನಾಯಕರೊಂದಿಗೆ ನಿಸ್ವಾರ್ಥವಾಗಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದರು. ಬಳಿಕ ಮಂಗಳೂರು
    ಮಹಾನಗರ ಪಾಲಿಕೆಯ ನಾಮ ನಿರ್ದೆಶನ ಸದಸ್ಯರಾಗಿ ಆಯ್ಕೆಯಾದ ಇವರು, ಜಿಲ್ಲೆಯಲ್ಲಿ ಅಸ್ತಿತ್ವ
    ಕಳಕೊಳ್ಳುವಂತಿದ್ದ ಜೆಡಿಎಸ್ ಪಕ್ಷವನ್ನು ಮತ್ತೆ ಕಟ್ಟಿ ನಿಲ್ಲಿಸಲು ಪ್ರಯತ್ನಿಸಿದರು. ನಂತರದ ದಿನಗಳಲ್ಲಿ ಸ್ವ-
    ಪಕ್ಷೀಯರ ಚುಚು ಮಾತು ಕಿಚ್ಚು, ಮತ್ಸರಗಳಿಂದ ಬೇಸತ್ತು, ಪಕ್ಷದಿಂದ ಹೊರಬಂದ ಯೋಗೀಶರು
    ೨೦೦೯ರಲ್ಲಿ ದಿನ ಬೆಳಗಾಗುವುದರೊಳಗೆ “ತುಳುನಾಡ ರಕ್ಷಣಾ ವೇದಿಕೆ” ಎಂಬ ಜನಪರ – ಜೀವಪರ
    ಸಂಘಟನೆಯನ್ನು ಕಟ್ಟಿ ನಿಲ್ಲಿಸುವುದರ ಮೂಲಕ ತನ್ನ ತಾಕತ್ತು ಏನೆಂಬುದನ್ನು ತೋರಿಸಿಕೊಟ್ಟರು.
    ಹಂತಹಂತವಾಗಿ ಬೆಳೆದ ಈ ಸಂಘಟನೆ ಇದೀಗ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು
    ಜಿಲ್ಲೆಗಳಲ್ಲಿ ಯುವಘಟಕ, ಮಹಿಳಾ ಘಟಕ, ಹೋಟೆಲ್ ಮಾಲಕರ ಘಟಕ, ಕ್ಷೇತ್ರವಾರು
    ಘಟಕಗಳನ್ನೊಳಗೊಂಡು ಬಲಿಷ್ಠವಾಗಿ ಬೆಳೆದು ನಿಂತಿದೆ. ಅಲ್ಲದೆ ದುಬೈ ಸಹಿತ ಹೊರರಾಷ್ಟ್ರಗಳಲ್ಲೂ
    ಸಕ್ರಿಯ ಕಾರ್ಯಕರ್ತರ ತಂಡವನ್ನು ಹೊಂದಿದೆ. ಜಾತಿ, ಮತ, ಧರ್ಮಭೇದವಿಲ ದೆ ಸಾವಿರಾರು
    ಕಾರ್ಯಕರ್ತರು ನಿಸ್ವಾರ್ಥದಿಂದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಾಪಕಾಧ್ಯಕ್ಷ ಯೋಗೀಶ್
    ಶೆಟ್ಟಿಯವರು ತಾನು ಎಷ್ಟೇ ಎತ್ತರಕ್ಕೇರಿದರೂ ಅವರಿಗೆ ಕಾಳಜಿ ಇರುವುದು ಬಡವರ, ದೀನದಲಿತರ,
    ಅನಾಥರ, ದೌರ್ಜನ್ಯಕ್ಕೆ ಒಳಗಾದವರ ಬಗ್ಗೆಯೇ, ಅನ್ಯಾಯ ಎಲ್ಲೇ ನಡೆದರೂ ತುರವೇ ತಕ್ಷಣ ಅಲ್ಲಿ
    ಹಾಜರಾಗಿ, ನ್ಯಾಯಪರ ಹೋರಾಟ ನಡೆಸುತ್ತಾರೆ.


    ಅಸಮರ್ಪಕ ಅನಿಲ ವ್ಯವಸ್ಥೆ, ಮೆಡಿಕ್ಲೈಮ್ ಇನ್ಸೂರೆನ್ಸ್ ಕಂಪೆನಿಯ ಅನ್ಯಾಯ, ರಾಷ್ಟ್ರೀಯ
    ಹೆದ್ದಾರಿಯ ತೇಪೆ ಕಾಮಗಾರಿ ವಿರುದ್ಧ ಧರಣ , ಅಸಮರ್ಪಕ ರಸ್ತೆ ವ್ಯವಸ್ಥೆ, ನೀರಿನ ಸಮಸ್ಯೆ, ಮುಡಿಪು
    ಇನ್ಘೋಸಿಸ್ ಕಂಪೆನಿಯ ಬೋರ್‌ವೆಲ್ ಅಳವಡಿಕೆ ವಿರುದ್ಧ ಹೋರಾಟ, ಹೆದ್ದಾರಿ ಅಗಲೀಕರಣ ವೇಳೆ
    ಸಂತ್ರಸ್ತರಿಗೆ ಹೆಚ್ಚು ರಿ ಪರಿಹಾರ ಮೊತ್ತ ಒದಗu , ವೃಕ್ಷ ಬಿಸಿನೆಸ್ ಸೊಲ್ಯೂಶನ್ ಸೇರಿದಂತೆ ಇತg
    ಕೆಲವು ಬೋಗಸ್ ಹಣಹೂಡಿಕೆ ಕಂಪೆನಿಗಳ ವಿರುದ್ಧ ಹೋರಾಟ, ಕಾರ್ಮಿಕರ, ರಿಕ್ಷಾ ಚಾಲಕರ
    ಸಮಸ್ಯೆಗಳಿಗೆ ಸ್ಪಂದನೆ, ಜಿಲ್ಲಾದ್ಯಂತ ಹದಗೆಟ್ಟ ರಸ್ತೆ, ಒಳಚರಂಡಿ ಅಸಮರ್ಪಕ ನೀರು ಪೂರೈಕೆ ವಿರುದ್ಧ
    ರಾಟ, ಜಪ್ಪು ಕುಡುಪಾಡಿ ಕಟ್ಟಪುಣ ಹಾಗೂ ಮಹಾಕಾಳಿಪಡ್ಪು ರೈಲೆ ಕೆಳಸೇತುವೆ ನಿರ್ಮಾಣಕ್ಕಾಗಿ
    ರಾಟ, ಪೊಲೀಸು, ಸರಕಾರಿ ನೌಕರರಿಗೆ ಮಾಧ್ಯಮ ಪ್ರತಿನಿಧಿಗಳಿಗೆ, ಅನ್ಯಾಯವಾದಾಗ ಸ್ಪಂದನೆ,
    ವಿದೇಶಕ್ಕೆ ಉದ್ಯೋಗಕ್ಕೆ ತೆರಳಿದವರು ವಂಚನೆಗೊಳಗಾದಾಗ ವೀಸಾ ಏಜೆಂಟರುಗಳಲ್ಲಿ ಮಾತುಕv
    ಮೂಲಕ ಸಮಸ್ಯೆ ಪರಿಹಾರ, ತುಳು ಫಿಲ್ಮ್ ನಿರ್ಮಾಪಕರು ಸಂಘ, ತುಳು ಫಿಲ್ಮ್ ಚೇಂಬರ್ ಸ್ಥಾಪನೆಗೆ
    ಒತ್ತಾಯ, ಭಾರತಿ ಶಿಪ್‌ಯಾರ್ಡ್ ವಿರುದ್ಧ ಹೋರಾಟ, ಎತ್ತಿನಹೊಳೆ ಯೋಜನೆ ವಿರುದ್ಧ ಜಾಗೃತಿ
    ಜಾಥಾ- ಇವು ಸಂಘಟನೆಯ ಕೆಲವು ಪ್ರಮುಖ ಸ್ಪಂದನಾ ಕಾರ್ಯಗಳು.
    ಪ್ರತೀ ವರ್ಷ ತನ್ನ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರ, ಅನಾಥಾಶ್ರಮ, ಭಗಿನಿ ಸಮಾಜದಂಥ
    ಸಂಸ್ಥೆಗಳಿಗೆ ಹಣ್ಣು ಹಂಪಲು ಸಹಿತ ಇತರ ಸವಲತ್ತು ವಿತರಿಸುವ ಮೂಲಕ ವಿಶಿಷ್ಟವಾಗಿ
    ಆಚರಿಸುತ್ತಿದ್ದಾರೆ.
    ರಾಣಿ ಅಬ್ಬಕ್ಕದೇವಿ, ಕೆದಂಬಾಡಿ ರಾಮೇಗೌಡ, ಕಲ್ಯಾಣಪ್ಪ ಸೇರಿದಂತೆ ಹಲವು ಹೋರಾಟಗಾರರ
    ನೆನಪಿನ ಕಾರ್ಯ ಕ್ರಮಗಳು, ಕಾನೂನು ಮಾಹಿತಿ ಶಿಬಿರಗಳ ಆಯೋಜನೆ, ವಿವಿಧ ಕ್ಷೇತ್ರಗಳ ಸಾಧಕರಿU
    ಸನ್ಮಾನ- ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳನ್ನು ತು ನಾಡ g ಕ್ಷಣಾ ವೇದಿಕೆ ನೇತೃತ್ವದಲ್ಲಿ
    ಹಮ್ಮಿಕೊಳ್ಳುತ್ತಿದ್ದಾರೆ.
    ಯುವಕರಿಗೆ ಕ್ರೀಡಾ ಪ್ರೋತ್ಸಾಹ ನೀಡುವ ದೃಷ್ಟಿಯಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ
    “ತುಳುನಾಡ ಕಬ್ಬಡಿ” ಎಂಬ ಕ್ರೀಡೆಯನ್ನು ಆಯೋಜಿಸಿದರು ಇದರಲ್ಲಿ ವಿಶೇಷವೇನೆಂದರೆ ಉದ್ಘಾಟನೆ
    ಬಳಿಕ ವಕೀಲರು ಮತ್ತು ಚಲನ ಚಿತ್ರನಟರು ಆಟಕ್ಕೆ ಇಳಿದು ವಿಶೇಷ ಆಕರ್ಷಣೆ ಏರ್ಪಟಿತ್ತು.
    ಅದೇ ರೀತಿ ತುಳುನಾಡ ರಕ್ಷಣಾ ವೇದಿಕೆಯ ದಸಮಾನೋತ್ಸವ ಅಂಗವಾಗಿ “ತೌಳವ
    ಉಚ್ಛಯ” ಎಂಬ 3 ದಿನದ ತುಳು ಸಮ್ಮೇಳನವನ್ನು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದು,
    3 ದಿನಗಳಲ್ಲಿ ದೇಶ – ವಿದೇಶಗಳಿಂದ ಸಾವಿರಾರು ಜನರು ಭಾಗವಹಿಸಿದರು. 3 ದಿನಗಳ
    ಕಾರ್ಯಕ್ರಮಗಳಲ್ಲಿ ಸಂಸ್ಕೃತಿಯನ್ನು ಬಿಂಬಿಸುವ ಕರಕುಶಲ ಪ್ರದರ್ಶನ, ದೈವಾರಾಧನೆ ವಿಚಾರ ಗೋಷ್ಟಿ,
    ಮಹಿಳಾ ಗೋಷ್ಟಿ, ಬಹುಭಾಷಾ ಕವಿಗೋಷ್ಟಿ, ಅಂತರಾಷ್ಟ್ರೀಯ ಪ್ರ್ರಶಸ್ತಿಗಳಾದ ತೌಳವ ಚಕ್ರವರ್ತಿ, ತೌಳ
    ರತ್ನ, ತೌಳವಶ್ರೀ, ಸೇರಿದಂತೆ ಹಲವಾರು ಸಾಧP ಪ್ರಶಸ್ತಿಗಳು ನೀಡಿ ಗೌರವಿಸಿದ್ದು, ಅತ್ಯುತ್ತಮ ಚಲ
    ಚಿತ್ರನಟ, ನಟಿ, ಪೋಷಕ ನಟ, ಮತ್ತು ಮಕ್ಕಳಿಗೆ ಚಲನ ಚಿತ್ರ ಸ್ಪರ್ಧೆ ಏರ್ಪಡಿಸಲಾಯಿತು. ತುಳುನಾಡಿನ
    ಪ್ರಮುಖ ಸ್ವಾಮಿಜಿಗಳಾದ ಒಡಿಯೂರು ಸ್ವಾಮೀಜಿ, ಮಾಣಿಲ ಸ್ವಾಮೀಜಿ, ಕೇಮಾರು ಸ್ವಾಮೀಜಿ,
    ಮುಸ್ಲಿಂ ಧರ್ಮದ ಗುರುಗಳು, ಕ್ರೈಸ್ತ ಧರ್ಮ ಗುರುಗಳು, ಕವಿಗಳು, ಸಾಹಿತಿಗಳು, ವೇದಿಕೆಯಲ್ಲಿ
    ಉಪಸ್ಥಿತರಿದ್ದರು. ತುಳುನಾಡಿನ ಪ್ರಖ್ಯಾತ ನೃತ್ಯ, ಕಲಾ ತಂಡಗಳು, ಕಾರ್ಯಕ್ರಮಗಳನ್ನು ನೀಡಿ
    ಮನೋರಂಜಿಸಿತು. ಪದ್ಮಶ್ರೀ ಡಾ|| ಬಿ.ಎಂ. ಹೆಗ್ಡೆ, ಡಾ|| ರಾಜೇಂದ್ರ ಕುಮಾರ್, ಡಾ|| ಡೇವಿಡ್ ಫ್ರಾಂಕ್
    ಫೆರ್ನಾಂಡಿಸ್, ರವಿ ಟ್ಟಿ ಕತಾರ್, ಕಿಶೋರ್ ಆಳ , ದಯಾನಂದ ಕತ್ತಾಲ್ ಸರ್, ಎ.ಸಿ ಭಂಡಾರಿ,
    ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಪ್ರವೀಣ್ ಶೆಟ್ಟಿ ಪು , ಸಂತೋಷ್ ಶೆಟ್ಟಿ ಪು ,
    ವಿರಾರ್ ಶಂಕರ್ ಟ್ಟಿ, ಕೆ. ದಿವಾಕರ್ ಕದ್ರಿ, ಮುಣಯಾಲ್ ಉದಯ ಶೆಟ್ಟಿ, ಪುತ್ತೂರಾಯ,
    ರಾಜ್‌ಕುಮಾರ್ ಬೆಹರಿನ್, ನವೀದ್ ದುಬೈ, ರಿದಂತೆ ದೇ – ವಿದೇಶದ ಹಲವಾರು ತುಳು/ ಕನ್ನಡ
    ಸೇವೆ ಸಲ್ಲಿಸುತ್ತಿರುವ ಪ್ರಮುಖರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೂಲಕ ತುಳುನಾಡ ರಕ್ಷಣಾ
    ವೇದಿಕೆಯ ಯೋಗೀಶ್ ಶೆಟ್ಟಿಯವರು ಹಲವಾರು ಗಣ್ಯರನ್ನು ತೊಡಗಿಸಿಕೊಂಡು ತೌಳವ ಉಚ್ಛಯ
    ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಫಲವಾಗಿದ್ದಾರೆ.
    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2021ರಲ್ಲಿ ತುಳುನಾಡಿಗೆ ಸಲ್ಲಿಸಿದ ಸೇವೆಯನ್ನು
    ಗುರುತಿಸಿ ’ತುಳುನಾಡ ಯುವ ಪ್ರಶಸ್ತಿ’ಯನ್ನು ಬೆಂಗಳೂರಿನ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಿತು.
    ಕಳೆದ ವರ್ಷ ಎಪ್ರಿಲ್, ಮೇ 2021ರ ಕೊರೊನಾ 2ನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ
    ಸತತ 62 ದಿನಗಳ ಕಾಲ ಮಂಗಳೂರಿನ ವಿವಿಧ ಬಡಾವಣೆಗಳಲ್ಲಿ ಕಾರ್ಮಿಕರಿಗೆ, ನಿರಾಶಿತರಿಗೆ ಮಧ್ಯಾಹ್ನ
    ಹಾಗೂ ರಾತ್ರಿಯ ಭೋಜನಾ ವ್ಯವಸ್ಥೆಯನ್ನು ದಾನಿಗಳ ಸಹಕಾರದಿಂದ ನೀಡಿದ ಸೇವೆಯ ಖ್ಯಾತಿಗೆ
    ತುಳುನಾಡ ರಕ್ಷಣಾ ವೇದಿಕೆ ಪಾತ್ರವಾಗಿದೆ.
    ದಿನಾಂಕ ಜನವರಿ 23.2022ರಿಂದ ಮಾರ್ಚ್ 6.2022ರವರೆಗೆ 40 ದಿನಗಳ ಕಾಲ ಒಂದು
    ಸಾವಿರಕ್ಕೂ ಹೆಚ್ಚು ಅಶಕ್ತರಿಗೆ, ರಾತಿ ಹೊತ್ತು ಅಂಗಡಿ ಮಳಿಗೆಗಳ ಹೊರಗೆ ಮಲಗುವ ನಿರ್ಗತಿಕರಿಗೆ
    ಚಳಿಯನ್ನು ತಡೆಯುವ ಸಲುವಾಗಿ ಹೊದಿಕೆ ನೀಡುವ ಮೂಲಕ ಅಭಿಯಾನವನ್ನು ಕೈಗೊಳ್ಳುವ ಮೂಲಕ
    ತುಳುನಾಡ ರಕ್ಷಣಾ ವೇದಿಕೆಯು ಜನರ ಮನಸೂರೆಗೊಂಡಿತು.
    ಸೇವೆಯನ್ನೇ ಕರ್ತವ್ಯ ಎಂದು ಭಾವಿಸಿರುವ ಸರಳ- ನೇರ – ಮಾನವೀಯ ಅನುಕಂಪ,
    ಆತ್ಮಸ್ಯೈರ್ಯ ಬತ್ತದ ಚಿಲುಮೆಯ ಸಜ್ಜನ ಜನನಾಯಕ, ಯೋಗಿಶ್ ಶೆಟ್ಟಿ ಜಪ್ಪು ಅವರು ಜ್ಞಾನ ಸರಸ್ವತಿ
    ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಸನ್ಮಾನ, ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss