Thursday, February 2, 2023

ಯುವತಿಯ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾದ ಫೇಸ್ಬುಕ್ ಗೆಳೆಯ; ಪ್ರಕರಣ ದಾಖಲು

ಮೈಸೂರು : ಫೇಸ್ ಬುಕ್ ನಲ್ಲಿ ಪರಿಚಯವಿಲ್ಲದ ವ್ಯಕ್ತಿಯ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಮೈಸೂರಿನ ಯುವತಿಯೊಬ್ಬರು ತಮ್ಮ ಸ್ಕೂಟರ್ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕ...
More

  Latest Posts

  ರಂಗ ಕಲಾವಿದ ಅರವಿಂದ್ ಬೋಳಾರ್ ಗೆ ಅಪಘಾತ – ಆಸ್ಪತ್ರೆಗೆ ದಾಖಲು

  ಮಂಗಳೂರು: ಖ್ಯಾತ ರಂಗಕಲಾವಿದ ತುಳುನಾಡ ಮಾಣಿಕ್ಯ ಎಂದೇ ಖ್ಯಾತರಾಗಿರುವ ಅರವಿಂದ್ ಬೋಳಾರ್ ಅವರಿಗೆ ಪಂಪ್ ವೆಲ್ ಬಳಿ ಅಪಘಾತವಾಗಿದೆ. ಪಂಪ್ ವೆಲ್ ಬಳಿ ಅತೀ ವೇಗವಾಗಿ...

  ಲಯನ್ಸ್ ಕ್ಲಬ್ ಮಂಗಳಾದೇವಿ ವತಿಯಿಂದ ಶಾಲಾ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಸಂಭ್ರಮ

  ಮಂಗಳೂರು: 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ನಗರದ ನೋಬಲ್ ಸ್ಕೂಲ್ ಕುಂಜತ್ ಬೈಲ್ ನಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ರಾಷ್ಟ್ರ ಧ್ವಜಾರೋಹಣ ಗೈದು...

  ಪದವು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವ

  ಮಂಗಳೂರು: ಪದವು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮವನ್ನು ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಮತ್ತು...

  74ನೇ ಗಣರಾಜ್ಯೋತ್ಸವದ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್‌ ಕಟ್ಟಡದಲ್ಲಿ ಧ್ವಜಾರೋಹಣ

  ಕೋಟೆಕಾರು ಪಟ್ಟಣ ಪಂಚಾಯತ್‌ ಕಟ್ಟಡದಲ್ಲಿ 74 ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕೋಟೆಕಾರು ಪಟ್ಟಣ ಪಂಚಾಯತ್‌ನ ಕೌನ್ಸಿಲರ್‌ ರಾಘವ ಗಟ್ಟಿಯವರು ಧ್ವಜಾರೋಹಣಗೈದರು.ಬಳಿಕ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

  ರಕ್ತದಾನ, ಸಮಾಜಮುಖಿ ಸೇವೆ ಮೂಲಕ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗಿಶ್‌ ಶೆಟ್ಟಿ ಜೆಪ್ಪುರವರ ಹುಟ್ಟು ಹಬ್ಬ ಆಚರಣೆ

  ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಶ್ರೀ ಯೋಗಿಶ್‌ ಶೆಟ್ಟಿ ಜೆಪ್ಪುರವರ ಹುಟ್ಟು ಹಬ್ಬದ ಆಚರಣೆ ಅಂಗವಾಗಿ ಅ.29 (ಶನಿವಾರ) ರಂದು ಇಂಡಿಯನ್‌ ರೆಡ್ ಕ್ರಾಸ್‌ ಸೊಸೈಟಿ ದ.ಕ ಬ್ಲಡ್‌ ಬ್ಯಾಂಕ್‌,ಲೇಡಿಗೋಶನ್‌,ಮಹಿಳಾ ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಬ್ಲಡ್‌ ಬ್ಯಾಂಕ್‌ ಗಳಲ್ಲಿ 10.30 ಗಂಟೆಯಿಂದ ತುಳುನಾಡ ರಕ್ಷಣಾ ವೇದಿಕೆ ಯುವ ಘಟಕ ವತಿಯಿಂದ ರಕ್ತದಾನ ನಡೆಯಿತು. ಯೋಗೀಶ್ ಶೆಟ್ಟಿ ಜಪ್ಪು ರವರು ಸ್ವತಃ ರಕ್ತದಾನ ಮಾಡುವುದರ ಮೂಲಕ ರಕ್ತದಾನ ಶಿಬಿರ ಕ್ಕೆ ಚಾಲನೆ ನೀಡಿದರು. ಬಳಿಕ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಂತರಾಷ್ಟ್ರೀಯ ಗೌರವಾಧ್ಯಕ್ಷರಾದ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡೀಸ್ ರವರು ರಕ್ತದಾನದ ಬಗ್ಗೆ ಹಿತನುಡಿಗಳನ್ನಾಡಿದರು. ಒಂದು ಯೂನಿಟ್ ರಕ್ತ ನೀಡುವುದರ ಮೂಲಕ ಮೂರು ಜೀವಗಳನ್ನು ಉಳಿಸಬಹುದು.ಅದ್ದರಿಂದ ಪ್ರತಿಯೊಬ್ಬರು ರಕ್ತದಾನ ನೀಡಬೇಕೆಂದು ಮನವಿ ಮಾಡಿದರು.

  ಬಳಿಕ ಮಹಿಳಾ ಘಟಕದ ವತಿಯಿಂದ ಜಪ್ಪು ಮಾರ್ಕೆಟ್ ಬಳಿಯ ಭಗಿನಿ ಸಮಾಜ ಆಶ್ರಮಕ್ಕೆ ತೆರಳಿ ಹಣ್ಣು ಹಂಪಲು ಹಾಗೂ ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಬಳಿಕ ವಾಮದ ಪದವು ಘಟಕ ವತಿಯಿಂದ ವಾಮದಪದವು ಆರೋಗ್ಯ ಕೇಂದ್ರ, ಬಂಟ್ವಾಳ ಸರಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಆಶ್ರಮಗಳಲ್ಲಿ ಹಣ್ಣು ಹಂಪಲು ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು.

  ಸಂಜೆ 8.00 ಗಂಟೆಗೆ ಮಂಗಳೂರು ನಗರ ಪಾಲಿಕೆ ವಸತಿ ರಹಿತರ ಆಶ್ರಯ ಕೇಂದ್ರ ಬಂದರುನಲ್ಲಿ ಕೇಕ್‌ ಕತ್ತರಿಸಿದರು. ಹಿರಿಯ ಕಾರ್ಮಿಕ ನಿರೀಕ್ಷಕಾರಾದ ಮೇರಿಯವರು ಕಾರ್ಮಿಕ ಕಾರ್ಡ್ ವಿತರಿಸಿ ಕಟ್ಟಡ ಕಾರ್ಮಿಕರ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಆಶ್ರಮ ವಾಸಿಗಳೊಂದಿಗೆ ಬೋಜನ ಸ್ವೀಕರಿಸಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಲಾಯಿತು.

  ಈ ಸಂದರ್ಭದಲ್ಲಿ ಬಹುಭಾಷಾ ಚಲನಚಿತ್ರ ನಟ ಲ್ಯಾರಿ ಫೆರ್ನಾಂಡೀಸ್, ರೆಡ್ ಕ್ರಾಸ್ ಅಧಿಕಾರಿ ಪ್ರವೀಣ್,
  ಹಿರಿಯ ಕಾರ್ಮಿಕ ನಿರೀಕ್ಷಕಾರಾದ ಮೇರಿ,ಮಂಗಳೂರು ನಗರ ಪಾಲಿಕೆ ವಸತಿ ರಹಿತರ ಕೇಂದ್ರದ ಆಡಳಿತಾಧಿಕಾರಿಯಾದ ಎಂ.ಪಿ.ಶೆಣೈ, ಮಹಿಳಾ ಅದ್ಯಕ್ಷೆ ಆಶಾ ಶೆಟ್ಟಿ ಅತ್ತಾವರ ,ಯುವ ಘಟಕ ಅದ್ಯಕ್ಷ ಹರೀಶ್ ಶೆಟ್ಟಿ ಶಕ್ತಿ ನಗರ, ಮುಖಂಡರು ಗಳಾದ ಜ್ಯೋತಿಕಾ ಜೈನ್, ಕಾವೇರಿ ರೈ ಬೋಳಾರ, ರಾದಿಕಾ ಕೂಳೂರು,ರೋಶನ್ ಡಿ ಸೋಜ, ಫಾರೂಕ್ ಗೋಲ್ಡನ್ ಬಂದರು, ಕ್ಲಿಟಸ್ ಲೋಬೊ,ಶಾರದಾ ಶೆಟ್ಟಿ ಕದ್ರಿ, ವೀಣಾ ಶೆಟ್ಟಿ ಕೊಟ್ಟಾರ, ನೀತಾ ಹರೀಶ್ ಶೆಟ್ಟಿ, ಪೇರಿ ಡಿ’ಸೋಜ ಉರ್ವ, ಗೈಟನ್ ಡಿ’ಸೋಜ ಬಿರ್ಕನಕಟ್ಟೆ, ಜನಾರ್ದನ್ ಬೇಂಗ್ರೆ,ಮೋಹನ್ ಶೆಟ್ಟಿ ಪಾವೂರು, ಅಕ್ಷಯ್ ಆಚಾರ್ಯ ಬಜ್ಜೊಡಿ, ರಾಕಿ ಅಲ್ಮೆಡಾ, ಮತ್ತಿತರರು ಉಪಸ್ಥಿತರಿದ್ದರು.

  ಪ್ರಶಾಂತ್ ಭಟ್ ಕಡಬ ಕಾರ್ಯಕ್ರಮ ನಿರೂಪಿಸಿದರು.

  Latest Posts

  ರಂಗ ಕಲಾವಿದ ಅರವಿಂದ್ ಬೋಳಾರ್ ಗೆ ಅಪಘಾತ – ಆಸ್ಪತ್ರೆಗೆ ದಾಖಲು

  ಮಂಗಳೂರು: ಖ್ಯಾತ ರಂಗಕಲಾವಿದ ತುಳುನಾಡ ಮಾಣಿಕ್ಯ ಎಂದೇ ಖ್ಯಾತರಾಗಿರುವ ಅರವಿಂದ್ ಬೋಳಾರ್ ಅವರಿಗೆ ಪಂಪ್ ವೆಲ್ ಬಳಿ ಅಪಘಾತವಾಗಿದೆ. ಪಂಪ್ ವೆಲ್ ಬಳಿ ಅತೀ ವೇಗವಾಗಿ...

  ಲಯನ್ಸ್ ಕ್ಲಬ್ ಮಂಗಳಾದೇವಿ ವತಿಯಿಂದ ಶಾಲಾ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಸಂಭ್ರಮ

  ಮಂಗಳೂರು: 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ನಗರದ ನೋಬಲ್ ಸ್ಕೂಲ್ ಕುಂಜತ್ ಬೈಲ್ ನಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ರಾಷ್ಟ್ರ ಧ್ವಜಾರೋಹಣ ಗೈದು...

  ಪದವು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವ

  ಮಂಗಳೂರು: ಪದವು ಬಿಕರ್ನಕಟ್ಟೆ ಸರಕಾರಿ ಶಾಲೆಯಲ್ಲಿ 74 ನೇ ಗಣರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ಕಾರ್ಯಕ್ರಮವನ್ನು ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಮತ್ತು...

  74ನೇ ಗಣರಾಜ್ಯೋತ್ಸವದ ಅಂಗವಾಗಿ ಕೋಟೆಕಾರು ಪಟ್ಟಣ ಪಂಚಾಯತ್‌ ಕಟ್ಟಡದಲ್ಲಿ ಧ್ವಜಾರೋಹಣ

  ಕೋಟೆಕಾರು ಪಟ್ಟಣ ಪಂಚಾಯತ್‌ ಕಟ್ಟಡದಲ್ಲಿ 74 ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕೋಟೆಕಾರು ಪಟ್ಟಣ ಪಂಚಾಯತ್‌ನ ಕೌನ್ಸಿಲರ್‌ ರಾಘವ ಗಟ್ಟಿಯವರು ಧ್ವಜಾರೋಹಣಗೈದರು.ಬಳಿಕ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

  Don't Miss

  ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು; 80 ಲಕ್ಷ ರೂ. ದರೋಡೆ

  ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು, ಕಾರಿನಲ್ಲಿ ತೆರಳುತ್ತಿದ್ದವರಿಂದ 80 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೇವಲ 15 ನಿಮಿಷದಲ್ಲಿ 80 ಲಕ್ಷ ರೂ. ಹಣವನ್ನು...

  ಕೋಟ : ಪಡುಕರೆ ನಿವಾಸಿ ಕತಾರ್ ನಲ್ಲಿ ಕುಸಿದು ಬಿದ್ದು ಸಾವು

  ಕೋಟ: ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಟ ಸಮೀಪ ಕೋಟ ತಟ್ಟು ಪಡುಕರೆ ನಿವಾಸಿ ಮುಹಮ್ಮದ್‌ (45) ಕತಾರ್‌ನಲ್ಲಿ ಗುರುವಾರ ಬೆಳಗ್ಗೆ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ಮೃತರು ತಾಯಿ,...

  ಸಂಕ್ರಾಂತಿ ಬಳಿಕ ಕೇಂದ್ರ ಸಂಪುಟ ವಿಸ್ತರಣೆ?

  ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿಯವರು ಚಿಂತನೆ ನಡೆಸುತ್ತಿದ್ದು, ಜ.14ರ ಬಳಿಕ ಬದಲಾವಣೆ ಸಾಧ್ಯತೆ ಇದೆ. ಬಿಜೆಪಿ ಸಂಘಟನೆಯನ್ನು ಬಲಪಡಿಸುವುದು...

  BIGG NEWS : ‘ರಿಷಭ್ ಪಂತ್’ಗೆ ಗಂಭೀರ ಗಾಯ ; ‘ಉತ್ತಮ ಆರೋಗ್ಯ & ಯೋಗಕ್ಷೇಮ’ಕ್ಕಾಗಿ ಪ್ರಧಾನಿ ಮೋದಿ ಪ್ರಾರ್ಥನೆ

  ನವದೆಹಲಿ: ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಶುಕ್ರವಾರ ಬೆಳಿಗ್ಗೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಹಿಂತಿರುಗುವಾಗ ಅಪಘಾತಕ್ಕೀಡಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. 'ಖ್ಯಾತ ಕ್ರಿಕೆಟಿಗ ರಿಷಭ್ ಪಂತ್...

  ಡಿ.31 ರಿಂದ ಜ.1 ರವರೆಗೆ ಒಳಗುಡ್ಡೆ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠೆ, ದೊಂದಿ ನೇಮೋತ್ಸವ

  ಬಂಟ್ವಾಳ: ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಒಳಗುಡ್ಡೆ ಕಾಂಬೋಡಿಗುತ್ತು ಶ್ರೀ ಉಗ್ಗೆದಲ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ಪ್ರತಿಷ್ಠಾ ದೊಂದಿ ನೇಮೋತ್ಸವ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ...