Monday, November 28, 2022

ಉಡುಪಿ: ಕೆಲಸದ ಮನೆಯ ಚಿನ್ನ ಕದ್ದ ಹೋಮ್ ನರ್ಸ್ ಅಂದರ್

ಹಿರಿಯಡ್ಕ: ವೃದ್ಧ ಮಹಿಳೆಯ ಆರೈಕೆಗೆಂದು ಬಂದ ಹೋಮ್ ನರ್ಸ್ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಒಂದೂವರೆ ಲಕ್ಷ ರೂ. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿದ್ದಳು.ಇದೀಗ ಪೊಲೀಸರು...
More

    Latest Posts

    ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನೂತನ ಗೋಪುರಕ್ಕೆ ಶಿಲಾನ್ಯಾಸ

    ಮೂಡುಬಿದಿರೆ: ಶ್ರೀ ಆದಿಬ್ರಹ್ಮ ದೇವಸ್ಥಾನ ಶ್ರೀ ಕ್ಷೇತ್ರ ಬನ್ನಡ್ಕ ಪಡುಮಾರ್ನಾಡು ಇಲ್ಲಿ  ನೂತನ ಗೋಪುರದ ಶಿಲಾನ್ಯಾಸ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

    ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

    ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

    ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

    ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

    ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

    ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

    ಯೋಗಿಶ್ ಶೆಟ್ಟಿ ಜಪ್ಪು ರವರಿಗೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ

    ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಯೋಗೀಶ್‌ ಶೆಟ್ಟಿ ಜೆಪ್ಪುರವರು ಬಾಜನರಾಗಿದ್ದಾರೆ.
    ಇಂದು ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಇಂಧನ, ಕನ್ನಡ ಮತ್ತು‌ ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಮತ್ತು ಸಂಸದ ನಳೀನ್‌ ಕುಮಾರ್‌ ಕಟೀಲ್‌ ಹಾಗೂ ದ.ಕ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಮಾಜ ಸೇವೆ ಕ್ಷೇತ್ರದ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದರು.
    ಹಲವಾರು ಜನಪರ ಕೆಲಸ ಕಾರ್ಯಗಳಲ್ಲಿ ಗುರುತಿಸಿ, ತುಳುನಾಡ ಸಾರಥಿ ಎಂದೇ ಹೆಸರುವಾಸಿಯಾಗಿ, ತುಳುನಾಡಿನ ಜನಪ್ರಿಯ ಸಂಘಟನೆಯಾದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಪ್ರತಿಷ್ಠಿತ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿವುದು ತುಳುನಾಡಿನ ಜನತೆ ಪ್ರಸಂಸಿದ್ದಾರೆ.

    This image has an empty alt attribute; its file name is WhatsApp-Image-2022-11-01-at-5.47.04-PM-1024x915.jpeg

    ತುಳುನಾಡ ರಕ್ಷಣಾ ವೇದಿಕೆಯು ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತೃತ್ವದಲ್ಲಿ ಕಳೆದ 14 ವರ್ಷಗಳಿಂದ ನಿರಂತರವಾಗಿ ತುಳುನಾಡಿನ ನೆಲ, ಜಲ ಹಾಗೂ ತುಳುನಾಡಿನ ಆಚಾರ ವಿಚಾರ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಹಾಗೂ ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಆಗ್ರಹವನ್ನು ಕಾನೂನು ರೀತಿಯಲ್ಲಿ ಹೋರಾಟ (ಪ್ರತಿಭಟನೆ, ಧರಣಿ, ಉಪವಾಸ ಸತ್ಯಾಗ್ರಹ) ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತ ನಿರಂತರವಾಗಿ ನಡೆಸುತ್ತ ಬರುತ್ತಿದೆ.


    ಸಂಘಟನೆಯು ತುಳು ಲಿಪಿಯ ಪ್ರಚಾರ, ತುಳುನಾಡಿನ ಪರಂಪರೆ, ಸಂಸ್ಕೃತಿಯನ್ನು ಜಗತ್ತಿನ ಜನರಿಗೆ ಪರಿಚಯಿಸುವ ದೃಷ್ಠಿಯಿಂದ 2019ರಲ್ಲಿ ಮಂಗಳೂರಿನಲ್ಲಿ 3 ದಿನಗಳ ತೌಳವ ಉಚ್ಛಯ ಎಂಬ ವಿಶ್ವ ತುಳುವರ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣ, ಸಂಗೀತ, ನೃತ್ಯ ನಾಟಕ ತುಳು ಸಿನಿಮಾಗೆ ಸಂಬಂಧಿಸಿದ ಮನರಂಜನೆ ಕಾರ್ಯಕ್ರಮಗಳು ನಡೆದೆವು. ಹಾಗೂ ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ತುಳುವರನ್ನು ತೌಳವ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಯಿತು. 2021 ರಲ್ಲಿ ವಿಶ್ವದ್ಯಾದಂತ ಕೊರೊನಾ 2ನೇ ಅಲೆಯ ರಣಕೇಕೆ ವೇಳೆ ಕರ್ನಾಟಕ ಲೌಕ್‌ಡೌನ್ ಆದ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಿರಂತರವಾಗಿ 62 ದಿನಗಳ ಕಾಲ ಕೂಲಿ ಕಾರ್ಮಿಕರು ನಿರ್ಗತಿಕರಿಗೆ ಅನ್ನದಾನ ಸೇವೆ ಮಾಡಿದ ಕೀರ್ತಿ ಸಂಘಟನೆಗೆ ಸಲ್ಲುತ್ತದೆ. ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2020 ರಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರಿಗೆ ತುಳುನಾಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಯುವ ಸಾಧಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿತ್ತು. ಇದೀಗ ಪ್ರತಿಷ್ಠಿತ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ್ದಾರೆ

    ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರ ಡಿ. ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮ,ಪೊಲೀಸ್‌ ಆಯುಕ್ತ ಎನ್.ಶಶಿಕುಮಾರ್‌,ಅಪರ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ರಿಷಿಕೇಶ್‌ ಭಗವಾನ್‌ ಸೋನಾವಾನೆ,ಮಹಾನಗರ ಪಾಲಿಕೆ ಆಯುಕ್ತರಾದ ಅಕ್ಷಯ್‌ ಶ್ರೀಧರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಹಾಗೂ ಇತರೆ ಗಣ್ಯರು ಭಾಗವಹಿಸಿದ್ದರು.

    This image has an empty alt attribute; its file name is WhatsApp-Image-2022-11-01-at-5.47.05-PM-1-1024x957.jpeg

    Latest Posts

    ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನೂತನ ಗೋಪುರಕ್ಕೆ ಶಿಲಾನ್ಯಾಸ

    ಮೂಡುಬಿದಿರೆ: ಶ್ರೀ ಆದಿಬ್ರಹ್ಮ ದೇವಸ್ಥಾನ ಶ್ರೀ ಕ್ಷೇತ್ರ ಬನ್ನಡ್ಕ ಪಡುಮಾರ್ನಾಡು ಇಲ್ಲಿ  ನೂತನ ಗೋಪುರದ ಶಿಲಾನ್ಯಾಸ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.

    ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

    ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

    ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

    ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

    ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

    ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

    Don't Miss

    ವಿದ್ಯಾಭರಣ್ ಜೊತೆ ನಿಶ್ಚಿತಾರ್ಥ: ಮೊದಲಿಗೇ ಗೊತ್ತಾಗಿದ್ದು ಒಳ್ಳೆಯದಾಯ್ತು..ಒಂದು ವೇಳೆ ಮದುವೆ ಆದ್ಮೇಲೆ ಗೊತ್ತಾದ್ರೆ ಕಷ್ಟ ಆಗ್ತಿತ್ತು: ನಟಿ ವೈಷ್ಣವಿ ಗೌಡ

    ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ, ಕನ್ನಡ ಕಿರುತೆರೆಯ ನಟಿ ವೈಷ್ಣವಿ ಗೌಡ ನಿಶ್ಟಿತಾರ್ಥ ಇದೀಗ ವಿವಾದಕ್ಕೆ ಕಾರಣವಾಗಿದ್ದು, ನಿಶ್ಟಿತಾರ್ಥದ ಪೋಟೋ ವೈರಲ್ ಆದ ಬೆನ್ನಲ್ಲೇ ಇದೀಗ ವೈಷ್ಣವಿ ನಿಶ್ಟಿತಾರ್ಥ...

    ಚಾರ್ಮಾಡಿ : ಆಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿ

    ಚಿಕ್ಕಮಗಳೂರು: ಅಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ...

    ಡಿ.2 ರಂದು ತುಳುವಿನಲ್ಲಿ ಕಾಂತಾರ ಬಿಡುಗಡೆ

    ಬೆಂಗಳೂರು: ಕೊನೆಗೂ ತುಳು ಭಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಡಿಸೆಂಬರ್ 2 ರಂದು ತುಳು ಬಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾಗಲಿದೆ. ಕಾಂತಾರ ಇದೀಗ ಬಿಡುಗಡೆಯಾದ...

    ಮದುವೆಗೆ ಒಪ್ಪದ ಮಗಳನ್ನೇ ಕತ್ತು ಸೀಳಿ ಕೊಂದ ತಾಯಿ!

    ಕುಟುಂಬದವರು ನೋಡಿದ ಹುಡುಗನನ್ನು ಮದುವೆ ಆಗಲು ಒಪ್ಪಲಿಲ್ಲ ಅಂತ 20 ವರ್ಷದ ಮಗಳನ್ನೇ ತಾಯಿ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಉಡುಪಿ: ರೋಸ್ ಸಮಾರಂಭದಲ್ಲಿ ಯುವತಿ ಕುಸಿದು ಬಿದ್ದು ಸಾವು

    ಉಡುಪಿ: ಕ್ರಿಶ್ಚಿಯನ್ನರ ಮನೆಯಲ್ಲಿ ನಡೆಯುವ ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿಯೊಬ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಹಾವಂಜೆ...