Tuesday, September 17, 2024
spot_img
More

    Latest Posts

    ಉಡುಪಿಗೆ ಡಿ. 25ರಂದು ಯೋಗಿ ಆದಿತ್ಯನಾಥ್‌ ಭೇಟಿ

    ಉಡುಪಿಯಲ್ಲಿ ಡಿ. 25ರಂದು ಕರ್ನಾಟಕ ಯುವ ಮತದಾರರ ಸಮಾವೇಶ ನಡೆಯಲಿದ್ದು, ಅದಕ್ಕೆ ಉತ್ತರಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಆಗಮಿಸಲಿದ್ದಾರೆ. ಎಲ್ಲ ಹೊಸ ಮತದಾರರು ಸಮಾವೇಶದಲ್ಲಿ ಭಾಗ ವಹಿಸಿ ಬಿಜೆಪಿಯೊಂದಿಗಿದ್ದೇವೆ ಎಂಬ ಸಂದೇಶವನ್ನು ನೀಡ ಬೇಕು ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

    ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಉಳ್ಳಾಲವೂ ಸೇರಿದಂತೆ ಈ ವರ್ಷ ದ.ಕ. ಜಿಲ್ಲೆ ಮತ್ತು ಉಡುಪಿಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂದು ವಿಶೇಷ ತಂತ್ರಗಾರಿಕೆ ರೂಪಿಸಿಕೊಂಡು ಹೊರಟಿದ್ದೇವೆ ಎಂದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss