Saturday, October 5, 2024
spot_img
More

    Latest Posts

    ತುಳುನಾಡ ರಕ್ಷಣಾ ವೇದಿಕೆ (ರಿ) ಮುಂಬೈ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಯಶು ಪಕ್ಕಳ ತಲಪಾಡಿ ಆಯ್ಕೆ

    ಮಂಗಳೂರು ಸರಕಾರಿ ಕಾಲೇಜಿನ ಹಳೆ ವಿದ್ಯಾರ್ಥಿ ಯಾಗಿದ್ಧು ತದನಂತರ ವೃತ್ತಿ ಯಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಾಹಿಸುತ್ತಿದ್ದು ಇದರ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಇವರು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದಾರೆ. ಈ ಹಿಂದೆ ಇವರು ತಲಪಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಗೊಂಡು ಜನಸೇವೆ ಮಾಡಿರುತ್ತಾರೆ. ಇದೀಗ ತುಳುನಾಡ ರಕ್ಷಣಾ ವೇದಿಕೆಯ ಮುಂಬೈ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪಕ್ಕಳ ರವರು 2009 ರಲ್ಲಿ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಸ್ಥಾಪನೆ ಗೊಂಡ ತುಳುನಾಡ ರಕ್ಷಣಾ ವೇದಿಕೆ ದೇಶ ವಿದೇಶಗಳಲ್ಲಿ ಘಟಕ ಗಳನ್ನು ಹೊಂದಿದ್ದು . ಮುಂಬೈ ಯಲ್ಲಿ ಲಕ್ಷಾಂತರ ತುಳುವರು ತನ್ನ ಬದುಕು ಕಟ್ಟಿಕೊಳ್ಳಲು ನೆಲೆಸಿದ್ದು ತುಳುನಾಡ ರಕ್ಷಣಾ ವೇದಿಕೆ ಸಂಘಟನೆ ಬಲಪಡಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಧಾರ್ಮಿಕ ಮಾರ್ಗದರ್ಶಕರಾದ ಶ್ರೀ ಶ್ರೀ ದುರ್ಗಾನಂದ ಸ್ವಾಮೀಜಿ , ಉಪಾಧ್ಯಕ್ಷರಾದ ಶ್ರೀ ಜೆ. ಇಬ್ರಾಹಿಂ, ಪ್ರದಾನ ಕಾರ್ಯದರ್ಶಿ ಕೆ.ವಿವೇಕಾನಂದ ರಾವ್, ಕೋಶಾಧಿಕಾರಿ ಪ್ರಶಾಂತ್ ಪೂಜಾರಿ, ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಡೊಲ್ಪಿ ಡಿಸೋಜ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss