Thursday, March 30, 2023

BREAKING NEWS : ರಾಜ್ಯದ 5 ಮತ್ತು 8 ನೇ ತರಗತಿಗೆ ‘ಪಬ್ಲಿಕ್ ಪರೀಕ್ಷೆ’ ನಡೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. 5 ಮತ್ತು 8...
More

    Latest Posts

    ಕಡಬ: ನಾಪತ್ತೆಯಾಗಿದ್ದ ವಿದ್ಯಾರ್ಥಿ ನದಿಯಲ್ಲಿ ಮೃತದೇಹ ಪತ್ತೆ..!

    ಕಡಬ: ಕುಮಾರಧಾರಾ ನದಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಕೋಡಿಂಬಾಳ ಗುಂಡಿಮಜಲ್ ನಿವಾಸಿ ಮಂಜುನಾಥ್ ಎಂಬವರ ಮಗ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ (15).

    ಕಡಬ: ದೈವ ನರ್ತನದ ವೇಳೆ ಕುಸಿದು ಬಿದ್ದು ದೈವ ನರ್ತಕ ಸಾವು

    ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಮೃತಪಟ್ಟ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ದೈವ ನರ್ತಕ ಕಾಂತು ಅಜಿಲ ಮೂಲಂಗೀರಿ...

    ಬೆಂದೂರ್ ವೆಲ್ ಸರ್ಕಲ್ ನಲ್ಲಿ ಮಹಿಳೆಗೆ ಬಸ್ ಡಿಕ್ಕಿ – ಮಹಿಳೆ ಸಾವು

    ಮಂಗಳೂರು: ಬೆಂದೂರ್ ವೆಲ್ ಸರ್ಕಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ನಡೆದಿದೆ. ಬಸ್ ಪತ್ತೆ...

    ಕರ್ನಾಟಕ ವಿಧಾನಸಭೆ ಚುನಾವಣೆ : ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಇದೇ ಮೊದಲ ಬಾರಿಗೆ ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ...

    ನ.21ರಿಂದ ‘ ಸಪ್ತ ವಿಜಯ ‘ ಯಕ್ಷಗಾನ ತಾಳ ಮದ್ದಳೆ ಸಪ್ತಾಹ

    ಮಂಗಳೂರು: ‘ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಹತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ದಶಮಾನೋತ್ಸವಕ್ಕೆ ಸಜ್ಜಾಗಿದೆ’ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ. ‘ ಇತ್ತೀಚೆಗೆ ಜರಗಿದ ಪೂರ್ವ ಸಿದ್ಧತಾ ಸಭೆಯಲ್ಲಿ ‘2022 ನವೆಂಬರ್ 21ರಿಂದ 27ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಶಮಾನ ಸಂಭ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ’ ಎಂದರು.
    ಹತ್ತನೇ ವರ್ಷದ ನುಡಿ ಹಬ್ಬ:
    ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಹತ್ತನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ನಡೆಯಲಿದೆ.
    ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲದೆ ಪ್ರತಿದಿನ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಲಾಪವನ್ನೂ ಏರ್ಪಡಿಸಲಾಗಿದೆ.

    ‘ ಸಪ್ತ ವಿಜಯ ‘ ಪ್ರಸಂಗ ಸರಣಿ:
    ದಶಮಾನೋತ್ಸವದ ಅಂಗವಾಗಿ ‘ಸಪ್ತ ವಿಜಯ’ ಪ್ರಸಂಗ ಸರಣಿಯನ್ನು ಸಂಯೋಜಿಸಿಕೊಳ್ಳಲಾಗಿದೆ. ನವೆಂಬರ 21ರಂದು ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗುವ ಯಕ್ಷಗಾನ ತಾಳಮದ್ದಳೆ ಕ್ರಮವಾಗಿ ಷಡಾನನ ವಿಜಯ, ವಾನರೇಶ್ವರ ವಿಜಯ, ವೀರಾಂಜನೇಯ ವಿಜಯ, ಭೀಮಸೇನ ವಿಜಯ, ವಿಕ್ರಮಾರ್ಜುನ ವಿಜಯ, ಸ್ವರಾಜ್ಯ ಸ್ವಾತಂತ್ರ್ಯ ವಿಜಯ ಮತ್ತು ಯಕ್ಷ ಲೋಕ ವಿಜಯ ಎಂಬ ಏಳು ಪ್ರಸಂಗಗಳನ್ನು ಪ್ರಸ್ತುತಪಡಿಸಲಾಗುವುದು. ದಿನಾಂಕ 27ರಂದು ಸಮಾರೋಪಕ್ಕೆ ಮುನ್ನ ‘ಸಿರಿಕಿಟ್ಣ ವಿಜಯೊ’ ಎಂಬ ತುಳು ಪ್ರಸಂಗವನ್ನೂ ಸಾಂದರ್ಭಿಕವಾಗಿ ಅಳವಡಿಸಿಕೊಳ್ಳಲಾಗಿದೆ.
    ಸಂಸ್ಮರಣೆ – ಪ್ರಶಸ್ತಿ ಪ್ರದಾನ:
    ಯಕ್ಷಾಂಗಣದ ವತಿಯಿಂದ ಯಕ್ಷಗಾನದ ಕಲಾಪೋಷಕರೊಬ್ಬರಿಗೆ ನೀಡುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ಹಿರಿಯ ಕಲಾವಿದರಿಗೆ ಕೊಡ ಮಾಡುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ಗೆ ಅರ್ಹರಾದ ಹಿರಿಯ ಸಾಧಕರನ್ನು ಆರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಲ್ಲದೆ ಅಗಲಿದ ಕಲಾವಿದರ ಸಂಸ್ಮರಣ ಕಾರ್ಯಕ್ರಮವನ್ನು ಪ್ರತಿ ದಿನ ನಡೆಸಲಾಗುವುದು ಎಂದು ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.
    ಯಕ್ಷಾಂಗಣದ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷರಾದ ಬೆಟ್ಟಂಪಾಡಿ ಸುಂದರಶೆಟ್ಟಿ, ರವೀಂದ್ರ ರೈ ಹರೇಕಳ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ , ಜೊತೆ ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ, ಮಹಿಳಾ ಪ್ರತಿನಿಧಿಗಳಾದ ನಿವೇದಿತಾ ಎನ್. ಶೆಟ್ಟಿ ಮತ್ತು ಸುಮಾ ಪ್ರಸಾದ್ ಸಭೆಯಲ್ಲಿ ಭಾಗವಹಿಸಿದ್ದರು.

    Latest Posts

    ಕಡಬ: ನಾಪತ್ತೆಯಾಗಿದ್ದ ವಿದ್ಯಾರ್ಥಿ ನದಿಯಲ್ಲಿ ಮೃತದೇಹ ಪತ್ತೆ..!

    ಕಡಬ: ಕುಮಾರಧಾರಾ ನದಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಕೋಡಿಂಬಾಳ ಗುಂಡಿಮಜಲ್ ನಿವಾಸಿ ಮಂಜುನಾಥ್ ಎಂಬವರ ಮಗ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ (15).

    ಕಡಬ: ದೈವ ನರ್ತನದ ವೇಳೆ ಕುಸಿದು ಬಿದ್ದು ದೈವ ನರ್ತಕ ಸಾವು

    ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಮೃತಪಟ್ಟ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ದೈವ ನರ್ತಕ ಕಾಂತು ಅಜಿಲ ಮೂಲಂಗೀರಿ...

    ಬೆಂದೂರ್ ವೆಲ್ ಸರ್ಕಲ್ ನಲ್ಲಿ ಮಹಿಳೆಗೆ ಬಸ್ ಡಿಕ್ಕಿ – ಮಹಿಳೆ ಸಾವು

    ಮಂಗಳೂರು: ಬೆಂದೂರ್ ವೆಲ್ ಸರ್ಕಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ನಡೆದಿದೆ. ಬಸ್ ಪತ್ತೆ...

    ಕರ್ನಾಟಕ ವಿಧಾನಸಭೆ ಚುನಾವಣೆ : ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಇದೇ ಮೊದಲ ಬಾರಿಗೆ ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ...

    Don't Miss

    BIGG NEWS : ಕೇಂದ್ರ ಸಚಿವರ ಮಹತ್ವದ ಘೋಷಣೆ, 6 ತಿಂಗಳಲ್ಲಿ ‘ಟೋಲ್ ಪ್ಲಾಜಾ’ ಬಂದ್, ‘GPS’ ವ್ಯವಸ್ಥೆ ಜಾರಿ.!

    ನವದೆಹಲಿ : ನೀವು ಹೆದ್ದಾರಿಯಲ್ಲಿ ನಿಮ್ಮ ಕಾರಿನೊಂದಿಗೆ ಪ್ರಯಾಣಿಸಿದ್ರೆ, ಟೋಲ್ ಪ್ಲಾಜಾದಲ್ಲಿ ಕಳೆದ ಸಮಯವನ್ನ ನೀವು ಇಷ್ಟಪಡುವುದಿಲ್ಲ. ಟೋಲ್ ಪ್ಲಾಜಾದಲ್ಲಿ ತೆಗೆದುಕೊಳ್ಳುವ ಸರಾಸರಿ ಸಮಯವನ್ನ ಕಡಿಮೆ ಮಾಡಲು ಸರ್ಕಾರವು ನಿರಂತರವಾಗಿ...

    ಕುಂಪಲ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

    ಉಳ್ಳಾಲ: ಮೊಬೈಲ್ ಶೋರೂಂವೊಂದರಲ್ಲಿ ಕೆಲಸಕ್ಕಿದ್ದ ಕುಂಪಲ ಮೂರು ಕಟ್ಟೆ ನಿವಾಸಿ ಯುವಕನೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಅಕ್ಷಯ್ (25) ಆತ್ಮಹತ್ಯೆ...

    ಸುಳ್ಯ: ಮನೆ ಕಾಮಗಾರಿ ವೇಳೆ ತಡೆಗೋಡೆ ಕುಸಿತ – ಮೂವರು ಕಾರ್ಮಿಕರ ಸಾವು

    ಸುಳ್ಯ : ತಡೆಗೋಡೆ ಕಾಮಗಾರಿ ಮೇಳೆ ಗುಡ್ಡದ ಮಣ್ಣು ಜರಿದು ಮೂವರು ಮಣ್ಣಿನಡಿ ಸಿಲುಕಿ ಸಾವನಪ್ಪಿದ್ದ ಘಟನೆ ಸುಳ್ಯದ ಗಾಂಧಿನಗರ ಬಳಿ ನಡೆದಿದೆ. ಮೃತರನ್ನು ಸೋಮಶೇಖರ (45),...

    ಉಜ್ವಲ ಯೋಜನೆಯಡಿ 12 ಸಿಲಿಂಡರ್ ವಿತರಣೆ -200 ರೂ. ಸಬ್ಸಿಡಿ.!

    ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ 12 ರೀಫಿಲ್‌ಗಳಿಗೆ ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ...

    5,8 ನೇ ತರಗತಿಗೆ ಬೋರ್ಡ್ ಪರೀಕ್ಷೆ : ಮತ್ತೆ ಮುಂದೂಡಲು ಹೈಕೋರ್ಟ್ ನಕಾರ

    ಬೆಂಗಳೂರು: ರಾಜ್ಯದ 5 ಮತ್ತು 8 ನೇ ತರಗತಿಗಳಿಗೆ ಮಾರ್ಚ್ 27 ರಿಂದ ನಡೆಯಲಿರುವ ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ಮುಂದೂಡಬೇಕೆಂಬ ರಾಜ್ಯ ಖಾಸಗಿ ಅನುದಾನಿತ ರಹಿತ ಶಾಲೆಗಳ ಒಕ್ಕೂಟದ ಮನವಿಯನ್ನು...