ಸುರತ್ಕಲ್: ಅಕ್ಟೋಬರ್ 16ರಂದು ನಡೆಯುವ ತುಲು ದಿಬ್ಬನ ಪೂರ್ವಭಾವಿ ಸಭೆ ಸುರತ್ಕಲ್ ನ ಬಿಜೆಪಿ ಯುವ ಮೋರ್ಚಾ ಕಚೇರಿಯಲ್ಲಿ ನಡೆಯಿತು.
ಪುಂಡೂರು ವೆಂಕಟರಾಜ ಪುಣಿಂಚಿತ್ತಾಯವರ ಹುಟ್ಟಿದ ದಿನದ ನೆನಪಿಗಾಗಿ ಆಚರಿಸುವ ವಿಶ್ವ ತುಲು ಲಿಪಿ ದಿನದ ಅಂಗವಾಗಿ ಅಕ್ಟೋಬರ್ 16 ರಂದು ಬೆಳಿಗ್ಗೆ 9.30 ಗಂಟೆಗೆ ಸುರತ್ಕಲ್ ಗೋವಿಂದದಾಸ ಕಾಲೇಜಿನ ಎದುರು ಮೆರವಣಿಗೆ ಗೆ ಚಾಲನೆ ನೀಡಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಮೆರವಣಿಗೆ ಸಾಗಿ ಸುರತ್ಕಲ್ ಜಂಕ್ಷನ್ ನ ಕರ್ನಾಟಕ ಸೇವಾ ವೃಂದದಲ್ಲಿ ಸಮಾರೋಪಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ತುಲು ಲಿಪಿ ಅಕ್ಷರಗಳು, ತುಳು ಮಾತೆಯ ಭಾವಚಿತ್ರ, ತುಳು ಧ್ವಜದೊಂದಿಗೆ ಮೆರವಣಿಗೆ ಸಾಗಲಿದೆ ಎಂದು ಸಭೆಯಲ್ಲಿ ತೀರ್ಮಾನಿಸಾಲಾಯಿತು.
ಈ ಸಂಧರ್ಭ ಮ ನ ಪಾ ಸದಸ್ಯ ವರುಣ್ ಚೌಟ, ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಪುರ ಕಾರ್ಯಕ್ರಮ ದ ಬಗ್ಗೆ ಮಾತನಾಡಿದರು. ಈ ಜೈ ತುಳುನಾಡ್ ಸಮಿತಿಯ ಮುಖಂಡ ಕಿರಣ್ ತುಳುವ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಮತ್ತು ತುಳು ಲಿಪಿಯ ಬಗ್ಗೆ ಮಾಹಿತಿ ನೀಡಿದರು.
ಸಂಧರ್ಭದಲ್ಲಿ ಮ ನ ಪಾ ಸದಸ್ಯ ಮನೋಜ್ ಕುಮಾರ್ ಕೋಡಿಕಲ್, ಮ ನ ಪಾ ಸದಸ್ಯೆ ಶ್ವೇತಾ ಪೂಜಾರಿ, ಬಿಜೆಪಿ ಪ್ರಮುಖ ಪುಷ್ಪರಾಜ್ ಮುಕ್ಕ, ಮಹಿಳಾ ಪ್ರಮುಖ್ ಪವಿತ್ರ ನಿರಂಜನ್, ಸಮಿತಿಯ ಸದಸ್ಯರು , ರಕ್ಷಿತ್ ಕೋಟ್ಯಾನ್,ವಿನಯ್ ರೈ, ದೀಕ್ಷಿತ ಮಧ್ಯ, ಶ್ವೇತ ಶೆಟ್ಟಿ, ದುರ್ಗಾಪ್ರಸಾದ್ ರೈ ಉಪಸ್ಥಿತರಿದ್ದರು.
