Monday, June 27, 2022

ಸಾಲುಮರದ ತಿಮ್ಮಕ್ಕಳಿಗೆ ಬಿಡಿಎ ನಿವೇಶನ ಮಂಜೂರು ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಮ್ಮಕ್ಕಗೆ ನಿವೇಶನ ಕ್ರಯಪತ್ರವನ್ನು ಹಂಚಿಕೆ ಮಾಡಿದರು. ಕೆಲ ದಿನಗಳ ಹಿಂದಷ್ಟೇ...
More

    Latest Posts

    ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

    ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ....

    ಮಂಗಳೂರು: ಗುದನಾಳದಲ್ಲಿ ಅಡಗಿಸಿ ಚಿನ್ನ ಕಳ್ಳ ಸಾಗಾಣಿಕೆ – 60. 24 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಿನ್ನವನ್ನು ಗುದನಾಳದಲ್ಲಿ ಅಡಗಿಸಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಿ ವ್ಯಕ್ತಿಯನ್ನು ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೂ. 26 ರ ಭಾನುವಾರ ದುಬೈನಿಂದ...

    ಮಂಗಳೂರು: ಡಿಸಿಪಿ ಹರಿರಾಂ ಶಂಕರ್‌ ವರ್ಗಾವಣೆ

    ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹರಿರಾಂ ಶಂಕರ್‌ ಅವರನ್ನು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ...

    ಉಡುಪಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ

    ಉಡುಪಿ: ಪೋಕ್ಸೋ ಕಾಯ್ದೆ ಕುರಿತು ಉಡುಪಿ ಜಿಲ್ಲಾ ಪೋಲೀಸ್ ಅಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.

    ಮಂಗಳೂರು: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಜಾಥಾ

    ಮಂಗಳೂರು: ಉರ್ವಾ ಸ್ಟೋರ್ ಬಸ್ ನಿಲ್ದಾಣದ ಬಳಿ “ವಿಶ್ವ ಬಾಲಕಾರ್ಮಿಕ ವಿರೋಧಿ ಪದ್ಧತಿ ದಿನ” ಜಾಥಾಕ್ಕೆ ಕಾರ್ಮಿಕ ಉಪ ಆಯುಕ್ತರಾದ ಶ್ರೀ ಶಿವಕುಮಾರ್ ರವರು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು. ಜಾಥಾವು ಜಿಲ್ಲಾ ಪಂಚಾಯತ್ ಸಭಾಂಗಣವರೆಗೆ ನಡೆಯಿತು. ಜಾಥಾದಲ್ಲಿ ಹಲವಾರು ಮುಖಂಡರುಗಳು ಭಾಗವಹಿಸಿದರು. ಜಾಥಾದಲ್ಲಿ ಶಾಲಾ ಮಕ್ಕಳು ಬಾಲಕಾರ್ಮಿಕ ವಿರೋಧಿ ಪದ್ಧತಿಯ ಕುರಿತಾದ ಭಿತ್ತಿಪತ್ರ ಗಳನ್ನು ಪ್ರದರ್ಶನ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಜೋಡಿಸಿದರು.

    ಬಳಿಕ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ಕಾನೂನು ಅರಿವು ನೆರವು ಕಾರ್ಯಾಗಾರ ನಡೆಯಿತು.

    ಮುಂದಿನ ಒಂದು ತಿಂಗಳ ಬಳಿಕ ದ.ಕ ಜಿಲ್ಲೆಯನ್ನು ‘ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾಡಳಿತ, ಜಿ.ಪಂ., ಮಂಗಳೂರು ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನ ಸಂಘ, ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ, ಮಕ್ಕಳ ಸಹಾಯವಾಣಿ ಮತ್ತು ಸಂಬಂಧಿಸಿದ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಪ್ರಯುಕ್ತ ರವಿವಾರ ಜಿ.ಪಂ. ಸಭಾಂಗಣದಲ್ಲಿ ಜರಗಿದ ಕಾನೂನು ಅರಿವು ನೆರವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ
    ಅವರು ಮಾತನಾಡಿದರು.
    ಬಾಲಕಾರ್ಮಿಕ ಪಿಡುಗು ಹೋಗಲಾಡಿಸಲು ಸಾರ್ವಜನಿಕರ ಸಹಭಾಗಿತ್ವಅಗತ್ಯ. ಬಾಲಕಾರ್ಮಿಕರು ಪತ್ತೆಯಾದರೆ ಮಕ್ಕಳ ಸಹಾಯವಾಣಿ (1098) ಅಥವಾ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಬೇಕು. ಈ
    ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಒಂದು ತಿಂಗಳ ಕಾಲ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ
    ಅವರಿಂದ ಮಾಹಿತಿ ಪಡೆದು ಅನಂತರ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗುವುದು
    ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಹೊರರಾಜ್ಯ, ಹೊರ ಜಿಲ್ಲೆಗಳ ಮಕ್ಕಳನ್ನು ದುಡಿಸಿ ಕೊಳ್ಳುವುದನ್ನು ಕೂಡ ತಡೆಯಬೇಕಾಗಿದೆ. 18 ವರ್ಷ
    ದೊಳಗಿನ ಯಾವುದೇ ಮಕ್ಕಳು ಕಾರ್ಮಿಕರಾಗಿ ದುಡಿಯದಂತೆ, ಶಾಲೆ/ ಕಾಲೇಜು ವಿದ್ಯಾಭ್ಯಾಸದಿಂದ
    ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆಗಳು ಕಾರ್ಯಪ್ರವೃತ್ತವಾಗಬೇಕು ಎಂದರು.
    ತಹಶೀಲ್ದಾರ್ ಪುರಂದರ ಹೆಗ್ಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ
    ಬೋವಿ, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಹಿಲ್ಲಾ ರಾಯಪ್ಪನ್, ವಕೀಲರ ಸಂಘದ ಉಪಾಧ್ಯಕ್ಷ
    ಮನೋರಾಜ್ ರಾಜೀವ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಉಪನಿರ್ದೇಶಕ ಮಿಶ್ರಕೋಟಿ,
    ಜಿಲ್ಲಾಬಾಲಕಾರ್ಮಿಕ ಯೋಜನ ಸಂಘದ ಯೋಜನೆ ನಿರ್ದೇಶಕ ಶ್ರೀನಿವಾಸ ಒ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಉಪಸ್ಥಿತರಿದ್ದರು.

    ಹಿರಿಯ ವಕೀಲ ಕೆ, ನಿಕೇಶ್ ಶೆಟ್ಟಿ ಅವರು ಬಾಲಕಾರ್ಮಿಕ ನಿಷೇಧ ಕಾಯ್ದೆಯ ಕುರಿತು ಉಪನ್ಯಾಸ ನೀಡಿದರು.
    ಕಾರ್ಮಿಕ ಅಧಿಕಾರಿ ಅಮರೇಂದ್ರ ಸ್ವಾಗತಿಸಿದರು.ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಬಿ.ಈ.
    ಪ್ರಸ್ತಾವಿಸಿದರು. ಕಾರ್ಮಿಕ ಅಧಿಕಾರಿ, ಕಾವೇರಿ ಟಿ.ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.
    ಸಭಾ ಕಾರ್ಯಕ್ರಮಕ್ಕೆ ಮೊದಲು ಉರ್ವಸ್ಟೋರ್ ನಿಂದ ಜಿ.ಪಂ. ಕಚೇರಿಯವರೆಗೆ ಜಾಥಾ ನಡೆಯಿತು.

    ತಮ್ಮ ಹೆತ್ತವರೊಂದಿಗೆ ಬಾಲಕಾರ್ಮಿಕರಾಗಿದ್ದು,ಇಲಾಖೆಯಿಂದ ರಕ್ಷಿಸಲ್ಪಟ್ಟು ಈಗ ಚಿಣ್ಣರ ತಂಗು ಧಾಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ತಮ್ಮ ಮಾತುಗಳಿಂದ ಸಭಿಕರ ಮನಗೆದ್ದರು.

    Latest Posts

    ಮಾವಿನ ಹಣ್ಣಿನ ಸಿಪ್ಪೆಯಲ್ಲೂ ಇದೆ ಸಾಕಷ್ಟು ಔಷಧೀಯ ಗುಣ

    ಬೇಸಿಗೆ ಬಂತಂದ್ರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಅಬ್ಬರ ಜೋರಾಗಿರುತ್ತದೆ. ಸೀಸನ್‌ನಲ್ಲಿ ಮಾವು ತಿನ್ನೋದು ಅಂದ್ರೆ ಹಬ್ಬವಿದ್ದಂತೆ. ಕೇವಲ ಮಾವಿನ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ....

    ಮಂಗಳೂರು: ಗುದನಾಳದಲ್ಲಿ ಅಡಗಿಸಿ ಚಿನ್ನ ಕಳ್ಳ ಸಾಗಾಣಿಕೆ – 60. 24 ಲಕ್ಷ ರೂ. ಮೌಲ್ಯದ ಚಿನ್ನ ವಶ

    ಮಂಗಳೂರು: ಚಿನ್ನವನ್ನು ಗುದನಾಳದಲ್ಲಿ ಅಡಗಿಸಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಿ ವ್ಯಕ್ತಿಯನ್ನು ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಜೂ. 26 ರ ಭಾನುವಾರ ದುಬೈನಿಂದ...

    ಮಂಗಳೂರು: ಡಿಸಿಪಿ ಹರಿರಾಂ ಶಂಕರ್‌ ವರ್ಗಾವಣೆ

    ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹರಿರಾಂ ಶಂಕರ್‌ ಅವರನ್ನು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ...

    ಉಡುಪಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ

    ಉಡುಪಿ: ಪೋಕ್ಸೋ ಕಾಯ್ದೆ ಕುರಿತು ಉಡುಪಿ ಜಿಲ್ಲಾ ಪೋಲೀಸ್ ಅಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.

    Don't Miss

    ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ SCST ದೌರ್ಜನ್ಯ ತಡೆ ಕಾಯ್ದೆ ಅನ್ವಯ: ಕರ್ನಾಟಕ ಹೈಕೋರ್ಟ್

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ಮಾಡಿದರೆ ಮಾತ್ರ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಕಟ್ಟಡದ...

    ಮಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಹಾವಿನ ಮೊಟ್ಟೆ ಪತ್ತೆ-ಕಾವು ಕೊಟ್ಟು ಕಾಡಿಗೆ ಬಿಟ್ಟ ಉರಗ ತಜ್ಞ

    ಮಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಹಾವಿನ ಮೊಟ್ಟೆ ಪತ್ತೆಯಾಗಿದ್ದು, ಇದನ್ನು ಕಂಡ ಕಟ್ಟಡದ ಮಾಲಕರು ಮೊಟ್ಟೆಗಳನ್ನು ಉರಗ ತಜ್ಞರಿಗೆ ಹಸ್ತಾಂತರಿಸಿ ಅವುಗಳಿಗೆ ಕೃತಕ ಕಾವು ಕೊಟ್ಟು ಮರಿಗಳನ್ನು ಬಂಟ್ವಾಳದ ಕಾಡಿಗೆ...

    ಕಾಪು : ಲಾರಿ ಢಿಕ್ಕಿ-ಡಿವೈಡರ್‌ ಮೇಲೆ ಪಲ್ಟಿಯಾದ ಓಮ್ನಿ ಕಾರು – ಪ್ರಯಾಣಿಕರು ಪಾರು

    ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವಿನ ಡಿವೈಡರ್‌ ಮೇಲೆ...

    ಮಂಗಳೂರು: ಗಾಂಜಾ ಪ್ರಕರಣ – 5 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

    ಮಂಗಳೂರು: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ಸಜೀಪ ಮುನ್ನೂರು ಗ್ರಾಮದ ನಿವಾಸಿ ಜಾಕೀರ್ ಹುಸೈನ್ (29) ಎಂದು ಗುರುತಿಸಲಾಗಿದೆ.

    ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಭಾರೀ ಮಳೆ : ಹವಾಮಾನ ಇಲಾಖೆ

    ಬೆಂಗಳೂರು : ರಾಜ್ಯಾದ್ಯಂತ ಮುಂದಿನ 4 ದಿನಗಳ ಕಾಲ ಅಂದ್ರೆ ಜೂನ್ 26ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ಕೊಟ್ಟಿದೆ. ಈ ಹಿನ್ನೆಲೆ...