Tuesday, April 23, 2024
spot_img
More

    Latest Posts

    ರಾಜ್ಯಾದ್ಯಂತ ಇಂದಿನಿಂದ `ವೀಕೆಂಡ್ ಕರ್ಪ್ಯೂ’ ಜಾರಿ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

    ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಇಂದು ರಾತ್ರಿ 10 ಗಂಟೆಯಿಂದೆ ಜನವರಿ 10 ರ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಇರಲಿದೆ.

    ನೈಟ್ ಕರ್ಪ್ಯೂ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಖಾಸಗಿ ಕಂಪನಿಗಳು, ಕೈಗಾರಿಕೆ, ಇ-ಕಾಮರ್ಸ್, ಫುಡ್ ಹೋಂ ಡೆಲಿವರಿ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪನಿ, ಸಾರಿಗೆ ಇಲಾಖೆ ಉದ್ಯೋಗಿಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಲಾಗಿದೆ.

    ರಾಜ್ಯಾಧ್ಯಂತ ವಾರಾಂದ್ಯ ಕರ್ಪ್ಯೂ ಮಾರ್ಗಸೂಚಿ ಕ್ರಮಗಳು

    • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು ತೆರೆದಿರಲು ಅನುಮತಿ. ತುರ್ತು ಸೇವೆ ಕಚೇರಿಗಳು ತೆರೆದಿರಲು ಅವಕಾಶ
    • ಎಲ್ಲಾ ಸಾರ್ವಜನಿಕ ಪಾರ್ಕ್ ಗಳು ಬಂದ್
    • ಐಟಿ ಕಂಪನಿಗಳು ವಾರಾಂತ್ಯ ಕರ್ಪ್ಯೂ ನಡುವೆಯೂ ಕೆಲಸಕ್ಕೆ ಅವಕಾಶ. ನೌಕರರು ಐಡಿ ಕಾರ್ಡ್ ತೋರಿಸಿ ಕಚೇರಿಗೆ ತೆರಳಲು ಅನುಮತಿ
    • ತುರ್ತು ಸಂದರ್ಭದಲ್ಲಿ ಜನರು ತೆರಳಲು ಅವಕಾಶ
    • ಆಹಾರ, ತರಕಾರಿ, ಹಣ್ಣು, ಮಾಂಸ, ಮೀನು, ಡೈರಿ, ಹಾಲಿನ ಬೂತ್ ತೆರೆಯಲು ಅನುಮತಿ
    • ತಳ್ಳುಗಾಡಿಯಲ್ಲಿ ಮಾರಾಟಮಾಡಲು ಅವಕಾಶ
    • ಹೋಂ ಡಿಲಿವರಿಗೆ ಅವಕಾಶ
    • ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಕೊಂಡಯ್ಯಲು ಅನುಮತಿ
    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss