Friday, June 9, 2023

ಉಳ್ಳಾಲದಲ್ಲಿ ಉಸಿರುಗಟ್ಟಿಸಿ ಜಾನುವಾರುಗಳ ಸಾಗಾಟ.! ಹಸುಗಳ ರಕ್ಷಣೆ

ಉಳ್ಳಾಲ: ಕೇರಳದಿಂದ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಜಾನುವಾರುಗಳನ್ನ ಉಸಿರುಗಟ್ಟಿಸಿ ಸಾಗಿಸುತ್ತಿದ್ದ ವೇಳೆ ರಸ್ತೆ ಏರಲಾರದೆ ವಾಹನ‌ ನಿಂತಿದ್ದು ಬಜರಂಗದಳದ ಕಾರ್ಯಕರ್ತರು ಜಾನುವಾರುಗಳನ್ನ ರಕ್ಷಿಸಿದ ಘಟನೆ ನಿನ್ನೆ ರಾತ್ರಿ ಕುತ್ತಾರು...
More

    Latest Posts

    ಭಾರತಕ್ಕೆ ಗಂಡಾಂತರ ಕಾದಿದೆ – ಕೋಡಿಮಠ ಶ್ರೀ ಭವಿಷ್ಯ

    ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ...

    500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

    ಹೊಸದಿಲ್ಲಿ: 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್...

    ಒಡಿಶಾ ರೈಲು ದುರಂತದಲ್ಲಿ ಕಾಣೆಯಾಗಿ ಟಿವಿ ಲೈವ್‌ನಲ್ಲಿ ಪತ್ತೆಹಚ್ಚಿ ಪೋಷಕರನ್ನು ಸೇರಿದ ಪುತ್ರ!

    ಕಟಕ್: ಜೂನ್ 2ರಂದು ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗ ದೂರದರ್ಶನವೊಂದರಲ್ಲಿ ಪ್ರಸಾರವಾಗುತ್ತಿದ್ದ ನೇರ ಸಂದರ್ಶನ ಪ್ರಸಾರದಿಂದ ಮತ್ತೆ ತಂದೆ - ತಾಯಿ ಜೊತೆ ಸೇರಿದ್ದಾನೆ.

    ಉಳ್ಳಾಲ: ನೂತನ ಮನೆಯ ಗೃಹ ಪ್ರವೇಶದ ಐದೇ ದಿನದಲ್ಲಿ ನೇಣುಬಿಗಿದು ಯುವತಿ ಆತ್ಮಹತ್ಯೆ

    ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. 

    ಕೋಟೆಕಾರು ನೆತ್ತಿಲ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ- ಯೋಗೀಶ್‌ ಶೆಟ್ಟಿ ಜಪ್ಪು

    ಉಳ್ಳಾಲ ಕೋಟೆಕಾರು ನೆತ್ತಿಲ ಪರಿಸರದ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಕೋಟೆಕಾರು ಪಟ್ಟಣ ಪಂಚಾಯತ್‌ ಮುಂಬಾಗದಲ್ಲಿ ಕೋಟೆಕಾರು ಪರಿಸರದ ನಾಗರಿಕರು ಮತ್ತು ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ನೀರಿನ ಖಾಲಿ ಬಿಂದಿಗೆಗಳನ್ನು ಇಟ್ಟು ವಿನೂತನ ರೀತಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್‌ ಶೆಟ್ಟಿ ಜಪ್ಪು, ನೀರು ಪ್ರಕೃತಿಯ ನೈಸರ್ಗಿಕ ಕೊಡುಗೆಗಳಲ್ಲಿ ಪ್ರಮುಖವಾದುದು.ಆದ್ದರಿಂದಅದರ ಸದ್ಬಳಕೆ ಇಂದಿನ ಕಾಲಘಟ್ಟದಲ್ಲಿ ಅತಿ ಅವಶ್ಯಕ. ಕೋಟೆಕಾರು ನೆತ್ತಿಲ ಪ್ರದೇಶ ಉಳ್ಳಾಲ ತಾಲೂಕಿನ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲೊಂದು.ಇಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣವಾಗಿದ್ದು ಹಾಗೂ ಸಣ್ಣಗಾತ್ರದ ಕೈಗಾರಿಕೆಗಳು ಕಾರ್ಯಚರಿಸುತ್ತಿವೆ. ಸಹಜವಾಗಿ ಬೇಸಿಗೆ ಕಾಲದಲ್ಲಿ ಮಾರ್ಚ್ ತಿಂಗಳಿನಿಂದ ಇಲ್ಲಿ ನೀರಿಗಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಮನೆಗಳ ಬಾವಿಗಳು ಬೇಸಿಗೆ ಕಾಲದಲ್ಲಿ ಬತ್ತಿ ಹೋಗುತ್ತಿರುವುದು ಆತಂಕದ ವಿಷಯ. ಜನರು ತಮ್ಮ ಮೂಲಭೂತ ಅವಶ್ಯಕತೆಗಳಾದ ಶೌಚಾಲಯ ಹಾಗೂ ಅಡುಗೆ ಕಾರ್ಯಕ್ಕೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯತ್‌ನಿಂದ 2 ಅಥವಾ3 ದಿನಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

    This image has an empty alt attribute; its file name is WhatsApp-Image-2023-05-26-at-12.35.34-PM-1-1024x613.jpeg

    ಸಣ್ಣ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡಬೇಕಾಗಿರುವುದರಿಂದ ಮನೆಗಳಿಗೆ ನೀರು ಪೂರೈಕೆ ಕಷ್ಟವಾಗುತ್ತಿದೆ. ಮಂಗಳೂರು ನಗರಕ್ಕೆ ತುಂಬೆ ವೆಂಟಡ್‌ಡ್ಯಾಂ ಮೂಲಕ ಬೇಸಿಗೆಯಲ್ಲೂ ನೀರು ಸರಬರಾಜು ಮಾಡಲಾಗುತ್ತಿದ್ದು ಆದರೆ ಹೊರವಲಯದಲ್ಲಿರುವ ನೆತ್ತಿಲ ಕೋಟೆಕಾರು ಪ್ರದೇಶದ ಜನರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೋಟೆಕಾರು ನೆತ್ತಿಲ ಪ್ರದೇಶದ ಜನರು ಸಹ ಆಸ್ತಿ ತೆರಿಗೆ ಸೇರಿದಂತೆ ವಿವಿಧ ತೆರಿಗೆಗಳನ್ನು ಸ್ಥಳೀಯ ಪಂಚಾಯಿತಿಗೆ ಪಾವತಿಸುತ್ತಿರುವುದರಿಂದ ವರ್ಷವಿಡಿ ನೀರು ಪೂರೈಕೆ ಮಾಡುವುದು ಪಟ್ಟಣ ಪಂಚಾಯತ್‌ ಕರ್ತವ್ಯವೆಂಬುದು ಹಕ್ಕೊತ್ತಾಯವಾಗಿದೆ. ಕೋಟೆಕಾರು ನೆತ್ತಿಲ ಪ್ರದೇಶದಲ್ಲಿ ಅಂತರ್ಜಲ ಕಡಿಮೆಯಾಗಿದ್ದು ಇದಕ್ಕೆ ಅನಧೀಕೃತ ಕೊಳವೆ ಬಾವಿಗಳ ನಿರ್ಮಾಣ ಕಾರಣ. ಕಳೆದ ಮಾರ್ಚ್‌ನಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ನೆತ್ತಿಲ ಪರಿಸರದಲ್ಲಿ ಗಣಿ ಇಲಾಖೆ, ಕೋಟೆಕಾರು ಪಟ್ಟಣ ಪಂಚಾಯತ್‌ನಿಂದ ಅನುಮತಿ ಪಡೆಯದೆ ಹಾಗೂ ಸ್ಥಳೀಯ ನಿವಾಸಿಗಳ ನಿರಪೇಕ್ಷಣಾ ಪತ್ರ ಇಲ್ಲದೆ ಏಕಾಏಕಿ ಕೊಳವೆ ಬಾವಿ ನಿರ್ಮಾಣಕ್ಕೆ ಮುಂದಾಗಿರುವುದರ ವಿರುದ್ಧ ನಾವು ಉಳ್ಳಾಲ ಪೊಲೀಸ್‌ಠಾಣೆ, ಪಟ್ಟಣ ಪಂಚಾಯತ್, ಗಣಿ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರ ಪರಿಣಾಮವಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ನಾವು ತಮ್ಮ ಗಮನಕ್ಕೆ ತರುವುದೇನೆಂದರೆ ಮಗದೊಮ್ಮೆ ಈ ಪ್ರದೇಶದಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಕೋಟೆಕಾರು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ನೀರು ಪೂರೈಕೆ ಯೋಜನೆ ರೂಪಿಸಬೇಕು ಹಾಗೂ ಕೋಟೆಕಾರು ನೆತ್ತಿಲ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕೆಂದು ಮನವಿ ಮಾಡಿದರು . “ಬೇಕೇ ಬೇಕು ನೀರು ಬೇಕು” ‌”ಒದಗಿಸಿ ಒದಗಿಸಿ ಮೂಲ ಸೌಕರ್ಯ ಒದಗಿಸಿ” ಘೋಷಣೆ ಗಳನ್ನು ಕೂಗಿದರು.
    ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾದಿಕಾರಿ ತುಕರಾಮ್ ರವರು ಮನವಿ ಸ್ವೀಕರಿಸಿದರು

    Latest Posts

    ಭಾರತಕ್ಕೆ ಗಂಡಾಂತರ ಕಾದಿದೆ – ಕೋಡಿಮಠ ಶ್ರೀ ಭವಿಷ್ಯ

    ಭಾರತಕ್ಕೆ ಈ ಬಾರಿ ದೊಡ್ಡ ಗಂಡಾತರವೊಂದು ಕಾದಿದೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ...

    500 ರೂ ನೋಟುಗಳನ್ನು ಹಿಂಪಡೆಯುವ ಯೋಚನೆಯಿಲ್ಲ: ಆರ್ ಬಿಐ ಗವರ್ನರ್ ಸ್ಪಷ್ಟನೆ

    ಹೊಸದಿಲ್ಲಿ: 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್...

    ಒಡಿಶಾ ರೈಲು ದುರಂತದಲ್ಲಿ ಕಾಣೆಯಾಗಿ ಟಿವಿ ಲೈವ್‌ನಲ್ಲಿ ಪತ್ತೆಹಚ್ಚಿ ಪೋಷಕರನ್ನು ಸೇರಿದ ಪುತ್ರ!

    ಕಟಕ್: ಜೂನ್ 2ರಂದು ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗ ದೂರದರ್ಶನವೊಂದರಲ್ಲಿ ಪ್ರಸಾರವಾಗುತ್ತಿದ್ದ ನೇರ ಸಂದರ್ಶನ ಪ್ರಸಾರದಿಂದ ಮತ್ತೆ ತಂದೆ - ತಾಯಿ ಜೊತೆ ಸೇರಿದ್ದಾನೆ.

    ಉಳ್ಳಾಲ: ನೂತನ ಮನೆಯ ಗೃಹ ಪ್ರವೇಶದ ಐದೇ ದಿನದಲ್ಲಿ ನೇಣುಬಿಗಿದು ಯುವತಿ ಆತ್ಮಹತ್ಯೆ

    ಉಳ್ಳಾಲ: ನೂತನ ಮನೆ ಖರೀದಿಸಿದ ಯುವತಿಯೋರ್ವಳು ಅದ್ಧೂರಿ ಗೃಹ ಪ್ರವೇಶಗೈದ ಐದೇ ದಿವಸದಲ್ಲಿ ಅದೇ ಮನೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. 

    Don't Miss

    ಮಂಗಳೂರು : ದಡಾರ – ರುಬೆಲ್ಲಾ ನಿರ್ಮೂಲನೆಗೆ ಎಲ್ಲಾ ಇಲಾಖೆಗಳ ಪರಿಣಾಮಕಾರಿ ಸಹಕಾರ ಅಗತ್ಯ

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಡಾರ ಹಾಗೂ ರುಬೆಲ್ಲಾ ನಿರ್ಮೂಲನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳ ಪರಿಣಾಮಕಾರಿ ಸಹಕಾರ ಅತ್ಯಗತ್ಯ....

    ಕಂಬಳ‌ ಇತಿಹಾಸಲ್ಲಿ ನೂತನ ಅಧ್ಯಾಯ: ಯುವತಿಯರಿಗೆ ತರಬೇತಿ‌ ನೀಡಲು ಅಕಾಡೆಮಿ ಸಿದ್ಧ

    ಮಂಗಳೂರು: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳ ದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ ಪ್ರತಿವಾದದಲ್ಲಿ ಕಂಬಳ ಗೆದ್ದಿದೆ. ಇದರಿಂದಾಗಿ ಕಂಬಳ ಆಯೋಜಕರು ಮತ್ತಷ್ಟು ಪುಳಕಿತರಾಗಿದ್ದಾರೆ. ಪ್ರಸಕ್ತ ವರ್ಷದ ಕಂಬಳ...

    ಒಡಿಶಾ ಭೀಕರ ರೈಲು ದುರಂತ ಸ್ಥಳಕ್ಕೆ ‘ಪ್ರಧಾನಿ ಮೋದಿ’ ಭೇಟಿ

    ನವದೆಹಲಿ : ಬಾಲಸೋರ್ ನಲ್ಲಿ ಸಂಭವಿಸಿದ ರೈಲು ಅಪಘಾತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ನಂತ್ರ ಕಟಕ್ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲಿದ್ದಾರೆ.

    ಕಾರ್ಕಳ: ಮೀನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ

    ಕಾರ್ಕಳ : ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಲ್ಲೂರು ಪರಪ್ಪಾಡಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

    ಮುಂಬೈ-ಗೋವಾ ವಂದೇ ಭಾರತ್‌ ಎಕ್ಸ್‌ಪ್ರೆಸ್ ಉದ್ಘಾಟನೆ ರದ್ದು

    ಮುಂಬಯಿ: ಇಂದು ಉದ್ಘಾಟನೆಯಾಗಬೇಕಿದ್ದ ಮುಂಬೈ-ಗೋವಾ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಮಾದರಿಯಲ್ಲಿ ಉದ್ಘಾಟಿಸಬೇಕಿತ್ತು.ಆದರೆ...