Tuesday, April 16, 2024
spot_img
More

    Latest Posts

    ತೊಕ್ಕೊಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ವೃಕ್ಷ ತೋರಣ ಅಭಿಯಾನ

    ತೊಕ್ಕೊಟು:ಕಳೆದ ಏಳು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ತೊಕ್ಕೊಟಿನಲ್ಲಿ ನಡೆದ ವೃಕ್ಷ ತೋರಣ ಕಾರ್ಯಕ್ರಮಕ್ಕಾಗಿ ಬಿಡುವು ನೀಡಿ ಅನುಗ್ರಹಿಸಿತು.

    ತೊಕ್ಕೊಟಿನಲ್ಲಿ ಫೈ ಓವರ್ ಕೆಳಭಾಗದಲ್ಲಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ, ಸುಮಾರು 100 ಸೀತಾ ಅಶೋಕ ಮತ್ತು ಹೊಳೆ ದಾಸವಾಳ ಗಿಡ ನೆಡುವ ವೃಕ್ಷ ತೋರಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
    ಅರಣ್ಯ ಇಲಾಖೆಯ ಡೆಪ್ಯುಟಿ ರೇಂಜರ್ ಮಹಾಬಲ ಪರಿಸರ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಮತ್ತು ಅನಿವಾರ್ಯ ಎಂದರು. ಪ್ರತಿಷ್ಠಾನ ಈ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
    ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಶ್ರೀ. ಕೆ.ಟಿ.ಸುವರ್ಣ, ಶ್ರೀ ಮಲರಾಯ ದೇವಸ್ಥಾನ ಬಂಡಿಕೊಟ್ಯ, ಉಳ್ಳಾಲದ ಅರ್ಚಕರಾದ ಶ್ರೀ. ಲತೀಶ ಯಾನೆ ಮುಂಡ ಪೂಜಾರಿ, ಧರ್ಮಸ್ಥಳ ಸ್ವ ಸಹಾಯ ಸಂಘದ ಪ್ರಮುಖರಾದ ಶ್ರೀಮತಿ ಜಯಂತಿ, ಮಾಜಿ ಜಿಲ್ಲಾ ಪಂ.ಸದಸ್ಯೆ ಶ್ರೀಮತಿ ಧನಲಕ್ಷ್ಮೀ ಗಟ್ಟಿ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಧ್ಯಕ್ಷರಾದ ಶ್ರೀ. ಯೋಗೀಶ್ ಶೆಟ್ಟಿ ಜಪ್ಪು, ಭಗವತೀ ಸಹಕಾರ ಬ್ಯಾಂಕಿನ ನಿರ್ದೇಶಕ ರಾದ ಶ್ರೀ. ದೇವದಾಸ್ ಕೊಲ್ಯ, ಮುನ್ನೂರು ಯುವಕ ಮಂಡಲದ ಟ್ರಸ್ಟೀ ಹರೀಶ್ ಮುಂಡೋಳಿ ಶುಭ ಹಾರೈಸಿದರು.


    ಉಳ್ಳಾಲಗುತ್ತು ಶ್ರೀ ಮಲರಾಯ ಬಂಟ ಚಾವಡಿಯ ಮುಖ್ಯಸ್ಥರಾದ ಬಾಲಕೃಷ್ಣ ಶೆಟ್ಟಿ, ಯುವ ಉದ್ಯಮಿ ರಾಜೇಶ್ ಕೆರೆಬೈಲ್, ಉಳ್ಳಾಲ ನಗರಸಭೆಯ ಸದಸ್ಯರಾದ ಗೀತಾ ಬಾಯಿ, ನಮಿತಾ ಗಟ್ಟಿ, ಸುರೇಂದ್ರ ಶೆಟ್ಟಿ, ಲಲಿತಾ ಸುಂದರ್, ಶಿವಾಜಿ ಫ್ರೆಂಡ್ಸ್ ಸರ್ಕಲ್ ನ ಪ್ರಮುಖರಾದ ರೋಹನ್ ತೊಕ್ಕೊಟು, ಪ್ರತಿಷ್ಠಾನದ ಗೌರವ ಸಲಹೆಗಾರರು ಆನಂದ ಕೆ.ಅಸೈಗೋಳಿ, ಗೌರವಧ್ಯಕ್ಷರಾದ ರಾಕೇಶ್ ಬೈಪಾಸ್, ಉಪಾಧ್ಯಕ್ಷರಾದ ಗೋಪಿನಾಥ್ ಬಗಂಬಿಲ, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ಕಾರ್ಯದರ್ಶಿ ಕಿರಣ್ ಕೊಲ್ಯ, ವೃಕ್ಷಾಂಕುರ ರಕ್ಷಾ ಸಂಚಾಲಕರು ಪ್ರಸಾದ್ ಕೊಂಡಾಣ, ಪ್ರಮುಖರಾದ ಮೋಹನ್ ಸಾಲ್ಯಾನ್, ದಾಮೋದರ ನಡಾರ್, ರಾಜೇಂದ್ರ ಸೇವಂತಿಗುಡ್ಡೆ, ಶಿವಾಜಿ ಕುತ್ತಾರು, ಕೃಷ್ಣ ಪೊನ್ನೊತ್ತೋಡು, ಸುಧಾಕರ್ ಬಜಾಲ್, ರಮೇಶ್ ಸಾಮಾನಿ, ಲಕ್ಷ್ಮೀನಾರಾಯಣ, ಪ್ರಕಾಶ್ ಕುಂಪಲ,ಚಂದ್ರಶೇಖರ್, ಕಿಶೋರ್ ಮಂಚಿ, ಶರತ್ ಶೆಟ್ಟಿ, ಸತ್ಯಪ್ರಸಾದ್ ಕುಂಪಲ, ಇನ್ನಿತರರು ಉಪಸ್ಥಿತರಿದ್ದರು.
    ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ಪ್ರಸ್ತಾವನೆಗೈದರು. ಉಪಾಧ್ಯಕ್ಷರಾದ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ ವಂದಿಸಿದರು.
    ಈ ಸಂಧರ್ಭದಲ್ಲಿ ಪರಿಸರ ಪ್ರೇಮಿ ಪ್ರತಿಷ್ಠಾನದ ಉಪಾಧ್ಯಕ್ಷರು ಮಾಧವ ಉಳ್ಳಾಲ ರವರನ್ನು ಅಭಿನಂದಿಸಲಾಯಿತು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss