ಮುಂಡಿತ್ತಡ್ಕ: ಶ್ರೀ ವಿಷ್ಣು ಕಲಾವೃಂದ(ರಿ) ವಿಷ್ಣು ನಗರ ಮುಂಡಿತ್ತಡ್ಕ ಇದರ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಶ್ರೀ ಸುನಿಲ್ ಮಾಸ್ಟರ್ ಮುಂಡಿತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಜರಗಿತು.ಸಭೆಯಲ್ಲಿ ಸಂಘದ ಕ್ರಿಕೆಟ್ ತಂಡದ ನೂತನ ಲಾಂಛನವನ್ನು ಸಂಘದ ಅಧ್ಯಕ್ಷರಾದ ಶ್ರೀ ಸುನಿಲ್ ಕುಮಾರ್ ಮುಂಡಿತ್ತಡ್ಕ ಅನಾವರಣಗೊಳಿಸಿದರು.ಸಂಘದ ಕ್ರಿಕೆಟ್ ತಂಡಕ್ಕೆ ವಿಷ್ಣು ನಗರ ಕ್ರಿಕೆಟರ್ಸ್(VNC) ಎಂಬ ನೂತನ ಹೆಸರನ್ನು ನೀಡಲಾಯಿತು.ಸಂಘದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸೂರ್ಯಪ್ರಕಾಶ್ ಸ್ವಾಗತಿಸಿದ ಸಭೆಗೆ ಸದಸ್ಯರಾದ ಶ್ರೀ ಪುನೀತ್ ಮುಂಡಿತ್ತಡ್ಕ ಧನ್ಯವಾದವಿತ್ತರು.
