Wednesday, December 7, 2022

ಬೆಳ್ತಂಗಡಿ: ದಿಡುಪೆ ಫಾಲ್ಸ್‌‌ಗೆ ತೆರಳಿದ್ದ ವಿದ್ಯಾರ್ಥಿ- ನೀರಿನಲ್ಲಿ ಮುಳುಗಿ ಮೃತ್ಯು

ಬೆಳ್ತಂಗಡಿ: ದಿಡುಪೆ ಸಮೀಪದ ಎರ್ಮಾಯಿ ಫಾಲ್ಸ್ ನಲ್ಲಿ ಮುಲುಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಲೇಜೊಂದರ 7 ಮಂದಿ ವಿದ್ಯಾರ್ಥಿಗಳು ಮಲವಂತಿಗೆ ಬಳಿಯ ಎರ್ಮಾಯಿ ಫಾಲ್ಸ್ ಗೆ...
More

  Latest Posts

  ಮಂಗಳೂರು ಕಾಲೇಜು ವಿದ್ಯಾರ್ಥಿನಿ‌ ಕಾಸರಗೋಡು ರೈಲ್ವೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

  ಮಂಗಳೂರು: ಮಂಗಳೂರಿನ‌ ಕಾಲೇಜು ವಿದ್ಯಾರ್ಥಿನಿ ಕಾಸರಗೋಡಿನ‌ ರೈಲ್ಚೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ‌. ಕಡಪ್ಪುರದ ಸುರೇಂದ್ರರವರ ಪುತ್ರಿ ಅಂಜನಾ.ಎಸ್(22) ಮೃತಪಟ್ಟವರು.ಅಂಜನಾ ಮಂಗಳೂರು ಸೈ೦ಟ್ ಅಲೋಶಿಯಸ್ ಕಾಲೇಜಿನಲ್ಲಿ...

  ಮಂಗಳೂರು: ಕಟೀಲು ಮೇಳದ ಚೌಕಿ ಸಹಾಯಕ ಹೃದಯಾಘಾತದಿಂದ ನಿಧನ

  ಮಂಗಳೂರು: ಕಟೀಲು ಮೇಳದ ಚೌಕಿ ಸಹಾಯಕನೋರ್ವ ಯಕ್ಷಗಾನ ನಡೆಯುತ್ತಿದ್ದ ಸ್ಥಳವಾದ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ. ಕಟೀಲು ಮೇಳದ ಐದನೇ ಮೇಳದ ಚೌಕಿ...

  ಮಂಗಳೂರು: ಕುಡುಕನ ಕೈಗೆ ಸಿಕ್ತು 10ಲಕ್ಷದ ಬಂಡಲ್;‌ ಮುಂದೇನಾಯ್ತು ನೋಡಿ…

  ಮಂಗಳೂರು: ಕುಡುಕನೋರ್ವನಿಗೆ ಅದೃಷ್ಟವೆಂಬಂತೆ ರಸ್ತೆ ಬದಿಯಲ್ಲಿ ಹತ್ತು ಲಕ್ಷ ರೂಪಾಯಿ ಸಿಕ್ಕಿದ್ದು ಆದರೆ ಈತನ ತಲೆಗೇರಿದ ಅಮಲಿನ ಪರಿಣಾಮ ಅಷ್ಟೂ ದುಡ್ಡು ಅರ್ಧ ಗಂಟೆಯಲ್ಲಿ ಪೊಲೀಸರ ಪಾಲಾದ ಘಟನೆ ಪಂಪ್ವೆಲ್ ನಲ್ಲಿ ನಡೆದಿದೆ.

  BREAKING NEWS : ಬೆಳಗಾವಿಯಲ್ಲಿ ಮಹಾರಾಷ್ಟ್ರದ 5 ಲಾರಿಗಳ ಮೇಲೆ ಕಲ್ಲುತೂರಾಟ : ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ

  ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಮಹಾರಾಷ್ಟ್ರ ಸಚಿವರು ಕ್ಯಾತೆ ತೆಗೆದಿದ್ದು, ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಾರಾಷ್ಟ್ರ ನೊಂದಣಿಯ 5 ಲಾರಿಗಳ...

  ಭಾವೈಕ್ಯ ಮೂಡಿಸುವ ಸಾಹಿತ್ಯ ಕೃತಿಗಳು ಬರಲಿ: ಪ್ರೊ.ವಿವೇಕ ರೈ

  ಮಂಗಳೂರು: ‘ಇತರ ದ್ರಾವಿಡ ಭಾಷೆಗಳಂತೆ ತುಳುವಿನಲ್ಲೂ ಇತ್ತೀಚೆಗೆ ಸಾಕಷ್ಟು ಮೌಲಿಕ ಪುಸ್ತಕಗಳು ಪ್ರಕಟವಾಗುತ್ತಿವೆ. ಸಾಹಿತ್ಯದ ಮೂಲಕ ಭಾಷೆ-ಸಂಸ್ಕೃತಿಯ ಪ್ರಸರಣದ ಜೊತೆಗೆ ಸಮಾಜದಲ್ಲಿ ಭಾವೈಕ್ಯ ಮೂಡಿಸುವ ಕೆಲಸಗಳು ಆಗಬೇಕಿದೆ. ಅಂತಹ ಬರಹಗಾರರನ್ನು ಅಕಾಡೆಮಿ ಪ್ರೋತ್ಸಾಹಿಸಬೇಕು. ತುಳುನಾಡಿನ ವಿವಿಧ ಜಾತಿ-ಧರ್ಮಗಳ ಹಬ್ಬ ಹರಿದಿನ ಮತ್ತು ಆಚಾರ ವಿಚಾರಗಳನ್ನು ಗಾಂಪನ ಪುರಾಣ ಕೃತಿಯಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ’ ಎಂದು ಹಿರಿಯ ಜಾನಪದ ವಿದ್ವಾಂಸ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ‘ಗಾಂಪನ ಪುರಾಣ’ ಪರಪೋಕುದ ಪಟ್ಟಾಂಗ ಮತ್ತು ಡಾ.ವಸಂತಕುಮಾರ್ ಪೆರ್ಲ ಅವರ ‘ರಬೀಂದ್ರ ಕಬಿತೆಲು’ ಕೃತಿಗಳನ್ನು ತುಳು ಭವನದ ಸಿರಿ ಚಾವಡಿಯಲ್ಲಿ ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
  ‘ಡಾ.ಬಿ.ಆರ್‌. ಅಂಬೇಡ್ಕರ್, ವಿಶ್ವಕವಿ ರವೀಂದ್ರನಾಥ ಟಾಗೋರ್ ಮೊದಲಾದ ಶ್ರೇಷ್ಠ ವ್ಯಕ್ತಿಗಳು ನಮ್ಮ ರಾಷ್ಟ್ರೀಯತೆಯನ್ನು ಉನ್ನತ ಮಟ್ಟದಲ್ಲಿ ಬೆಳಗಿದವರು. ಅಂಥವರ ಕುರಿತಾಗಿ ಈ ಎರಡೂ ಕೃತಿಗಳು ಬೆಳಕು ಹರಿಸಿವೆ. ಕವಿ ರವೀಂದ್ರರ ಗೀತಾಂಜಲಿ ಕವಿತೆಗಳನ್ನು ತುಳು ಭಾಷೆಗೆ ತಂದಿರುವುದು ಒಂದು ಉತ್ತಮ ಪ್ರಯತ್ನ. ಈ ಕೃತಿಯನ್ನು ಟ್ಯಾಗೋರ್ ಅವರ ವಸ್ತುಸಂಗ್ರಹಾಲಯಕ್ಕೆ ತಲುಪಿಸಬೇಕು’ ಎಂದವರು ಸಲಹೆ ನೀಡಿದರು.

  ಕಲಬುರ್ಗಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಮತ್ತು ಸಾರಿಗೆ ಉದ್ಯಮಿ ಎ.ಕೆ.ಜಯರಾಮಶೇಖ ಮುಖ್ಯ ಅತಿಥಿಗಳಾಗಿದ್ದರು‌.


  ಸ್ವರದಿಂದ ಅಕ್ಷರಕ್ಕೆ ಪಟ್ಟಾಂಗ :
  ಡಾ.ಸದಾನಂದ ಪೆರ್ಲ ಮಾತನಾಡಿ ‘ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಗಾಂಪಣ್ಣನ ತಿರ್ಗಾಟ ತುಳು ಸರಣಿ ಒಂದು ಜನಪ್ರಿಯ ಪಟ್ಟಾಂಗ ಕಾರ್ಯಕ್ರಮ. ತುಳುನಾಡಿನಲ್ಲಿ ಜಾತ್ಯತೀತವಾಗಿ ನಡೆಯುವ ವಿವಿಧ ಹಬ್ಬ-ಹರಿದಿನಗಳು, ಜಾನಪದ ಉತ್ಸವ – ಆಚರಣೆಗಳನ್ನು ಆಪ್ತ ಸಂವಾದದ ಮೂಲಕ ವಿವರಿಸಿ ಶೋತೃಗಳಿಗೆ ಮಾಹಿತಿ ಮನೋರಂಜನೆಗಳನ್ನು ನೀಡಲಾಗಿತ್ತು. ಇದರ ಯಶಸ್ಸಿಗೆ ಕುಕ್ಕುವಳ್ಳಿಯವರಂತಹ ಜಾನಪದ ತಜ್ಞರ ಬರಹಗಳು ಕಾರಣ. ಅದೀಗ ಸ್ವರದಿಂದ ಅಕ್ಷರ ರೂಪಕ್ಕೆ ಬಂದಿರುವುದು ಸಮಾಜಕ್ಕೆ ಉಪಯುಕ್ತ ಕೊಡುಗೆ’ ಎಂದರು.
  ಸಾಹಿತ್ಯ-ಸಂಸ್ಕೃತಿಯ ಸೇವೆ: ಕತ್ತಲ್ಸಾರ್
  ‌ ‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ‘ಕಳೆದ ಎರಡೂವರೆ ವರ್ಷಗಳಲ್ಲಿ ಕೊರೋನಾ ಕಂಟಕದ ನಡುವೆಯೂ ತುಳು ಸಾಹಿತ್ಯ ಅಕಾಡೆಮಿ ಸಾಹಿತ್ಯ ಮತ್ತು ಸಂಸ್ಕೃತಿಯ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಸರಕಾರದ ಸೀಮಿತ ಅನುದಾನದಲ್ಲಿ ಸ್ವಂತ ಇಚ್ಛಾಶಕ್ತಿಯನ್ನು ಬಳಸಿ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ನೂರಾರು ಕಲಾವಿದರಿಂದ ತುಳು ಜಾನಪದ ಮತ್ತು ಸಾಂಸ್ಕೃತಿಕ ವೈವಿಧ್ಯ,ಎಡೆಬಿಡದ ಚಾವಡಿ ಕಾರ್ಯಕ್ರಮಗಳು, ಸಾಧಕ ಸಮ್ಮಾನ, ಪ್ರಶಸ್ತಿ ಪ್ರದಾನ ನಡೆಸಿರುವುದಲ್ಲದೆ ಮದಿಪು ತ್ರೈಮಾಸಿಕ ಹಾಗೂ ವಿವಿಧ ಸಾಹಿತ್ಯ ಕೃತಿಗಳನ್ನೂ ಸಾಂದರ್ಭಿಕವಾಗಿ ಪ್ರಕಟಿಸಲಾಗಿದೆ. ಇಷ್ಟರಲ್ಲೇ 25 ಮರೆಯಲಾರದ ತುಳುವರು ಮತ್ತು ಇತರ ಗ್ರಂಥಗಳು ಕೂಡ ಬಿಡುಗಡೆಗೊಳ್ಳಲಿವೆ’ ಎಂದು ನುಡಿದರು.

  This image has an empty alt attribute; its file name is WhatsApp-Image-2022-06-17-at-7.15.07-PM.jpeg


  ಇದೇ ಸಂದರ್ಭದಲ್ಲಿ ಕೃತಿ ಕರ್ತರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಡಾ.ವಸಂತ ಕುಮಾರ್ ಪೆರ್ಲ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಪಣಿಯಾಡಿ ಕಾದಂಬರಿ ಪ್ರಶಸ್ತಿ ಪುರಸ್ಕೃತೆ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಿಕೆ ಅಕ್ಷಯ ಆರ್.ಶೆಟ್ಟಿ ಮತ್ತು ಕಾಸರಗೋಡಿನ ಕವಿ, ಕೇರಳ ತುಳು ಅಕಾಡೆಮಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿ ಪರಿಚಯ ಮಾಡಿದರು. ಕೃತಿಕಾರರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಗಾಯಕ ತೋನ್ಸೆ ಪುಷ್ಕಳ ಕುಮಾರ್ ಅವರು ಗಾಂಪನ ಪುರಾಣದಿಂದ ಆಯ್ದ ಕವಿತೆಯನ್ನು ಹಾಡಿದರು.
  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು ಸ್ವಾಗತಿಸಿದರು; ಗಾಯಕಿ ಕಲಾವತಿ ದಯಾನಂದ ಪ್ರಾರ್ಥಿಸಿದರು. ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿ ಬೆಂಗಳೂರಿನ ಸದಸ್ಯೆ ಕಾಂತಿ ಶೆಟ್ಟಿ ವಂದಿಸಿದರು. ಅಕಾಡೆಮಿ ಸದಸ್ಯರಾದ ಡಾ.ಆಕಾಶ್ ರಾಜ್ ಜೈನ್, ನಾಗೇಶ್ ಕುಲಾಲ್, ಚೇತಕ್ ಪೂಜಾರಿ,ರವಿ ಮಡಿಕೇರಿ,ಸಂತೋಷ್ ಪೂಜಾರಿ ಕಾರ್ಕಳ, ವಿಜಯಲಕ್ಷ್ಮಿ ಪಿ.ರೈ ಮೊದಲಾದವರು ಉಪಸ್ಥಿತರಿದ್ದರು.

  Latest Posts

  ಮಂಗಳೂರು ಕಾಲೇಜು ವಿದ್ಯಾರ್ಥಿನಿ‌ ಕಾಸರಗೋಡು ರೈಲ್ವೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

  ಮಂಗಳೂರು: ಮಂಗಳೂರಿನ‌ ಕಾಲೇಜು ವಿದ್ಯಾರ್ಥಿನಿ ಕಾಸರಗೋಡಿನ‌ ರೈಲ್ಚೇ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ‌. ಕಡಪ್ಪುರದ ಸುರೇಂದ್ರರವರ ಪುತ್ರಿ ಅಂಜನಾ.ಎಸ್(22) ಮೃತಪಟ್ಟವರು.ಅಂಜನಾ ಮಂಗಳೂರು ಸೈ೦ಟ್ ಅಲೋಶಿಯಸ್ ಕಾಲೇಜಿನಲ್ಲಿ...

  ಮಂಗಳೂರು: ಕಟೀಲು ಮೇಳದ ಚೌಕಿ ಸಹಾಯಕ ಹೃದಯಾಘಾತದಿಂದ ನಿಧನ

  ಮಂಗಳೂರು: ಕಟೀಲು ಮೇಳದ ಚೌಕಿ ಸಹಾಯಕನೋರ್ವ ಯಕ್ಷಗಾನ ನಡೆಯುತ್ತಿದ್ದ ಸ್ಥಳವಾದ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ. ಕಟೀಲು ಮೇಳದ ಐದನೇ ಮೇಳದ ಚೌಕಿ...

  ಮಂಗಳೂರು: ಕುಡುಕನ ಕೈಗೆ ಸಿಕ್ತು 10ಲಕ್ಷದ ಬಂಡಲ್;‌ ಮುಂದೇನಾಯ್ತು ನೋಡಿ…

  ಮಂಗಳೂರು: ಕುಡುಕನೋರ್ವನಿಗೆ ಅದೃಷ್ಟವೆಂಬಂತೆ ರಸ್ತೆ ಬದಿಯಲ್ಲಿ ಹತ್ತು ಲಕ್ಷ ರೂಪಾಯಿ ಸಿಕ್ಕಿದ್ದು ಆದರೆ ಈತನ ತಲೆಗೇರಿದ ಅಮಲಿನ ಪರಿಣಾಮ ಅಷ್ಟೂ ದುಡ್ಡು ಅರ್ಧ ಗಂಟೆಯಲ್ಲಿ ಪೊಲೀಸರ ಪಾಲಾದ ಘಟನೆ ಪಂಪ್ವೆಲ್ ನಲ್ಲಿ ನಡೆದಿದೆ.

  BREAKING NEWS : ಬೆಳಗಾವಿಯಲ್ಲಿ ಮಹಾರಾಷ್ಟ್ರದ 5 ಲಾರಿಗಳ ಮೇಲೆ ಕಲ್ಲುತೂರಾಟ : ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ

  ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಮಹಾರಾಷ್ಟ್ರ ಸಚಿವರು ಕ್ಯಾತೆ ತೆಗೆದಿದ್ದು, ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಾರಾಷ್ಟ್ರ ನೊಂದಣಿಯ 5 ಲಾರಿಗಳ...

  Don't Miss

  ಸುಳ್ಯ : ಮನೆಗೆ ನುಗ್ಗಿ ವೃದ್ಧ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ; ಆರೋಪಿಯ ಬಂಧನ

  ಸುಳ್ಯ :ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಮನೆಯಲ್ಲಿ ಇದ್ದ ಸಂದರ್ಭ ಅವರ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿಯಾದ ಆರೋಪಿ ಸಲೀಂ ಪಿ.ಎ. (34) ಎಂಬಾತನನ್ನು...

  ಮಂಗಳೂರು: ಜಿಲ್ಲೆಯ ಮರಳು ಕೇರಳಕ್ಕೆ ಅಕ್ರಮ ಸಾಗಾಟ- ಕಠಿಣ ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ

  ಮಂಗಳೂರು: ನಮ್ಮ ಜಿಲ್ಲೆಯಲ್ಲಿ ಇರುವ ಮರಳು ನಮ್ಮ ಜಿಲ್ಲೆಯ ಉಪಯೋಗಕ್ಕೆ ಬಳಕೆ ಮಾಡಬೇಕು. ಸದ್ಯಕ್ಕೆ ನನಗಿರುವ ಮಾಹಿತಿ ಪ್ರಕಾರ ನಮ್ಮ ಜಿಲ್ಲೆಯ ಮರಳು ರಾತ್ರಿಯ ವೇಳೆಗೆ ಕೇರಳದ ಕಡೆಗೆ ಹೋಗುತ್ತಿದೆ...

  ತುಳುವಿನಲ್ಲಿ ʼಕಾಂತಾರʼ ಸಿನೆಮಾ ಬಿಡುಗಡೆ ಬೆನ್ನಲ್ಲೇ ʼಕಾಂತಾರʼಕ್ಕೆ ಮತ್ತೆ ಸಂಕಷ್ಟ – ಕೇರಳ ಹೈಕೋರ್ಟ್ ನಿಂದ ತಡೆಯಾಜ್ಞೆ

  ಕೇರಳ : ತುಳುವಿನಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾದ ಮತ್ತೆ ಕಾಂತಾರ ಸಿನೆಮಾ ತಂಡಕ್ಕೆ ಸಂಕಷ್ಟ ಎದುರಾಗಿದ್ದು, ಕಾಂತಾರ’ ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲಂಸ್ ವಿರುದ್ಧ ‘ವರಾಹ ರೂಪಂ’ ಹಾಡನ್ನು ಬಳಸಿದ್ದಕ್ಕಾಗಿ...

  SHOCKING : 6ನೇ ತರಗತಿ ಪಠ್ಯಪುಸ್ತಕದಲ್ಲಿ ‘ರಮ್ಮಿ’ ಪಾಠ ಶಿಕ್ಷಣ ಇಲಾಖೆ ವಿರುದ್ಧ ಸಿಡಿದೆದ್ದ ಪೋಷಕರು..

  ತಮಿಳುನಾಡಿನ 6ನೇ ತರಗತಿ ಪಠ್ಯಪುಸ್ತಕಗಳಲ್ಲಿ ರಮ್ಮಿ ಆಟದ ಪಾಠಗಳು ಕಂಡು ಬಂದಿದ್ದು, ಶಿಕ್ಷಣ ಇಲಾಖೆ ವಿರುದ್ಧ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ಗಂಗೊಳ್ಳಿ: ನದಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

  ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರು ಬಳಿ ಬೋಟಿನಿಂದ ಬೋಟಿನಿಂದ ಮೀನು ಖಾಲಿ ಮಾಡುವಾಗ ಅಕಸ್ಮಿಕವಾಗಿ ನದಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಇಂದು ಪತ್ತೆಯಾಗಿದೆ. ಮೃತರನ್ನು...