ಅವರಿಗೆ ಟೈಪ್ 2 ಡಯಾಬಿಟಿಸ್ (Type 2 Diabetes) ಇತ್ತು. ವೈದ್ಯರು ಅಟೆಂಡ್ ಮಾಡಿದ ರೋಗಿ ವಿಪರೀತ ವಾಂತಿ ಭೇದಿ ಸಮಸ್ಯೆಯಿಂದ ಬಳಲುತ್ತಿದ್ದರು. ಟೆಸ್ಟ್ ಮಾಡಿದಾಗ ವೈದ್ಯರಿಗೂ ಶಾಕ್ ಕಾದಿತ್ತು! ಆ ರೋಗಿಗೆ ವಿಟಮಿನ್ ಡಿ (Vitamin D) ಟಾಕಿಸ್ ಆಗಿತ್ತು. ವಾಟ್ಸ್ ಆ್ಯಪ್ ವಿಸಶ್ವವಿದ್ಯಾಲಯದ ಪ್ರಭಾವ. ಯಾವುದೋ ಬಂದ ಮೆಸೇಜ್ ನೋಡಿ ಎಡವಟ್ಟು ಮಾಡಿ ಕೊಂಡಿದ್ದರು. ವಿಪರೀತ ವಿಟಮಿನ್ ಡಿ ತಿಂದು ಬಿಟ್ಟಿದ್ದರು.
ಕೊರೋನಾ (Corona) ಆರಂಭವಾದಾಗಿನಿಂದಲೂ ಮನುಷ್ಯನಿಗೆ ಎಲ್ಲಿಲ್ಲದ ಆತಂಕ, ಭಯ ಶುರುವಾಗಿದೆ. ಆರೋಗ್ಯ (Health) ಚೆನ್ನಾಗಿರಬೇಕು ಅಂತ ಏನೇನೋ ತಿನ್ನುತ್ತಾನೆ. ಅದಕ್ಕೆ ಮಿತಿಯೂ ಇರೋಲ್ಲ. ಅದರಲ್ಲಿಯೂ ವಿಟಮಿನ್ ಡಿಯಂಥ ಮಾತ್ರೆಗಳನ್ನು ವಾರಕ್ಕೊಂದರಂತೆ ನಾಲ್ಕಕ್ಕಿಂತ ಹೆಚ್ಚಿಗೆ ಸೇವಿಸಬಾರದು. ಅದೂ ವೈದ್ಯರ ಸಲಹೆ ಮೇರೆಗೇ ನಿಮ್ಮ ದೇಹಕ್ಕೆ (Body) ಅಗತ್ಯವಿದ್ದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಅದು ಬಿಟ್ಟು, ಮನಸ್ಸಿಗೆ ಬಂದಾಗಲೆಲ್ಲಾ ದಿನಕ್ಕೊಂದರಂತೆ ತೆಗೆದುಕೊಂಡರಂತೆ ಅನಾರೋಗ್ಯ ಕಾಡೋದು ಗ್ಯಾರಂಟಿ.
– ವಿಟಮಿನ್ ಡಿ (Vitamin-D) ಅತಿಯಾದರೆ ವಾಕರಿಕೆ, ವಾಂತಿ (Vomitting), ನಿರ್ಜಲೀಕರಣ (De-hydration), ಗೊಂದಲ, ತೂಕಡಿಕೆ, ನಿದ್ರಾವಸ್ಥೆ ಇತ್ಯಾದಿ ಉಂಟಾಗುತ್ತವೆ. ರಕ್ತದಲ್ಲಿ ವಿಟಮಿನ್ ಡಿಯ ಅಂಶ ಒಂದು ಮಿಲಿಲೀಟರ್‌ಗೆ 150 ನ್ಯಾನೋ ಗ್ರಾಂಗಿಂತ ಹೆಚ್ಚಾಗಲೇ ಬಾರದು!
– ರೋಗ ನಿರೋಧಕ ಶಕ್ತಿ (Immunity Power) ಹೆಚ್ಚಿಸಿಕೊಳ್ಳಬೇಕು ಅಂತ ಪ್ರತಿಯೊಬ್ಬರೂ ಒಂದಲ್ಲೊಂದು ಗುಳಿಗೆ, ಕಷಾಯ,ಅಥವಾ ಹೋಮಿಯೋಪತಿಯ (homeopathy)ಆರ್ಸೇನಿಕಂ ಆಲ್ಬಂ ತೆಗೆದುಕೊಳ್ಳುತ್ತಿದ್ದಾರೆ. ಮೆಂತೆ ಕಾಳು, ಅರಿಶಿನ (Turmeric) ಕೂಡ ಸಾಕಷ್ಟು ಸೇವಿಸುತ್ತಾರೆ. ಸೇವಿಸಲಿ. ಆದರೆ ಅದಕ್ಕೊಂದು ಇತಿ ಮಿತಿ ಇರಬೇಕು ಅಲ್ವಾ?
ಪ್ರತಿಯೊಬ್ಬ ಮನುಷ್ಯನ ದೇಹ ಪ್ರಕೃತಿ ವಿಭಿನ್ನವಾಗಿರುತ್ತದೆ. ಅದಕ್ಕೆ ಅನುಗುಣವಾಗಿ ಎಲ್ಲರೂ ಆಹಾರ ಸೇವಿಸಬೇಕು. ಹಾಗೆಯೇ ಅಗತ್ಯ ಔಷಧಿ ಮಾತ್ರೆಗಳನ್ನೂ ತೆಗೆದುಕೊಳ್ಳಬೇಕು. ಯುನಾನಿ, ಸಿದ್ಧ, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಮಾದರಿಯಲ್ಲಿ ಹಲವು ಕಷಾಯಗಳೂ, ಗುಳಿಗೆಗಳೂ ರೋಗ ನಿರೋಧಶಕ್ತಿ ಹೆಚ್ಚಿಸುತ್ತದೆ. ಆದರೆ ಇವನ್ನು ಬಳಸುವಾಗ ಡೋಸೇಜ್ ಕಡೆ ಗಮನಿಸಲೇಬೇಕು. ವೈದ್ಯರು ಹೇಳಿದಷ್ಟೇ ಪ್ರಮಾಣದಲ್ಲಿ ಸೇವಿಸಬೇಕು. ಅಥವಾ ತಲೆತಲಾಂತರದಿಂದ ಇವುಗಳನ್ನು ನೀಡುತ್ತಿರುವ ಪರಿಣತ ವೈದ್ಯರನ್ನಾದರೂ ಕನ್ಸಲ್ಟ್ ಮಾಡಿರಬೇಕು.
ಮೆಂತೆಗೂ ಈ ಸೂತ್ರ ಅನ್ವಯ!
ಮೆಂತೆ (Fenugreek) ಕಾಳನ್ನೂ ಒಂದು ಹದದಲ್ಲಿ ಸೇವಿಸಬೇಕು. ಜಾಸ್ತಿ ಸೇವಿಸಿದರೆ ಅದು ರಕ್ತವನ್ನು ತಿಳಿಗೊಳಿಸುತ್ತದೆ. ಲಿವರ್ ಸಮಸ್ಯೆ ಇದ್ದರಂತೂ ಬ್ಲೀಡಿಂಗ್ ಶುರುವಾಗು ಸಾಧ್ಯತೆ ಇರುತ್ತದೆ. ಅಲೋವೆರಾ ಜ್ಯೂಸ್ ಒಳ್ಳೆಯದು. ಇದೂ ಹೆಚ್ಚಾದರೆ ಲಿವರ್ (Liver) ಡ್ಯಾಮೇಜಾಗುವುದು ಖಾತ್ರಿ. ಅರಿಶಿನವನ್ನು ಹಾಲಿಗೆ ಹಾಕಿ ಅಥವಾ ಬಿಸಿನೀರಿನಲ್ಲಿ ಕದಡಿ ಕುಡಿಯಬಹುದು. ದಿನಕ್ಕೆ ಅರ್ಧ ಸ್ಪೂನ್‌ಗಿಂತ ಹೆಚ್ಚಿದ್ದರೆ ದೇಹದ ಉಷ್ಣಾಂಶ ಹೆಚ್ಚೋದು ಗ್ಯಾರಂಟಿ. ಹೀಗೆ ದಿನಕ್ಕೆ ಎರಡು- ಮೂರು ಸ್ಪೂನ್ ಪ್ರತಿದಿನ ತಿಂಗಳಾನುಗಟ್ಟಲೆ ಸೇವಿಸಿದರೆ, ಕಣ್ಣು ಪೂರ್ಣ ಹಳದಿಯಾಗಿ, ಲಿವರ್ ಸಮಸ್ಯೆ ಉಂಟಾಗಬಹುದಂತೆ.
ಚ್ಯವನಪ್ರಾಶ, ಕಷಾಯ, ಅಶ್ವಗಂಧಗಳನ್ನೂ ಹೆಚ್ಚಾಗಿ ಸೇವಿಸಿದರೆ ಜೀರ್ಣಾಂಗ ಸಮಸ್ಯೆ, ಇತರ ಸಮಸ್ಯೆಗಳು ಕಾಡಬಹುದು. ಹೆಚ್ಚಿನ ಆಯುರ್ವೇದ ಮದ್ದು ಉಷ್ಣ. ಇವುಗಳನ್ನು ಸೇವಿಸುವಾಗ ದೇಹದ ತಂಪು ಕಾಪಾಡಿಕೊಳ್ಳಲು ಇನ್ನೊಂದು ಆಹಾರವೋ, ಎಳನೀರು ಅಥವಾ ಮೊಸರು ಇತ್ಯಾದಿ ಸೇವಿಸಿ ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿಯೇ ಇರುತ್ತದೆ. ಏನೇನೋ ತಿಂದರೆ ಹದಗೆಡೋದು ಗ್ಯಾರಂಟಿ.