ಮಂಗಳೂರು: ಹಳೆ ವಿದ್ಯಾರ್ಥಿ ಸಂಘ ( ರಿ.) ಕೊಳಂಬೆ ಇವರ ವತಿಯಿಂದ ಅಯೋಜಿಸಿದ್ದ ʼಹಳ್ಳಿ ಕ್ರೀಡೋತ್ಸವʼ ಹಾಗೂ ʼವಾರ್ಷಿಕೋತ್ಸವʼದ ಸಮಾರೋಪ ಸಮಾರಂಭ (ಡಿ.3)ಆದಿತ್ಯವಾರ ದಂದು ನಡೆಯಿತು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.
ಸುಮತಿ ರೈಯವರ ಮಗ ಪ್ರವೀಣ್ ಚಂದ್ರ ರೈಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಬಳಿಕ ಕೊಳಂಬೆ ಶಾಲೆಯ ಹಳೆ ವಿದ್ಯಾರ್ಥಿ ಪೋಲೀಸ್ ಇಲಾಖೆಯಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಸಂಪತ್ ಕುಮಾರ್ ಬಿ. ಇವರಿಗೆ ಸನ್ಮಾನ ಸಮಾರಂಭ ನಡೆಯಿತು.
ಇದೇ ಸಂದರ್ಭದಲ್ಲಿ ಹೋಬಳಿ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ 4ನೇ ತರಗತಿ ವಿದ್ಯಾರ್ಥಿ ದೀರೇಶ್,ಹೋಬಳಿ ಮಟ್ಟದ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ 4ನೇ ತರಗತಿ ವಿದ್ಯಾರ್ಥಿ ಸಮಿತ್, ಹೋಬಳಿ ಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ 3ನೇ ತರಗತಿ ವಿದ್ಯಾರ್ಥಿನಿ ನವ್ಯ ಹಾಗೂ ಹೋಬಳಿ ಮಟ್ಟದ ಭಕ್ತಿಗೀತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ 3ನೇ ತರಗತಿ ವಿದ್ಯಾರ್ಥಿ ಕೇತನ್ ಇವರನ್ನು ಸನ್ಮಾನಿಸಲಾಯಿತು.
ಹಳ್ಳಿ ಕ್ರೀಡೋತ್ಸವದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ವಕೀಲರು ವಿನೋದರ ಪೂಜಾರಿ, ಅದ್ಯಪಾಡಿ ಎಂಟರ್ ಪ್ರೈಸಸ್ ಮಾಲಕ ರೂಪೇಶ್ ಕುಮಾರ್,ಬಜಪೆ ರೋಟರಿ ಕ್ಲಬ್ ಅಧ್ಯಕ್ಷ ರವಿ ಪೂಜಾರಿ,ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಭಂಡಾರಿ,ದ.ಕ.ಜಿ.ಪ.ಕಿ.ಪ್ರಾ.ಶಾಲೆ ಕೊಲಂಬೆ ಮುಖ್ಯೋಪಾದ್ಯಾಯಿನಿ ಶ್ರೀಮತಿ ಮೋಲಿ ಮೇರಿನಾ ಲೈಸಾ,ಕೊಳಂಬೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಕೊಟ್ಟಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.