ಚಿಕ್ಕಮಗಳೂರು : ಟೈಲರಿಂಗ್ ಮಾಡುವವರ ಮಕ್ಕಳಿಗೂ ವಿದ್ಯಾಸಿರಿ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಟೈಲರಿಂಗ್ ಮಾಡುವವರಿಗೆ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ವಿಸ್ತರಿಸಿದ್ದೇವೆ. ಶೃಂಗೇರಿಕಯಲ್ಲಿ ಶೀಘ್ರವೇ 100 ಹಾಸಿಗೆಗಳ ಆಸ್ಪತ್ರೆಗೆ ಶಿಲಾನ್ಯಾಸ ಮಾಡಲಾಗುವುದು. ಕಾಡಾನೆ ದಾಳಿಗೆ ಬಲಿಯಾದ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದರು.
ಸಿದ್ದರಾಮಯ್ಯ ತಮ್ಮ ವಿರುದ್ಧದ ಕೇಸ್ ಗಳನ್ನು ಮುಚ್ಚಿಹಾಕಲು ಲೋಕಾಯುಕ್ತ ಮುಚ್ಚಲಾಯಿತು. ಇವರಿಗೆ ಬೇಕಾದ ರೀತಿ ಎಸಿಬಿ ರಚಿಸಿ 50 ಕೇಸ್ ಗಳನ್ನು ಮುಚ್ಚಿ ಹಾಕಿದ್ದಾರೆ. ಕಾಂಗ್ರೆಸ್ ನಾಯಕರ ಭ್ರಷ್ಟಚಾರಕ್ಕೆ ಆ 50 ಕೇಸ್ ಗಳೇ ಸಾಕ್ಷಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ವಿವೇಕಾನಂದರ ಹೆಸರು ಹೇಳಲೂ ಕೂಡ ಅಲರ್ಜಿ ಆಗಿದೆ. ವಿವೇಕಾನಂದ ಪ್ರೇರಣೆ ಆಗಲಿ ಎಂದು ವಿವೇಕಾನಂದ ಹೆಸರು ಇಡಲಾಗಿದೆ. ಅಜ್ಞಾನಿಗಳು, ಅವಿವೇಕಿಗಳಿಗೆ ಈ ದೇಶವನ್ನು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.