Tuesday, April 16, 2024
spot_img
More

    Latest Posts

    ಭಾರಿ ಮಳೆಯಿಂದಾಗಿ ಮೈಸೂರು–ಮಂಗಳೂರು ಹೆದ್ದಾರಿ ಬಂದ್- ವಾಹನ ಸಂಚಾರ ಸ್ಥಗಿತ

    ಸುಳ್ಯ: ಭಾರಿ ಮಳೆಯಿಂದಾಗಿ ಸುಳ್ಯ ತಾಲ್ಲೂಕಿನಲ್ಲಿ ಪಯಸ್ವಿನಿ ಉಕ್ಕಿ ಹರಿಯುತ್ತಿರುವುದರಿಂದ ಮೈಸೂರು–ಮಂಗಳೂರು ಹೆದ್ದಾರಿ ಬಂದ್ ಆಗಿದೆ. ಸುಳ್ಯ ತಾಲ್ಲೂಕಿನ ಪೇರಾಜೆ ಹಾಗೂ ಆರಂಬೂರು ಬಳಿ ಹೆದ್ದಾರಿಯಲ್ಲಿ ಭಾರಿ‌ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ನೂರಾರು ವಾಹನಗಳು ರಸ್ತೆಯಲ್ಲಿ ಸಿಲುಕಿವೆ. ಮುಂಜಾವ 3 ಗಂಟೆಯ ನಂತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ‌. ಪೇರಾಜೆ ಬಿಳಿಯೂರು ಬಳಿ ಹೆದ್ದಾರಿಯಲ್ಲಿ ನೀರಿನಲ್ಲಿ ರಾಜಹಂಸ ಬಸ್ ಸಿಲುಕಿಹಾಕಿಕೊಂಡು ಆತಂಕ ಸೃಷ್ಟಿಸಿತು.

    ಬಸ್‌ನಲ್ಲಿ ಒಂಬತ್ತು ಮಂದಿ‌ ಪ್ರಯಾಣಿಕರಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಬೋಟನ್ನು ಬಸ್ ಬಳಿ ತೆಗೆದುಕೊಂಡು ಹೋಗಿ ಒಂಬತ್ತು ಪ್ರಯಾಣಿಕರನ್ನು‌ ಸುರಕ್ಷಿತವಾಗಿ ಎತ್ತರದ ಜಾಗಕ್ಕೆ ಕರೆದೊಯ್ದರು.

    ಆರು ಗಂಟೆಯ ಹೊತ್ತಿಗೆ ನೀರಿನ ಮಟ್ಟ ಕಡಿಮೆಯಾದ ಬಳಿಕ ಬಸ್, ಲಾರಿಗಳು ಸೇರಿದಂತೆ ದೊಡ್ಡ ವಾಹನಗಳು ಸಂಚಾರ ಆರಂಭಿಸಿದವು. ಎರಡು ಕಿ.ಮೀ ಮುಂದೆ ಆರಂಬೂರುನ ಹೆದ್ದಾರಿಯಲ್ಲಿ ನೀರು ಹರಿಯುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನದಿಯ ಬಳಿ ಇರುವ ಮನೆಯೊಂದು ಸಂಪೂರ್ಣ ಜಲಾವೃತವಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss