ಮಂಗಳೂರು:ಯಕ್ಷಗಾನ ಪರಂಪರೆಯ ‘ವಾಲಿ – ಸುಗ್ರೀವರ ಒಡ್ಡೋಲಗ’ ದಾಖಲೀಕರಣದ ಈ ವೀಡಿಯೋವನ್ನು ಮಧುಸೂದನ ಅಲೆವೂರಾಯರ ಪ್ರಸಿದ್ಧ ಯೂಟ್ಯೂಬ್ ಚಾನೆಲಿನ ಮೂಲಕ ಅಕ್ಟೋಬರ್ 19, 2023ನೇ ಗುರುವಾರದಂದು ಬೆಳಗ್ಗೆ ಗಂಟೆ 10.30ಕ್ಕೆ ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಲೋಕಾರ್ಪಣೆಯನ್ನು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ನೆರವೇರಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಅರ್ಥಧಾರಿ ಮತ್ತು ಚಿಂತಕರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ವಿದುಷಿ ಸುಮಂಗಲಾ ರತ್ನಾಕರ್ (ನಿರ್ದೇಶಕರು, ನಾಟ್ಯ ಹಾಗೂ ಯಕ್ಷರಾಧನಾ ಕಲಾಕೇಂದ್ರ(ರಿ) ಮಂಗಳೂರು) ಭಾಗವಹಿಸುವರು.
