Friday, March 29, 2024
spot_img
More

    Latest Posts

    NTAಯಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಆಹ್ವಾನ

     ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಚಾರ್ಟರ್ಡ್ ಅಕೌಂಟೆಂಟ್ ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದ್ದು, ಜಾಹೀರಾತು ಪ್ರಕಟಣೆಯ ದಿನಾಂಕದಿಂದ 15 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಕನಿಷ್ಠ 15 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಆದರೆ ಅರ್ಜಿದಾರ ಸಂಸ್ಥೆಯು ಶೈಕ್ಷಣಿಕ ಸಂಘಗಳು/ಸರ್ಕಾರಿ ಸಂಸ್ಥೆಗಳ ಕೆಲಸವನ್ನು ನಿರ್ವಹಿಸಲು ಮೀಸಲಾದ ವಿಭಾಗವನ್ನು ಹೊಂದಿರಬೇಕು. ಅರ್ಜಿದಾರ ಸಂಸ್ಥೆಯು ಕನಿಷ್ಟ 2 ದೊಡ್ಡ ಸರ್ಕಾರಿ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ಅನುಭವವನ್ನು ಹೊಂದಿರಬೇಕು. ಯಾವುದೇ ಕಾರಣವನ್ನು ನೀಡದೆ ಯಾವುದೇ ಸಮಯದಲ್ಲಿ ಯಾವುದೇ ಅಥವಾ ಎಲ್ಲಾ ಅರ್ಜಿಗಳನ್ನು ಸ್ವೀಕರಿಸುವ/ತಿರಸ್ಕರಿಸುವ ಹಕ್ಕನ್ನು NTA ಕಾಯ್ದಿರಿಸಿಕೊಂಡಿದೆ.

    ವಯೋಮಿತಿ ಹಾಗೂ ಅರ್ಜಿ ಶುಲ್ಕ :
    ಅರ್ಜಿದಾರರು ತಮ್ಮ ಸಂಸ್ಥೆಯ ಪ್ರೊಫೈಲ್ ಮತ್ತು ಸಂಬಂಧಿತ ವಿವರಗಳನ್ನು ಶುಲ್ಕದೊಂದಿಗೆ ಅಧಿಕೃತ ವೆಬ್‌ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅರ್ಜಿಗಳನ್ನು ಡೈರೆಕ್ಟರ್ ಜನರಲ್, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ, 1 ನೇ ಮಹಡಿ, NSIC-MDBP ಬಿಲ್ಡಿಂಗ್ ಓಖ್ಲಾ ಇಂಡಸ್ಟ್ರಿಯಲ್ ಎಸ್ಟೇಟ್ ನವದೆಹಲಿ 110020 ಗೆ ಕಳುಹಿಸಬಹುದು. ಅಲ್ಲದೆ, ಅರ್ಜಿ ನಮೂನೆಯನ್ನು ಈ ಇ-ಮೇಲ್​​​​ dgoffice@nta.ac.in ಗೆ ಕಳುಹಿಸಬಹುದು.

    ಅರ್ಜಿ ಸಲ್ಲಿಸುವ ವಿಧಾನ :
    ಮೊದಲು NTA ಅಧಿಕೃತ ವೆಬ್‌ಸೈಟ್ nta.ac.in ಗೆ ಭೇಟಿ ನೀಡಬೇಕು.
    ಮುಖಪುಟದಲ್ಲಿ ‘ಇತ್ತೀಚಿನ @NTA’ ವಿಭಾಗವನ್ನು ಆಯ್ಕೆಮಾಡಿಕೊಳ್ಳಬೇಕು
    ಇದಾದ ನಂತರ ಅರ್ಜಿ ನಮೂನೆಯನ್ನು ಅಧಿಸೂಚನೆಯಲ್ಲಿ ಸೇರಿಸಲಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು
    ಅಂತಿಮವಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅದನ್ನು ಆಯಾ ವಿಳಾಸ ಮತ್ತು ಮೇಲ್ ಐಡಿಗೆ ಕಳುಹಿಸಬೇಕು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss