ಬೆಳ್ಳಾರೆ : ಜಾಗದ ವಿಚಾರಕ್ಕೆ ಸಂಬಂಧ ಪಟ್ಟಂತೆ ವ್ಯಕ್ತಿಯೋರ್ವ ಕಂದಾಯ ಕಚೇರಿಗೆ ನುಗ್ಗಿ ತಲವಾರು ತೋರಿಸಿ ಹಲ್ಲೆಗೆ ಮುಂದಾದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಗೊಳಪಟ್ಟ ಸವಣೂರಿನಲ್ಲಿ ಬುಧವಾರ ನಡೆದಿದೆ.
ಆರೋಪಿಯನ್ನು ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ.
ಈತ ಸವಣೂರು ಗ್ರಾ.ಪಂ ಕಟ್ಟದಲ್ಲಿರುವ ಗುಣಪಾಲ ಗೌಡ ಇಡ್ಯಾಡಿಯವರಿಗೆ ಸೇರಿದ ಬೇಕರಿಯನ್ನೂ ಕೂಡ ತಲವಾರಿನಿಂದ ಪುಡಿಗೈದು ಕೊಲೆಗೆ ಯತ್ನಿಸಿದ್ದಾನೆಂದು ಆರೋಪಿಸಲಾಗಿದೆ.
ಬೆಳ್ಳಾರೆ ಪೋಲಿಸ್ ಠಾಣಾ ಠಾಣಾಧಿಕಾರಿ ಸುಹಾಸ್, ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
