Sunday, September 8, 2024
spot_img
More

    Latest Posts

    ಉಪ್ಪಿನಂಗಡಿ: ಟ್ಯಾಂಕರ್ ಲಾರಿ ತಡೆದು ಚಾಲಕನಿಗೆ ಹಲ್ಲೆ, ನಗದು ದೋಚಿ ಪರಾರಿ

    ಉಪ್ಪಿನಂಗಡಿ: ಟ್ಯಾಂಕರ್ ಲಾರಿ ತಡೆದು ತಂಡವೊಂದು ಚಾಲಕನ‌ ಮೇಲೆ ದಾಳಿ ನಡೆಸಿ ನಗದು ದೋಚಿ ಪರಾರಿಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದಲ್ಲಿ ನಡೆದಿದೆ. ಸುರತ್ಕಲ್ ನಿವಾಸಿ ಆಸ್ಕರ್ ವಿನ್ಸೆಂಟ್ ಸೋನ್ಸ್ (61) ಹಲ್ಲೆಗೊಳಗಾದ ವ್ಯಕ್ತಿ.

    ವಿನ್ಸೆಂಟ್ ಕುಳೂರಿನಿಂದ ಟ್ಯಾಂಕರ್ ನ್ನು ಚಲಾಯಿಸಿ ಬರುತ್ತಿದ್ದು ಉಪ್ಪಿನಂಗಡಿ ಬಳಿ ಖಾಸಗಿ ಬಸ್‌ನಿಂದ ವ್ಯಕ್ತಿಯೊಬ್ಬ ಇಳಿದು ಟ್ಯಾಂಕರ್ ನಿಲ್ಲಿಸುವಂತೆ ಸೂಚಿಸಿದ್ದಾನೆ. ಇವರು ಟ್ಯಾಂಕರ್ ನಿಲ್ಲಿಸದೆ ಮುಂದೆ ಹೋದಾಗ ಕಾರೊಂದು ಬಂದು ಲಾರಿಗೆ ಅಡ್ಡ ಹಾಕಿ ಮೂವರು ವ್ಯಕ್ತಿಗಳು ಕಾರಿನಿಂದ ಇಳಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ದರೋಡೆ ನಡೆಸಿದ ವೇಳೆ ಅವರ ಕೈ, ಬಾಯಿ ಮತ್ತು ಕಣ್ಣಿಗೆ ಗಾಯಗಳಾಗಿದ್ದು, ಅವರ ಬಳಿಯಿದ್ದ 6000 ರೂಪಾಯಿ ನಗದನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss