ಮಂಗಳೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಕರ್ನಕಟ್ಟೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಶನಿವಾರ (ಜು.16) ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಯೋಗೀಶ್ ಶೆಣೈ ಯವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶಾಲಾ ಬ್ಯಾಗ್ ವಿತರಿಸಿದರು.ಕಳೆದ ಹಲವಾರು ವರ್ಷಗಳಿಂದ ಈ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಬ್ಯಾಗ್ ವಿತರಣೆಯನ್ನು ವಿತರಿಸುತ್ತಾ ಬಂದಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಣ ಶಿಕ್ಷಕರ ತರಭೇತಿ ಸಂಸ್ಥೆಯ ಆಡಳಿತ ಮುಖ್ಯಸ್ಥರಾದ ಡಾ.ಸಿಪ್ರಿಯನ್ ಮೊಂತೆರೊ, S.D.M.C ಅಧ್ಯಕ್ಷರಾದ ಜಯಲತಾ ಅಮೀನ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ರಮೇಶ್ ಕಂಡೆಟ್ಟು, ಹಳೇ ವಿದ್ಯಾರ್ಥಿ ಸಂಘದ ಸದಸ್ಯರುಗಳಾದ ನಾಗರಾಜ್ ಕೆ. ಬಿಕರ್ನಕಟ್ಟೆ, ಶರತ್,ಶ್ರೀಮತಿ ಶೈಲಜಾ, ಹಳೇ ವಿದ್ಯಾರ್ಥಿ ಗಿರೀಶ್ ಕೊಟ್ಟಾರಿ, ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ಸದಸ್ಯರಾದ ಮುಫೀದ್,ಶ್ರೀರಕ್ಷಾ ಡಿಸ್ಟ್ರಿಬೂಟರ್ ಲೈವ್ ಗಾರ್ಡ್ ಕಂಪನಿ ಇದರ ಬ್ರಾಂಚ್ ಮ್ಯಾನೇಜರ್ ಕಣ್ಣನ್,ಶಾಲಾ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಹಾಗೂ ವಿದ್ಯಾರ್ಥಿಗಳು,ಪೋಷಕರು ಉಪಸ್ಥಿತರಿದ್ದರು.