Friday, March 29, 2024
spot_img
More

    Latest Posts

    ಕಾಸರಗೋಡು: ಮೂಡಬಿದ್ರಿಯಿಂದ ಕಳವುಗೈಯ್ಯಲಾದ ವಾಹನ ಸಹಿತ ಇಬ್ಬರು ಅರೆಸ್ಟ್

    ಕಾಸರಗೋಡು: ಮೂಡಬಿದ್ರಿಯಿಂದ ಕಳವುಗೈಯ್ಯಲಾದ ವಾಹನ ಸಹಿತ ಇಬ್ಬರನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಲಾಗಿದೆ. ಉದುಮ ಮಾಂಗಾಡ್ ನ ರಂಸಾನ್(21) ಮತ್ತು ಮಂಜೇಶ್ವರ ದ ಅಲ್ತಾಫ್(20) ಬಂಧಿತರು.

    ಬುಧವಾರ ರಾತ್ರಿ ಚಿತ್ತಾರಿ ಚಾಮುಂಡಿ ಗುಡ್ಡೆ ಎಂಬಲ್ಲಿಂದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮೂಡಬಿದ್ರಿ ಯಿಂದ ಕಳವು ಗೈದ ಜೀಪು ಸಹಿತ ಕಾಞ೦ಗಾಡ್ ಗೆ ಬರುತ್ತಿದ್ದಾಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಾಹನ ತಪಾಸಣೆ ನಡೆಸಿದ್ದು , ಈ ಸಂದರ್ಭದಲ್ಲಿ ಈ ದಾರಿಯಾಗಿ ಬಂದ ಬೊಲೆರೋ ವಾಹನವನ್ನು ನಿಲ್ಲಿಸಿ ಅದರಲ್ಲಿದ್ದವರನ್ನು ಪ್ರಶ್ನಿಸಿದಾಗ ತದ್ವಿರುದ್ದ ಉತ್ತರ ನೀಡಿದ್ದು , ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ವಾಹನ ಕಳವುಗೈದುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ತಂಡದ ಇತರರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಜಿಲ್ಲೆಯಲ್ಲಿ ನಡೆದ ಕೆಲ ವಾಹನ ಕಳವು ಪ್ರಕರಣಗಳಲ್ಲಿ ಇವರು ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss