Sunday, October 2, 2022

ಕೇರಳದ ರೈಲು ಅಪಘಾತದಲ್ಲಿ ವಿಟ್ಲದ ಯುವಕ‌ ಮೃತ್ಯು

ವಿಟ್ಲ: ಬಂಟ್ವಾಳದ ವಿಟ್ಲ ಸಮೀಪದ ಕಡಂಬುವಿನ ಯುವಕ ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಕಡಂಬು ಸಮೀಪದ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ (19) ಮೃತಪಟ್ಟ...
More

  Latest Posts

  ಕಾಪು: ಕಡಲ ತೀರದಲ್ಲಿ ಭಾರೀ ಗಾತ್ರದ “ತೊರಕೆ”ಮೀನುಗಳ ಸುಗ್ಗಿ !

  ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ. ಮೀನುಗಾರರ ಬಲೆಗೆ ದೊಡ್ಡ ದೊಡ್ಡ...

  ಕುಂಬಳೆ: ಅ.10 ರಂದು ಅನಂತಪುರದಲ್ಲಿ “ಪುವೆಂಪು ನೆಂಪು” ತುಳು ಲಿಪಿ ದಿನಾಚರಣೆ

  ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರು, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟು ಹಬ್ಬದ ಪ್ರಯುಕ್ತ "ಪುವೆಂಪು - ನೆಂಪು"...

  ಗಾಂಜಾ ಸೇವನೆ: 35 ಮಣಿಪಾಲ ವಿದ್ಯಾರ್ಥಿಗಳು ವಶಕ್ಕೆ

  ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ 35 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಣಿಪಾಲ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿಗಳಾದ ಯಶ್...

  ಮಂಗಳೂರು: ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ

  ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌ ಇವರ ನೇತೃತ್ವದಲ್ಲಿ ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ ಕಾರ್ಯಕ್ರಮ ಇಂದು ನಡೆಯಿತು.

  ಜೈ ತುಲುನಾಡ್ (ರಿ ) ಕುಡ್ಲ ಘಟಕ : ತುಲುವೆರೆ ಆಟಿ ಕಾರ್ಯಕ್ರಮ

  ಮಂಗಳೂರು: ಜೈ ತುಲುನಾಡ್ (ರಿ ) ಕುಡ್ಲ ಘಟಕ ಇವರ ಮುಂದಾಳತ್ವದಲ್ಲಿ, “ತುಲುವೆರೆ ಆಟಿ, ಆಟಿಡೊಂತೆ ತೆಲಿತ್ ನಲಿಪುಗ, ಗೇನ ಪಟ್ಟೊನುಗ” ಎನ್ನುವ ಕಾರ್ಯಕ್ರಮ ದಿನಾಂಕ 7/8/2022 ನೇ ಅದಿತ್ಯವಾರ ಮಂಗಳೂರಿನ ಉರ್ವಾಸ್ಟೋರ್‌ ನಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಭವನದ ಸಭಾಂಗಣದ ಆರ್ನಾಲ್ಡ್ ತುಲುವೆ ವೇದಿಕೆಯಲ್ಲಿ ನಡೆಯಿತು. ಹೋಟೆಲ್ ಡಿಂಕಿಡೈನ್ ಮಾಲಕರಾದ ಶ್ರೀ ಸ್ವರ್ಣ ಸುಂದರ್ ಇವರು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಜೈ ತುಲುನಾಡ್ (ರಿ) ಸಂಘಟನೆಯ ಅಧ್ಯಕ್ಷರಾದ ಶ್ರೀ ಅಶ್ವಥ್ ತುಲುವೆ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಅತ್ಯುತ್ತಮವಾಗಿ ನಡೆದು ಜನಮನ್ನಣೆ ಪಡೆಯಿತು, ಹಾಗೆಯೇ ತುಳು ಮಾತೆಗೆ ಹೂ ಸಿಂಗಾರವನ್ನು ಮಾಡುವ ಮೂಲಕ ಹೊಸಬೆಟ್ಟು 8 ನೇ ವಾರ್ಡ್‌ನ ಕಾಪೋರೇಟರ್ ಶ್ರೀ ವರುಣ್ ಚೌಟರವರು ವೇದಿಕೆಗೆ ಮೆರುಗನ್ನು ನೀಡಿದರು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಕಾಂತಿ ಶೆಟ್ಟಿ, ಶಂಕರ್ ಅಡ್ಯಂತಾಯಾ ಕಾಲೇಜಿನ ಪ್ರಾಂಶುಪಾಲೆರಾದ ಲಯನ್ ಡಾ.ನವೀನ್ ಶೆಟ್ಟಿ ಕೆ. ಮುಂತಾದವರು ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗಿತ್ತರು. ಅದೇ ರೀತಿ ಕಾರ್ಯಕ್ರಮದ ವೇದಿಕೆಯಲ್ಲಿ ಅತಿಥಿಯಾಗಿ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಇವರು ಆಗಮಿಸಿ, ಕಾರ್ಯಕ್ರಮಕ್ಕೆ ಶುಭ ಆಶಿಸಿದರು. ಪ್ರಖ್ಯಾತ ತುಳು ನಾಯಕ ನಟ ಶ್ರೀ ವಿನೀತ್ ಕುಮಾರ್ ಗೌರವಾಮಂತ್ರಣ ಸ್ವೀಕರಿಸಿ, ಕಾರ್ಯಕ್ರಮಕ್ಕೆ ಆಗಮಿಸಿ, ಶುಭ ಹಾರೈಸಿ, ತುಳು ಬಾಷೆ, ಸಂಸ್ಕೃತಿಯ ಮೇಲೆ ಅವರಿಗಿರುವ ಗೌರವಕ್ಕೆ ಸಾಕ್ಷಿಯಾದರು.
  ಬೆಳಗ್ಗಿನ ಉದ್ಘಾಟನಾ ಕಾರ್ಯಕ್ರಮದಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತುಳುವ ಬೊಳ್ಳಿ ಶ್ರೀದಯಾನಂದ ಕತ್ತಲ್ಸಾರ್ ಆಟಿಯ ದಿನದ ಬಗೆಗಿನ ವಿವರಣೆ ನೀಡುವುದರೊಂದಿಗೆ, ಆಯೋಜಿಸಿದ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.

  ತುಳು ಭಾಷೆ, ಸಂಸ್ಕೃತಿಯ ಉಳಿವು ಬೆಳೆವಿಗಾಗಿ, ಮಕ್ಕಳಿಗೂ ಹಿರಿಯರಿಗೂ, ಸಮೂಹ ನೃತ್ಯ ಹಾಗೂ ಏಕ ವ್ಯಕ್ತಿ ನೃತ್ಯ ಸ್ಪರ್ಧೆ, ಮಡಲು ಹೆಣೆಯುವ ಸ್ಪರ್ಧೆ, ಮಡಕೆ ಒಡೆಯುವ ಸ್ಪರ್ಧೆ, ಮೂಡೆ ಕಟ್ಟುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

  ಸಂಜೆಯ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕೇಮಾರಿನ ಸಾಂಧಿಪನಿ ಸಾಧನಾಶ್ರಮದ ಸ್ವಾಮಿಜಿಯಾದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮಿಗಳು ಆಶೀರ್ವಚನ ನೀಡಿದರು. ಹಾಗೆಯೇ ಪ್ರಾಧ್ಯಾಪಕರು ದೈವ ನರ್ತಕರೂ, ಜೈ ತುಳುನಾಡ್ (ರಿ.) ಸಂಘಟನೆಯ ಸಾಂಸ್ಕೃತಿಕ ಕಾರ್ಯದರ್ಶಿಯೂ ಆದ ಶ್ರೀ ರವೀಶ್ ಪರವ ಪಡುಮಲೆ ಇವರು ಅದ್ಯಕ್ಷರಾಗಿ, ಪೂರ್ಣ ಕಾರ್ಯಕ್ರಮದ ಅವಲೋಕನ ನೀಡಿದರು. ಅಭ್ಯಾಗತ ಅತಿಥಿಗಳಾದ ಮಂಗಳೂರು ದಕ್ಷಿಣದ ವಿಧಾನಸಭೆಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ರವರು ಕಾರ್ಯಕ್ರಮದ ಉತ್ತಮತೆಗೆ ಸಾಕ್ಷಿಯಾಗಿ, ತುಳು ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ತುಳು ಲಿಪಿ ಫಲಕಗಳನ್ನು ಹಾಕಲಾಗುವುದು ಎನ್ನುವ ಭರವಸೆಯನ್ನು ನೀಡಿದರು. ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು ಶ್ರೀಯುತ ಪ್ರೇಮಾನಂದ ಶೆಟ್ಟಿಯವರು ಮತ್ತೋರ್ವ ಮುಖ್ಯ ಅತಿಥಿಗಳಾಗಿ ಸಮಾರೋಪದಲ್ಲಿ ಭಾಗವಹಿಸಿದ್ದರು. ಆಗಮಿತ ಮಾನ್ಯ ಬಂಗ್ರ ಕೂಳೂರು 16 ನೇ ವಾರ್ಡ್‌ನ ಕಾರ್ಪೋರೇಟರ್ ಆದ ಶ್ರೀ ಕಿರಣ್ ಕುಮಾರ್ ಕೋಡಿಕಲ್ ಇವರು ಮಾತನಾಡುತ್ತಾ ” ತನ್ನ ಕ್ಷೇತ್ರದಲ್ಲಿ ಅಗುವ ಯಾವುದೇ ಕಾರ್ಯಕ್ರಮಗಳಿಗೂ ತುಳು ಲಿಪಿಯ ಹೆಸರಿನ ಫಲಕಗಳನ್ನು ಹಾಕಿಸುವುದಾಗಿ ಭರವಸೆ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಅಳುಪ ವಂಶಸ್ತರಾದ ಡಾ. ಆಕಾಶ್ ರಾಜ್ ಜೈನ್ ಇವರು ಉಪಸ್ಥಿತರಿದ್ದು, ತುಳು ಸಂಸ್ಕೃತಿಯ ವಿಚಾರಗಳನ್ನು ತಮ್ಮ ಮಾತಿನ ಮೂಲಕ ಹಂಚಿಕೊಂಡರು. ಮಂಗಳೂರಿನ ಪ್ರಖ್ಯಾತ ತುಳು ಪತ್ರಿಕೆ ಟೈಮ್ಸ್ ಆಫ್ ಕುಡ್ಲ‌ದ ಪ್ರಧಾನ ಸಂಪಾದಕರಾದ ಎಸ್. ಆರ್ ಬಂಡಿಮಾರ್ ಅತಿಥಿಗಳಾಗಿ ಆಗಮಿಸಿ, ತುಳು ಬಾಷೆ ಸಂಸ್ಕೃತಿ ಬೆಳೆದು ಬಂದ ರೀತಿ ಹಾಗೆಯೇ ಬೆಳಗಬೇಕಾದರೆ ನಮ್ಮ ಕರ್ತವ್ಯ ಏನು ಎನ್ನುವುದನ್ನು ತಿಳಿಸಿ ಹೇಳಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಅರುಣ್ ಉಳ್ಳಾಲ್ ರವರು ಆಟಿ ತಿಂಗಳ ರೀತಿ ನೀತಿಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

  ಉಡುಪಿ ಸಮೂಹ ಸಂಸ್ಥೆ ಮಣಿಪಾಲ ಇದರ ಉಪನ್ಯಾಸಕರಾದ ಶ್ರೀಮತಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಇವರು ಹಿಂದಿನ ಕಾಲದ ಆಟಿ ಆಚರಣೆಗೂ ಈಗಿನ ಕಾಲದ ಆಟಿ ಆಚರಣೆಗೂ ವ್ಯತ್ಯಸ್ಥವಾದ ಕ್ರಮವನ್ನು ತಿಳಿಸಿ, ಅದರ ಪ್ರಾಮುಖ್ಯತೆಯೇನು ಎಂಬುದನ್ನು ಹೇಳಿದರು. ವಿಶೇಷ ಅತಿಥಿಯಾದ, ತುಳು ಸಂಸ್ಕೃತಿಯ ಅನುಯಾಯಿ, ಕಲಿಕಾರ್ಥಿ, ಹಾಗೆಯೇ ಯಕ್ಷಗಾನ ಕಲಿಕಾರ್ಥಿಯಾದ ವಿದೇಶಿ ಮಹಿಳೆ ಫುಲ್ ಬೈಟ್ ನೆಹರು ರಿಸರ್ಚ್ ಸ್ಮಾಲರ್ ಯುಎಸ್ ಎ ಯ ಕೈಲಿ ರೋಜ್ ಸ್ಟೋಚ್ ಇವರು ತುಳು ಭಾಷೆಯಲ್ಲಿಯೇ ಮಾತಾಡಿ ತನ್ನ ಅಭಿಮಾನವನ್ನು ತೋರಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಸ್ಪೂರ್ತಿಯಾದರು. ಜೈ ತುಲುನಾಡ್ ಸಂಘಟನೆಯ ಅಧ್ಯಕ್ಷರು, ಶ್ರೀ ಅಶ್ವಥ್ ತುಲುವೆ ಇವರ ಘನ ಉಪಸ್ಥಿತಿಯಿತ್ತು. . 90 ವರ್ಸ ಪ್ರಾಯದಲ್ಲೂ 40 ನಿಮಿಷಗಳ ಕಾಲ ನಿರಂತರ ಪಾಡ್ದನ ಹೇಳುವ ಹಿರಿಯರಾದ ಅಪ್ಪಿ ಶೆಟ್ಟಿ ಕಿನ್ನಿಗೋಳಿ ಇವರೂ ಈ ಕಾರ್ಯಕ್ರಮದಲ್ಲಿ ಜೀವಂತಿಕೆಯನ್ನು ಹೆಚ್ಚಿಸಿದರು.

  ಈ ಸುಂದರ ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಪಾದಕೆರಾದ ಎಸ್. ಆರ್. ಬಂಡಿಮಾರ್ ಇವರಿಗೆ ತುಳು ಮಾಧ್ಯಮ ಲೋಕದ “ತುಲುವ ನೇಸರೆ” ಎನ್ನುವ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಅದೇ ರೀತಿ ತುಳು ಲಿಪಿಯ ಉನ್ನತಿಗಾಗಿ ತಂತ್ರಜ್ಞಾನದಲ್ಲಿ ಗೇನಸಿರಿ ಎಂಬ ಲಿಪ್ಯಾಂತರ ತಂತ್ರಾಂಶದ ಕೊಡುಗೆಯನ್ನು ನೀಡಿದ ತುಳುವ ಜ್ಞಾನೇಶ್ ದೇರಳಕಟ್ಟೆ ಇವರನ್ನು ಸನ್ಮಾನಿಸಲಾಯಿತು, ಪಾಡ್ದನ ಹೇಳಿ ಕಾರ್ಯಕ್ರಮದ ಚಂದ ಹೆಚ್ಚಿಸಿದ, ಹಿರಿಯರಾದ ಅಪ್ಪಿ ಶೆಟ್ಟಿ ಕಿನ್ನಿಗೋಳಿ ಇವರನ್ನು, ಶಾಲೆಗಳಲ್ಲಿ ತುಳು ಕಲಿಸುವ ಶಿಕ್ಷಕರಿಗೂ ಈ ಸಂದರ್ಭದಲ್ಲಿ ಗೌರವದ ಸನ್ಮಾನವನ್ನು ನೀಡಲಾಯಿತು.

  ಕಾರ್ಯಕ್ರಮಕ್ಕೆ ಬಂದವರನ್ನು ಬೆಲ್ಲ ಹಾಗೂ ನೀರು ಕೊಟ್ಟು ಸ್ವಾಗತಿಸಲಾಯಿತು. ಚಾ, ಕಷಾಯ ಹಾಗೂ ಪತ್ರಡೆ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಮಾವಿನ ಉಪ್ಪಿನಕಾಯಿ, ಒಂದೆಲಗ ಚಟ್ನಿ, ಉಪ್ಪಲ್ಲಿ ಹಾಕಿದ ಹಲಸಿನ ತೊಲೆ ಹಾಗೂ ಕಡಲೆ ಕಾಳು ಪಲ್ಯ, ತೊಜಂಕ್ ಹಲಸಿನ ಬೀಜದ ಪಲ್ಯ, ಕಣಿಲೆ ಹೆಸರುಕಾಳು ಗಸಿ, ತೇವಿನ ಗಸಿ, ಅನ್ನ, ಬಸಲೆ ಹುರುಳಿಕಾಳು ಸಾರು, ಗಂಜಿ, ಹುರುಳಿ ಚಾಟಿನ, ಸಾರ್ನೆ ಅಡ್ಡೆಯ ಪಾಯಸ ಹಾಗೂ ಸಂಜೆ ಚಾ ಮತ್ತು ಸಾವಿಗೆ ಉಸ್ಲಿ ನೀಡಿ ಸಂಘಟಕರು ಆಟಿಯ ಊಟೋಪಚಾರದ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದರು

  ಕಾರ್ಯಕ್ರಮದಲ್ಲಿ ನಡೆಸಲಾದ ನೃತ್ಯ ಸ್ಪರ್ಧೆ ಹಾಗೂ ಆಟೋಟಗಳಿಗೆ, ಶ್ರೀ ನರೇಶ್ ಸಸಿಹಿತ್ಲು, ಕುಮಾರಿ ಸ್ವಾತಿ ಹಾಗೂ ಶ್ರೀಮತಿ ರೇಷ್ಮಾ ಶೆಟ್ಟಿ ಸಹಕಾರ ನೀಡಿದರು.

  ಉದ್ಘಾಟನಾ ಕಾರ್ಯಕ್ರಮದಲ್ಲಿ, ಶ್ರೀಮತಿ ರಮ್ಯ ಕೊಂಚಾಡಿ ಇವರು ಅತಿಥಿಗಳನ್ನು ಸ್ವಾಗತಿಸಿದರು. ಹಾಗೇ ಕುಮಾರಿ ಚಿರಶ್ರೀ ಧನ್ಯವಾದ ಸಮರ್ಪಿಸಿದರು. ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಗೀತಾ ಲಕ್ಷ್ಮೀಶ್ ಅತಿಥಿಗಳನ್ನು ಸ್ವಾಗತಿಸಿದರು, ಕುಮಾರಿ ದೀಕ್ಷಿತಾ ಮಧ್ಯ ಧನ್ಯವಾದ ಸಮರ್ಪಿಸಿದರು. ಶ್ರೀ ಸುದರ್ಶನ್ ಸುರತ್ಕಲ್ ಹಾಗೂ ಕುಮಾರಿ ಪೂರ್ಣಿಮಾ ಬಂಟ್ವಾಳ್ ಕಾರ್ಯಕ್ರಮವನ್ನು ನಿರೂಪಿದರು.

  ವಿಶೇಷ ಆಕರ್ಷಣೆಯಾಗಿ ವಿದೇಶೀ ಮಹಿಳೆ
  ಆದರದ ಆಹ್ವಾನವನ್ನು ಮನ್ನಿಸಿ, ತುಳುವಿನ ಮೇಲಿನ ತನ್ನ ಗೌರವವನ್ನು ಎತ್ತಿ ಹಿಡಿದು, ತುಳುವಿಗಾಗಿ ತಮ್ಮ ಕೊಡುಗೆಯನ್ನು ನೀಡುತ್ತಿರುವ, ಫುಲ್ ಬೈಟ್ ನೆಹರು ರಿಸರ್ಚ್ ಸ್ಕಾಲರ್ ಯುಎಸ್ ಎ ದ ಕೈಲಿ ರೋಜ್ ಸ್ಟೋಜ್ ಇವರು ತುಳು ಬಾಷೆಯಲ್ಲೇ ತನ್ನ ಅನಿಸಿಕೆಯನ್ನು ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿದ್ದು ವಿಶೇಷವಾಗಿತ್ತು.. ತುಳುವಿಗಾಗಿ ತಾನೂ ಏನಾದರೂ ಮಾಡಬೇಕು, ತುಳು ರಾಜ್ಯದ ಅಧಿಕೃತ ಭಾಷೆ ಆಗಬೇಕು, ೮ನೇ ಪರಿಚ್ಛೇದದಲ್ಲಿ ತುಳು ಸೇರಬೇಕು ಎನ್ನುವ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು. ಇವರಿಗೆ ತುಳು ಲಿಪಿ ಶಿಕ್ಷಕಿಯಾದ ಸುದೀಕ್ಷಾ ಕಿರಣ್ ಇವರು ತುಳುನಾಡ ಕಲೆ – ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದಾರೆ. ತುಳು ಭಾಷೆಯ ಕುರಿತು ಅಪಾರ ಅಭಿಮಾನ ತೋರುವ ಈಕೆ ನಮ್ಮ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

  This image has an empty alt attribute; its file name is prashanth.jpg

  Latest Posts

  ಕಾಪು: ಕಡಲ ತೀರದಲ್ಲಿ ಭಾರೀ ಗಾತ್ರದ “ತೊರಕೆ”ಮೀನುಗಳ ಸುಗ್ಗಿ !

  ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ. ಮೀನುಗಾರರ ಬಲೆಗೆ ದೊಡ್ಡ ದೊಡ್ಡ...

  ಕುಂಬಳೆ: ಅ.10 ರಂದು ಅನಂತಪುರದಲ್ಲಿ “ಪುವೆಂಪು ನೆಂಪು” ತುಳು ಲಿಪಿ ದಿನಾಚರಣೆ

  ಕುಂಬಳೆ: ತುಳು ಲಿಪಿ ಸಂಶೋಧಕ, ವಿದ್ವಾಂಸ, ಕೇರಳ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರು, ತುಳುರತ್ನ ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಇವರ ಹುಟ್ಟು ಹಬ್ಬದ ಪ್ರಯುಕ್ತ "ಪುವೆಂಪು - ನೆಂಪು"...

  ಗಾಂಜಾ ಸೇವನೆ: 35 ಮಣಿಪಾಲ ವಿದ್ಯಾರ್ಥಿಗಳು ವಶಕ್ಕೆ

  ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ 35 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮಣಿಪಾಲ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿಗಳಾದ ಯಶ್...

  ಮಂಗಳೂರು: ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ

  ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌ ಇವರ ನೇತೃತ್ವದಲ್ಲಿ ಕೋಡಿಕಲ್‌ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ತುಳು ಲಿಪಿ ನಾಮ ಫಲಕ ಅನಾವರಣ ಕಾರ್ಯಕ್ರಮ ಇಂದು ನಡೆಯಿತು.

  Don't Miss

  ದೇಶದಲ್ಲಿ 5 ವರ್ಷ `PFI’ ನಿಷೇಧ : ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ

  ನವದೆಹಲಿ : ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

  ರಾಜ್ಯದಲ್ಲಿ ಬೈಕ್ ಆ‍್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಆರೋಗ್ಯ ಇಲಾಖೆ ಆದೇಶ

  ಬೆಂಗಳೂರು : ಕರ್ನಾಟಕದಲ್ಲಿ ಬೈಕ್ ಆ‍್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ. ರಾಜ್ಯದಲ್ಲಿ 108 ಆಯಂಬುಲೆನ್ಸ್ ಸೇವೆ ಹೆಚ್ಚಿರುವುದರಿಂದ ರಾಜ್ಯದಲ್ಲಿ ಬೈಕ್ ಆ‍್ಯಂಬುಲೆನ್ಸ್...

  ಮಳಲಿ ಮಸೀದಿ ವಿವಾದ: ಅ.17ಕ್ಕೆ ತೀರ್ಪು ಕಾಯ್ದಿರಿಸಿದ ಮಂಗಳೂರು ಸಿವಿಲ್‌ ಕೋರ್ಟ್‌

  ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ಹಿನ್ನೆಲೆ ಸ್ಥಳದಲ್ಲಿ ಸರ್ವೇ ಮಾಡಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ 3ನೇ ಹೆಚ್ಚುವರಿ...

  ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ -ಮೂವರು ಪೊಲೀಸ್ ವಶಕ್ಕೆ

  ಪುತ್ತೂರು: ಉಪ್ಪಿನಂಗಡಿಯ ಸರಕಾರಿ ಪಿಯು ಕಾಲೇಜಿನಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವಿನ ಮಾರಾಮಾರಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸೆಪ್ಟಂಬರ್ 26ರ ಸೋಮವಾರ ಸಂಜೆ ಉಪ್ಪಿನಂಗಡಿಯ ಬಸ್...

  ಬೆಳ್ತಂಗಡಿ: ಅಪಘಾತ ತಪ್ಪಿಸಲು ಹೋಗಿ ಮನೆಗೆ ಡಿಕ್ಕಿ ಹೊಡೆದ ಲಾರಿ

  ಬೆಳ್ತಂಗಡಿ: ನಿಡಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಪ್ಪಿಸಲು ಹೋಗಿ ಲಾರಿಯೊಂದು ರಸ್ತೆ ಬದಿಯ ಮನೆಗೆ ಡಿಕ್ಕಿಹೊಡೆದ ಘಟನೆ ಮಂಗಳವಾರ ಸಂಭವಿಸಿದೆ. ಅತಿಯಾದ ವೇಗದಲ್ಲಿ ಬಂದ...