ದುಬೈ : ದಿನಾಂಕ 27-04-2021 ರಂದು ಮಂಗಳವಾರ ಬೆಳಗ್ಗೆ 11.00ಗಂಟೆಗೆ ಯು.ಎ.ಇ ದುಬೈ ದೇಶದ ಬರ್-ದುಬೈ ಯಲ್ಲಿ ಅಂತಾರಾಷ್ಟ್ರೀಯ ತುಳುನಾಡ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷರು ದುಬೈ ದೇಶದಲ್ಲಿ ನೆಲೆಸಿರುವ ಪ್ರತಿಷ್ಠಿತ ಉದ್ಯಮಿ ಡಾ.ಡೇವಿಡ್ ಫ್ರಾಂಕ್ ಫರ್ನಾಂಡಿಸ್ ರವರು ದಿವ್ಯ ಹಸ್ತ ದಿಂದ ತುಳುನಾಡ ಸೂರ್ಯ website ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾದ್ಯಮಗಳು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸಿ ಸಮಾಜದ ಹಿತ ಕಾಯುವಲ್ಲಿ ಶ್ರಮಿಸಬೇಕು, ತುಳುನಾಡ ತುಳು ಸೂರ್ಯ ವೆಬ್ ಸೈಟ್ ಹಾಗೂ ತುಳುನಾಡ ಸೂರ್ಯ ಮಾಸಿಕ ಪತ್ರಿಕೆ ಯು ಸಮಾಜ ಜನರ ಬದುಕಿನ ಏಳಿಗೆಗೆ ಜೀವ ನಾಡಿ ಯಾಗಿ ಕಾರ್ಯನಿರ್ವಾಹಿಸಿ ನೂರಾರು ವರ್ಷಗಳ ಕಾಲ ಯಶಸ್ವಿಯಾಗಿ ಬೆಳಗಲಿ.ಎಂದು ಶುಭಕೋರಿ www.tulunadasurya.com website ಬಿಡುಗಡೆ ಗೊಳಿಸಿದರು . ಬಹುಭಾಷಾ ಚಲನಚಿತ್ರ ನಟ ಹ್ಯಾರಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
