ಅಜೆಕಾರು/ಉಡುಪಿ: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಉಡುಪಿ ಅಂಬಲಪಾಡಿ
ದೇವಾಲಯದ ಭವಾನಿಮಂಟಪದಲ್ಲಿ ಅಕ್ಟೋಬರ್ 16 ರಂದು ಆಯೋಜಿಸಿರುವ ಪ್ರಪ್ರಥಮ ಮುಂಬ
ವಾಪಸಿಗರ ಸಮ್ಮಿಲನ 2022 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಮಂದಿಯನ್ನು ಐದು ಸಂಸ್ಥೆಗಳನ್ನು
ಗುರುತಿಸಿ ತುಳುನಾಡ ರಜತ ಸಿರಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪೊವಾಯಿ ಕನ್ನಡ ಸೇವಾ
ಸಂಘ ಮುಂಬಯಿ ಮತ್ತು ಉಡುಪಿ ಜಿಲ್ಲೆಯ ರಜತ ಸಂಭ್ರಮಕ್ಕೆ ಈ ಕಾರ್ಯಕ್ರಮ ಆಯೋಜಿತವಾಗಿದೆ.
ಡಾ.ತಲ್ಲೂರು ಶಿವರಾಮ ಶೆಟ್ಟಿ, ಎಂ.ಕೆ.ವಿಜಯಕುಮಾರ್ ಸಹಿತ ಗಣ್ಯರಿದ್ದು ಪ್ರಶಸ್ತಿ ನೀಡಲಾಗುತ್ತಿದೆ ಎಂದು
ಕಾರ್ಯಕ್ರಮದ ಸಂಘಟಕ, ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಳುನಾಡ ರಜತ ಸಿರಿ ರಾಜ್ಯ ಪ್ರಶಸ್ತಿ
* ಸದಾಶಿವ ಭಂಡಾರಿ, ಸಕಲೇಶಪುರ ಅಧ್ಯಕ್ಷರು ಭಂಡಾರಿ ಮಹಾಮಂಡಲ * ನಿಸರ್ಗ ದಾಮೋದರ್-ಅಧ್ಯಕ್ಷರು ತುಳುಕೂಟ ಮಂಗಳೂರು
* ನಾರಾಯಣ ಗವಾಸ್ಕರ್ ಎರ್ಲಪಾಡಿ-ತ್ರಿಭಾಷಾ ಮಹಾಕವಿಗಳು * ಇಂದ್ರಾಳಿ ಜಯಕರ ಶೆಟ್ಟಿ, ಅಧ್ಯಕ್ಷರು, ತುಳುಕೂಟ ಉಡುಪಿ
* ಫಾ.ವಲೇರಿಯನ್ ಫೆರ್ನಾಂಡಿಸ್, ಸಂಪಾದಕರು ರಾಕೊ ಕೊಂಕಣಿ ಪತ್ರಿಕೆ * ರತ್ನಾವತಿ ಜೆ. ಬೈಕಾಡಿ, ಮಂಗಳೂರು ಅಧ್ಯಕ್ಷರು, ಬೈಕಾಡಿ ಪ್ರತಿಷ್ಠಾನ
* ಡಾ.ಎಸ್.ಎಸ್.ಪಾಟೀಲ್, ಸಂಪಾದಕರು ವಿಶ್ವದರ್ಶನ ಪತ್ರಿಕೆ * ಕಟಪಾಡಿ ಸುಧಾಕರ ಪುಜಾರಿ, ಮಾಜಿ ಅಧ್ಯಕ್ಷರು, ಕನ್ನಡ ಸೇವಾ ಸಂಘ
* ಜ್ಯೋತಿ ಬಿ ತಲ್ಲೂರು, ರಾಜ್ಯಾಧ್ಯಕ್ಷರು, ಕಾನೂನು ವಿಭಾಗ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ * ಎನರಸಿಂಹ, ಅಧ್ಯಕ್ಷರು, ಪಂಚನಬೆಟ್ಟು ವಿದ್ಯಾವರ್ಧಕ ಸಂಘ, ಹಿರಿಯಡ್ಕ
* ಎಸ್.ಕೆ.ಸುಂದರ್-ಮುಂಬಯಿ ಸಮಾಜ ಸೇವಾಸಕ್ತರು * ಕೆ.ಎಂ,ಕೋಟ್ಯಾನ್ ಮುಂಬಯಿ ಸಮಾಜ ಸೇವಾಸಕ್ತರು
* ಸಾವಿತ್ರಿ ಮನೋಹರ್, ಕಾರ್ಕಳ ಸಾಹಿತಿ ವಿಶ್ರಾಂತ ಮುಖ್ಯೋಪಾಧ್ಯಾಯಿನಿ * ಇಂದಿರಾ ಹಾಲಂಬಿ ಆತಾಡಿ, ಪುಸ್ತಕ ಪ್ರಕಾಶಕಿ
* ಬದರಿ ಪುರೋಹಿತ್, ವ್ಯಂಗ್ಯ ಚಿತ್ರಕಾರ ಬಾಗಲಕೋಟೆ * ಗಿರಿಧರ ಕಾರ್ಕಳ, ವಿಶ್ರಾಂತ ಬ್ಯಾಂಕ್ ಅಧಿಕಾರಿ ಬೆಂಗಳೂರು
* ಸಂಧ್ಯಾ ಶೆಣೈ, ಹಾಸ್ಯ ಸಾಹಿತಿಗಳು ಉಡುಪಿ * ದಯಾಮಣಿ ಎಕ್ಕಾರು, ಭಾಗವತರು, ಸಾಹಿತಿ
* ಅಣ್ಣಪ್ಪ ಪೂಜಾರಿ ದೆಂದೂರು, ಮಾಜಿ ಅಧ್ಯಕ್ಷರು ಪೊವಾಯಿ ಕನ್ನಡ ಸಂಘ * ಶಹನಾಜ್ ಎಂ, ಸಂಪಾದಕಿ ಅನುಪಮ ಪತ್ರಿಕೆ
* ಡಾ.ಮಧುಕೇಶ್ವರ ಜನಕ ಹೆಗಡೆ, ಶಿರಸಿ ಜೇನುಕೃಷಿ-ನಾಟಿ ವೈದ್ಯರು * ಜೆಪ್ಪು ಯೋಗಿಶ್ ಶೆಟ್ಟಿ,ಸ್ಥಾಪಕಾಧ್ಯಕ್ಷರು, ತುಳುನಾಡ ರಕ್ಷಣಾ ರಕ್ಷಣಾ ವೇದಿಕೆ,
* ಭಾಸ್ಕರ ಮಣಿಪಾಲ, ರಂಗಕರ್ಮಿಗಳು * ಉದಯ ಕುಮಾರ್ ಆವರ್ಸೆ, ವಿಶ್ರಾಂರ ಪ್ರಾಂಶುಪಾಲರು
ನಾರಾಯಣ ಪ್ರಸಾದ್- ಕಾಸರಗೋಡು, ಸಂಪಾದಕರು, ಹೊರನಾಡ ಸಂಗಾತಿ
ತುಳುನಾಡ ರಜತ ಸಂಘ ಸಿರಿ ಗೌರವ
* ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ ಮಂಗಳೂರು
* ಸಮೃದ್ಧಿ ಮಹಿಳಾ ಮಂಡಳಿ ಚೇರ್ಕಾಡಿ
* ತುಳುನಾಡು ವಾರ್ತೆ,ಸುದ್ದಿ ಪತ್ರಿಕೆ
* ರೇಡಿಯೋ ಸಾರಂಗ್,ಮಂಗಳೂರು
* ನ್ಯೂಸ್ ಕರ್ನಾಟಕ,ವೆಬ್ ಪತ್ರಿಕೆ
