ತುಳುನಾಡ ರಕ್ಷಣಾ ವೇದಿಕೆ (ರಿ) ಮಂಗಳೂರು ನಗರ ಘಟಕ ವತಿಯಿಂದ ದಿನಾಂಕ 15-10-2023 ರವಿವಾರ ಬಿಜೈನ ಸ್ನೇಹ ದೀಪ ದಲ್ಲಿ ನಗರಾಧ್ಯಕ್ಷ ಶ್ರೀ ಶರಣ್ ರಾಜ್ ಕೆ ಆರ್ ರವರ ನೇತೃತ್ವದಲ್ಲಿ ಒಂಜಿ ಪೊರ್ತುದ ನುಪ್ಪು ಎಂಬ ಹಸಿವು ನೀಗಿಸುವ ಅಭಿಯಾನವನ್ನು ಸ್ಥಾಪಕ ಅಧ್ಯಕ್ಷರಾದ ಯೋಗೇಶ್ ಶೆಟ್ಟಿ ಜಪ್ಪು ಅವರು ಚಾಲನೆ ನೀಡಿ ಮಾತನಾಡುತ್ತಾ ಅನ್ನದಾನ ಶ್ರೇಷ್ಠದಾನ ಹಸಿವು ನೀಗಿಸುವ ಮೂಲಕ ಹಸಿವಾದವರ ಮುಖದಲ್ಲಿ ಮಂದಹಾಸ ಬೀರಲು ತನ್ನಿಂದಾದಷ್ಟು ಸಹಕಾರ ನೀಡಿ ಯಾರು ಕೂಡ ಊಟ ಇಲ್ಲದೆ ಹಸಿವು ನಿಂದ ನೋವು ಅನುಭವಿಸಬಾರದು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ರಾಜಶೇಖರ್ ರವರು ಅನ್ನ ವಿತರಿಸಿದರು. ತುಳುನಾಡ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಮಂಗಳೂರು ನಗರ ಉಪಾಧ್ಯಕ್ಷರಾದ ಶಾರದ ಶೆಟ್ಟಿ, ಯುವ ಘಟಕ ಕಾರ್ಯದರ್ಶಿ ಶೋನ್ ಡಿಸೋಜಾ,ರಾಘವೇಂದ್ರ ,ಗೈಟನ್ ರೊಡ್ರಿಗಸ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.