Thursday, September 28, 2023

“ಸಿರಿ ದೇವಿ ಮೈಮೆ” ತುಳು ಯಕ್ಷಗಾನ ಆಮಂತ್ರಣ ಪತ್ರಿಕೆ ಬಿಡುಗಡೆ

ತುಳು ಭಾಷೆಯಲ್ಲಿ ಪ್ರಪ್ರಥಮ ಬಾರಿಗೆ ಶ್ರೀದೇವಿ ಮಹಾತ್ಮೆ ಯಕ್ಷಗಾನ ತುಳು ಭಾಗವತಿಕೆ ಸಹಿತ ತುಳು ಭಾಷೆಯಲ್ಲಿ ಸಿರಿ ದೇವಿ ಮೈಮೆ ಎಂಬ ಪ್ರಸಂಗ ದೊಂದಿಗೆ ನೂತನ ಪ್ರಯೋಗ ನಡೆಯಲಿದೆ.ಸಪ್ಟೆಂಬರ್ 30ರಂದು...
More

    Latest Posts

    ಕರ್ನಾಟಕ ಬಂದ್​ಗೆ ಕರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ- ಜಿಲ್ಲಾಧಿಕಾರಿ

    ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಕಂಡಿಸಿ ಸೆ. 29ರಂದು ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್​ಗೆ ಕರೆ ನೀಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ...

    ನಾಳೆಯ ಕರ್ನಾಟಕ ಬಂದ್ ಗೆ ಕರಾವಳಿಯಿಂದ ಬೆಂಬಲ ಇಲ್ಲ : ದಿಲ್ ರಾಜ್ ಆಳ್ವ

    ಕಾವೇರಿ ನದಿ ನೀರಿನ ಹೋರಾಟ ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಜನರು ಕಾವೇರಿ ಹೋರಾಟಕ್ಕೆ...

    ಉಪ್ಪಿನಂಗಡಿ: 500 ರೂ. ಟಿಕೆಟ್ ಖರೀದಿಸಿದ್ದ ಮೇಸ್ತ್ರಿಗೆ ಒಲಿದ 50 ಲಕ್ಷ ಬಂಪರ್ ಕೇರಳ ಲಾಟರಿ

    ಉಪ್ಪಿನಂಗಡಿಯ ಮೇಸ್ತ್ರಿಯೊಬ್ಬರಿಗೆ ಕೇರಳ ಅದೃಷ್ಟ ಲಾಟರಿ ಒಲಿದಿದೆ. ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಇಳಂತಿಲ ನಿವಾಸಿ ಚಂದ್ರಯ್ಯ ಎಂಬುವವರು 500 ರೂಪಾಯಿಯ ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಟಿಕೆಟ್‌ ಗೆ...

    ಸುಳ್ಯ : ಕೆವಿಜಿ ಪ್ರಿನ್ಸಿಪಾಲ್ ರಾಮಕೃಷ್ಣ ಕೊಲೆ ಪ್ರಕರಣ- ಕೆ.ವಿ.ಜಿ. ಪುತ್ರ ಡಾ.ರೇಣುಕಾಪ್ರಸಾದ್ ಸಹಿತ 6 ಮಂದಿ ದೋಷಿಗಳು.!

    ಬೆಂಗಳೂರು: 12 ವರ್ಷದ ಹಿಂದೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌  ಪ್ರಾಂಶುಪಾಲರಾಗಿದ್ದ ಎ.ಎಸ್‌ ರಾಮಕೃಷ್ಣ  ಅವರ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಡಾ.ರೇಣುಕಾ ಪ್ರಸಾದ್‌ ...

    ಪುತ್ತೂರಿನಲ್ಲಿ ಜು. 23 ರಂದು ʼತುಳುನಾಡ ಬ೦ಟೆರೆ ಪರ್ಬʼ

    ಪುತ್ತೂರು: ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಯುವ ಬ೦ಟರ ದಿನಾಚರಣೆಯ ಪ್ರಯುಕ್ತ ಜು. 23 ರಂದು ತುಳುನಾಡ ಬ೦ಟೆರೆ ಪರ್ಬ-2023 ಎನ್ನುವ ವಿಶಿಷ್ಟ ಸಾಂಸ್ಕೃತಿಕ ಸ್ಪರ್ಧೆಗಳು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್‌ ರೈ ಮುಂಡಾಳೆಗುತ್ತುರವರು ತಿಳಿಸಿದ್ದಾರೆ.

    ತುಳುನಾಡ ಬಂಟೆರೆ ಪರ್ಬ ಕಾರ್ಯಕ್ರಮದಲ್ಲಿ ತುಳುನಾಡು ಮತ್ತು ಬಂಟ ಸಂಸ್ಕೃತಿಯ ಪ್ರದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಕಳೆದ ವರ್ಷ ನನ್ನ ಅವಧಿಯಲ್ಲಿ ಹಿರಿಯ ಬಂಟ ಚೇತನಗಳ ಸ್ಮರಣೆ ಮಾಡುವ ಬಂಟ ಸ್ಮೃತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಬಾರಿ, ಗಾಂಧಿವಾದಿಯಾಗಿ ಇತ್ತೂರಿನ ಅಭಿವೃದ್ಧಿಗೆ ಬಹಳಷ್ಟು ಕೊಡುಗೆಯನ್ನು ನೀಡಿರುವ ನಿವೃತ್ತ ತಹಶೀಲ್ದಾರ್ ಚಿಲ್ಲೆತ್ತಾರು ಕೋಚಣ್ಣ ರೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ರಥವನ್ನು ಸಮರ್ಪಿಸಿದ ಜಯಕರ್ನಾಟಕ ಸಂಸ್ಥಾಪಕ ಎನ್. ಮುತ್ತಪ್ಪ ರೈ ಹಾಗೂ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಹಲವಾರು ಬಂಟರ ಅಭಿವೃದ್ಧಿಗೆ ಸಹಕಾರಿಯಾಗಿದ್ದ ಡಾ. ಮುಂಡಾಳೆಗುತ್ತು ತಿಮ್ಮಪ್ಪ ರೈರವರುಗಳ ಸ್ಮೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸವಣೂರು ವಿಶ್ವಜಿತ್ ಶೆಟ್ಟಿಯವರು ಬ೦ಟ ಸಮಾಜದ ಪರವಾಗಿ ಗೌರವ ಸ್ವೀಕರಿಸಲಿದ್ದಾರೆ.

    ಕಾರ್ಯಕ್ರಮದ ಉದ್ಘಾಟನೆ: ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್ ರೈ ಮಾಲಾಡಿರವರು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮುಂಬಯಿ ಹೇರಂಭಾ ಗ್ರೂಪ್‌ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಇಂಟರ್‌ನ್ಯಾಶನಲ್ ಸಿವಿಲ್ ಸರ್ವೆ೦ಟ್ ನಿತ್ಯಾನಂದ ಶೆಟ್ಟಿ,ಮುಂಬಯಿ ನಿವೃತ್ತ ಪೊಲೀಸ್ ಡೆಟಿ ಕಮಿಷನರ್ ಶಾರ್ಪ್‌ ಶೂಟರ್ ಖ್ಯಾತಿಯ ಪ್ರಕಾಶ್ ಭಂಡಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ವಾಣಿ ಎಸ್ ಆಳ್ವ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಪ್ರಕಾಶ್ ರೈ ದೇರ್ಲ, ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ಮಲ್ಲಿಕಾ ಪ್ರಸಾದ್‌ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಜೊತೆಯಾಗಲಿದ್ದಾರೆ. ಈ ಕಾರ್ಯಕ್ರಮವು ಒಂದು ಈವೆಂಟ್ ರೀತಿಯಲ್ಲಿ ನಡೆಯಲಿದ್ದು, ಸಭಾ ಕಾರ್ಯಕ್ರಮವು ಚಿಕ್ಕದಾಗಿ ಚೊಕ್ಕದಾಗಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಖ್ಯಾತ ನಿರೂಪಕ ನಿತೇಶ್ ಎಕ್ಕಾರುರವರು ಕಾರ್ಯಕ್ರಮದ ಮುಖ್ಯ ನಿರೂಪಕರಾಗಿರುತ್ತಾರೆ ಎಂದು ಶಶಿರಾಜ್ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

    ಸಿನಿಮಾ ತಾರೆಯರು: ಕಾರ್ಯಕ್ರಮದ ಮಧ್ಯೆ ನಮ್ಮನ್ನು ರಂಜಿಸಲು ನಮ್ಮೂರಿನ ಬಂಟಿ ತಾರೆಯರಾದ ವಿಜಯ್‌ ಕುಮಾರ್ ಕೊಡಿಯಾಲ್‌ಬೈಲ್‌, ರೂಪೇಶ್ ಶೆಟ್ಟಿ, ರಚನಾ ಶೆಟ್ಟಿ, ಯಶ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಗಾಯಕ ನಿಶಾನ್ ರೈ ಮಠಂತಬೆಟ್ಟು, ಸಂಗೀತ ನಿರ್ದೇಶಕ ಪ್ರಸಾದ್, ಪ್ರೋ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಸೇರಿದಂತೆ ಹಲವಾರು ಮಂದಿ ಸಾಧಕರು ಭಾಗವಹಿಸಲಿದ್ದಾರೆ ಎಂದು ಶಶಿರಾಜ್ ರೈ ಮುಂಡಾಳೆಗುತ್ತು ತಿಳಿಸಿದರು. ಕಾರ್ಯಕ್ರಮದ ಸಂಚಾಲಕರುಗಳಾದ ಹರ್ಷಕುಮಾರ್ ರೈ ಮಾಡಾವು, ಭಾಗ್ಯಶ್ ರೈ ಕೆಯ್ಯೂರು ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ ಕೆ.ಸಿ., ಉಪಾಧ್ಯಕ್ಷ ಗಣೇಶ್‌ ಶೆಟ್ಟಿ ನೆಲ್ಲಿಕಟ್ಟೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್‌ ಶೆಟ್ಟಿ ಕಂಬಳತಡ್ಡ ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.        

    ತುಳುನಾಡ ಬಂಟೆರೆ ಪರ್ಬ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾದ ಕಾರ್ಯಕ್ರಮವಾಗಿ ಮೂಡಿಬರಲಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಭೋಜನದ ವ್ಯವಸ್ಥೆ ಮುತ್ತಪ್ಪ ರೈಯವರ ಕುಟುಂಬಸ್ಥರು ಮತ್ತು ಮನೆಯವರಿಂದ ನಡೆಯಲಿದೆ. ಬೆಳಿಗ್ಗೆ 9 ರಿಂದ ಸಂಜೆ 6 ರತನಕ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ ಬಂಟ ಬಾಂಧವರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಪ್ರೋತ್ಸಾಹವನ್ನು ನೀಡಬೇಕಾಗಿ ವಿನಂತಿ, ಕಾರ್ಯಕ್ರಮವು ಬಂಟರ ಯಾನೆ ನಾಡವರ ಮಾತೃಸಂಘ, ಪುತ್ತೂರು ತಾಲೂಕು ಸಮಿತಿ, ತಾಲೂಕು ಬಂಟರ, ಮಹಿಳಾ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಕಾರದಲ್ಲಿ ನಡೆಯಲಿದೆ. ಯುವ ಬಂಟರ ಸಂಘದ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ಗಣಹೋಮ, ಶ್ರೀ ಸತ್ಯ ನಾರಾಯಣ ಪೂಜೆಯು ಜು. 22 ರಂದು ಪುತ್ತೂರು ಬಂಟರ ಭವನದಲ್ಲಿ ಬೆಳಿಗ್ಗೆ ನಡೆಯಲಿದೆ.

    Latest Posts

    ಕರ್ನಾಟಕ ಬಂದ್​ಗೆ ಕರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ- ಜಿಲ್ಲಾಧಿಕಾರಿ

    ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಕಂಡಿಸಿ ಸೆ. 29ರಂದು ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್​ಗೆ ಕರೆ ನೀಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ...

    ನಾಳೆಯ ಕರ್ನಾಟಕ ಬಂದ್ ಗೆ ಕರಾವಳಿಯಿಂದ ಬೆಂಬಲ ಇಲ್ಲ : ದಿಲ್ ರಾಜ್ ಆಳ್ವ

    ಕಾವೇರಿ ನದಿ ನೀರಿನ ಹೋರಾಟ ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಜನರು ಕಾವೇರಿ ಹೋರಾಟಕ್ಕೆ...

    ಉಪ್ಪಿನಂಗಡಿ: 500 ರೂ. ಟಿಕೆಟ್ ಖರೀದಿಸಿದ್ದ ಮೇಸ್ತ್ರಿಗೆ ಒಲಿದ 50 ಲಕ್ಷ ಬಂಪರ್ ಕೇರಳ ಲಾಟರಿ

    ಉಪ್ಪಿನಂಗಡಿಯ ಮೇಸ್ತ್ರಿಯೊಬ್ಬರಿಗೆ ಕೇರಳ ಅದೃಷ್ಟ ಲಾಟರಿ ಒಲಿದಿದೆ. ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಇಳಂತಿಲ ನಿವಾಸಿ ಚಂದ್ರಯ್ಯ ಎಂಬುವವರು 500 ರೂಪಾಯಿಯ ಲಾಟರಿ ಟಿಕೆಟ್ ಖರೀದಿಸಿದ್ದರು. ಈ ಟಿಕೆಟ್‌ ಗೆ...

    ಸುಳ್ಯ : ಕೆವಿಜಿ ಪ್ರಿನ್ಸಿಪಾಲ್ ರಾಮಕೃಷ್ಣ ಕೊಲೆ ಪ್ರಕರಣ- ಕೆ.ವಿ.ಜಿ. ಪುತ್ರ ಡಾ.ರೇಣುಕಾಪ್ರಸಾದ್ ಸಹಿತ 6 ಮಂದಿ ದೋಷಿಗಳು.!

    ಬೆಂಗಳೂರು: 12 ವರ್ಷದ ಹಿಂದೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌  ಪ್ರಾಂಶುಪಾಲರಾಗಿದ್ದ ಎ.ಎಸ್‌ ರಾಮಕೃಷ್ಣ  ಅವರ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಡಾ.ರೇಣುಕಾ ಪ್ರಸಾದ್‌ ...

    Don't Miss

    ಗಣೇಶ ಹಬ್ಬದ ಪ್ರಯುಕ್ತ ಮದ್ಯದ ಬಾಟಲಿ ಗೆಲ್ಲುವ ಲಾಟರಿ ಟಿಕೆಟ್ ಫೋಟೋ ವೈರಲ್

    ಸುಳ್ಯ: ಕೋಟ್ಯಂತರ ಹಿಂದೂಗಳ ಪವಿತ್ರ ಹಬ್ಬ ಶ್ರೀ ಗಣೇಶೋತ್ಸವ. ಧಾರ್ಮಿಕ ನಂಬಿಕೆಯ ತಳಹದಿಯ ಮೇಲೆ ಈ ಹಬ್ಬವನ್ನು ದೇಶದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಆದರೆ ಕೆಲವರು ಈ ಹಬ್ಬಕ್ಕೆ ಕಳಂಕ...

    ಚೈತ್ರಾ ಕುಂದಾಪುರ ಪ್ರಕರಣದ ಸುದ್ದಿ ಪ್ರಕಟಿಸುವಾಗ ಕುಂದಾಪುರ ಹೆಸರು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ

    ಬೆಂಗಳೂರು : ಎಂಎಲ್ಎ ಟಿಕೆಟ್ ಪ್ರಕರಣದಲ್ಲಿ ಕೋಟಿ ಕೋಟಿ ಹಣ ವಂಚನೆ ಮಾಡಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ಪ್ರಕರಣದ ವರದಿ ವೇಳೆ ಕುಂದಾಪುರ ಹೆಸರು ಬಳಕೆ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ...

    ನಂತೂರು ಜಂಕ್ಷನ್‌ನಲ್ಲಿದ್ದ ರಸ್ತೆ ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸರು

    ಮಂಗಳೂರು : ಮಂಗಳೂರು ನಗರದ ನಂತೂರು ಜಂಕ್ಷನ್‌ನಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟು ಮಾಡುತ್ತಿದ್ದ ಹೊಂಡ ಗುಂಡಿಗಳನ್ನು ಮಂಗಳೂರು ನಗರದ ಪೊಲೀಸ್ ಅಧಿಕಾರಿಗಳು ಸ್ವತಃ ಮುಚ್ಚುವ ಕಾರ್ಯ ಮಾಡಿ...

    ‘ಯಜಮಾನಿ ಮಹಿಳೆ’ಯರೇ ನಿಮಗೆ ಇನ್ನೂ ‘ಗೃಹಲಕ್ಷ್ಮಿ’ ಹಣ ಬಂದಿಲ್ವ? ಇಲ್ಲಿದೆ ಕಾರಣ

    ಬೆಂಗಳೂರು: ರಾಜ್ಯ ಸರ್ಕಾರದಿಂದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈಗಾಗಲೇ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಪ್ರೋತ್ಸಾಹ ಹಣವನ್ನು ಯಜಮಾನಿ ಮಹಿಳೆಯರ ಖಾತೆಗೆ 2000 ರೂ ಜಮಾ...

    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಲಾರಿ ಚರಂಡಿಗೆ ಪಲ್ಟಿ

    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ದಾಸಕೋಡಿ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಚಾಲಕ ಮತ್ತು ಕ್ಲೀನರ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.