ರಿಷಬ್ ಶೆಟ್ಟಿನಿರ್ದೇಶನದ ‘ಕಾಂತಾರ’ ಕನ್ನಡ ಚಿತ್ರ ದೇಶ- ವಿದೇಶಗಳಲ್ಲೂ ಭಾರಿ ಪ್ರಮಾಣದಲ್ಲಿ ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡಿ, ಮುಂದುವರಿಯುತ್ತಿದ್ದಂತೆ ಇತ್ತ ಕರಾವಳಿಯ ತುಳು ಭಾಷೆಗೂ ಡಬ್ಬಿಂಗ್ ಆಗಿ ‘ಕಾಂತಾರ’ ಹೆಸರಿನಲ್ಲೆ (ಡಿ.2) ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಈಗಾಗಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಲ್ಲಿ ಡಬ್ ಆಗಿ ಕೋಟ್ಯಂತ ಮೊತ್ತ ಬಾಚುತ್ತಿರುವ, ಹಿಂದಿನ ಎಲ್ಲ ಸಿನಿಮಾಗಳ ದಾಖಲೆ ಹಿಂದಿಕ್ಕುತ್ತಿರುವ `ಕಾಂತಾರ’ ಸಿನಿಮಾ ಕರಾವಳಿ ನೆಲದ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ತೆರೆ ಕಾಣುತ್ತಿದೆ. ಅದು ಕೂಡ ಕರಾವಳಿ ಹಾಗೂ ಕರಾವಳಿಗರೇ ಹೆಚ್ಚಾಗಿ ಇರುವ ವಿದೇಶಿ ಟಾಕೀಸ್‌ಗಳಲ್ಲಿ ಎಂಬುದು ಗಮನಾರ್ಹ. ದುಬೈನಲ್ಲಿ ಈಗಾಗಲೇ ತುಳುವಿನಲ್ಲಿ ತೆರೆ ಕಂಡಿದೆ.
ಬುಕ್ ಮೈ ಶೋದಲ್ಲಿ `ಕಾಂತಾರ’ ತುಳು ಪೋಸ್ಟರ್ ಸದ್ದು ಮಾಡುತ್ತಿದೆ. ಟಿಕೆಟ್ ಸೋಲ್ಡ್ ಔಟ್ ಆಗಿದೆ. ಮಂಗಳೂರು, ಉಡುಪಿ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಸಿನಿಮಾ ತೆರೆ ಕಂಡಿದ್ದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನ ಹಲವು ಮಾಲ್‌ಗಳಲ್ಲಿ `ಕಾಂತಾರ’ ತುಳುವಿನಲ್ಲಿ ರಿಲೀಸ್ ಆಗಿದೆ.
