ಮಂಗಳೂರು ನಗರದ ಬಿಕರ್ಣಕಟ್ಟೆ ಶಾಲೆ ಎದುರುಗಡೆ ಇಂದು (17-4-2022 ರವಿವಾರ) ಸಂಜೆ 4.00 ಗಂಟೆಗೆ ಚೀನಾ ಮತ್ತು ಭಾರತ ಗಡಿ ಭಾಗದಲ್ಲಿ 15,300 ಅಡಿ ಎತ್ತರದ ಪ್ರದೇಶದ ಹಿಮಾಲಯದಲ್ಲಿ ತುಳು ಧ್ವಜಾರೋಹಣ ಮಾಡಿದ ಮಣ್ಣಿನ ಮಕ್ಕಳಿಗೆ ತು.ರ .ವೇ ವತಿಯಿಂದ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.



ಸಚಿನ್ ಶೆಟ್ಟಿ, ಅರ್ಜುನ್ ಪೈ , ಅರುಣ್ ಕುಲಾಲ್ , ಸಾಯಿ ಕಿರಣ್ ಶೆಟ್ಟಿ, ಭಾಗ್ಯಲಕ್ಷ್ಮಿ ರವರಿಗೆ ಶಾಲು, ಹಾರ , ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.








ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳಾದ ಪ್ರಶಾಂತ್ ಭಟ್ ಕಡಬ, ಜೆ.ಇಬ್ರಾಹಿಂ ,ಜ್ಯೋತಿ ಜೈನ್, ಪ್ರಶಾಂತ್ ಅಂಚನ್, ನಾಗರಾಜ್ ಕೆ. ಬಿಕರ್ನಕಟ್ಟೆ, ಪೇರಿ ಡಿಸೋಜ, ರೋಶನ್, ಅಶೋಕ್ ಒಡ್ಡೂರು, ಶೋನ್ , ಗೈಟನ್ ಮತ್ತಿತರರು ಉಪಸ್ಥಿತರಿದ್ದರು

