ಬಂಟ್ವಾಳ : ಕಳೆದ 41 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ಮಿತ್ರ ಮಂಡಳಿ ಸದಸ್ಯರು, ರಂಗಭೂಮಿ ಕಲಾವಿದರಾಗಿದ್ದ ದಿ.ಲಕ್ಷ್ಮಣ ಶೆಟ್ಟಿಗಾರ್,ದಿ.ಶ್ರೀಧರ್ ಕೆ.ವಿ., ದಿ.ರಘುರಾಮ ಶೆಟ್ಟಿ ಅವರ ಸ್ಮರಣಾರ್ಥ ಏಳು ದಿನಗಳ ದ.ಕ.,ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ ಫೆ.4ರಿಂದ ಫೆ.11ರವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.
ಫೆ.4ರಂದು ಪಲ್ಲವಿ ಕಲಾವಿದರು ಕಾರ್ಕಳ ಇವರಿಂದ ದಿಬ್ಬಣ, ಫೆ.5 ರಂದು ಅಭಿನಯ ಕಲಾವಿದೆರ್ ಮಂಕುಡೆ ಇವರಿಂದ ಅಜ್ಜ ತತ್ತ್ಂಡಾ, ಫೆ.6 ರಂದು ಕಲಾಮೃತ ಕಲಾವಿದೆರ್ ವಾಮಂಜೂರು ಇವರಿಂದ ಕಥೆ ಏರ್ ಬರೆಪ್ಪೆರ್?, ಫೆ.7 ರಂದು ಕಲಾಶ್ರೀ ಬೆದ್ರ ಇವರಿಂದ ಉಲಾಯಿ ಲೆಪ್ಪುಗಾ,ಫೆ.8 ರಂದು ರಾಜರಾಜೇಶ್ವರಿ ಕಲಾವಿದೆರ್ ಮುಂಡಪಳ್ಳ ಕಾಸರಗೋಡು ಇವರಿಂದ ಲಿಂಕ್ ಲಿಂಗಪ್ಪೆ, ಫೆ.9ರಂದು ಕೃಷ್ಣ ಕಲಾವಿದೆರ್ ಉಡುಪಿ ಇವರಿಂದ ಆನಿದ ಮನದಾನಿ, ಫೆ.10 ರಂದು ಪಿಂಗಾರ ಕಲಾವಿದೆರ್ ಬೆದ್ರ ಇವರಿಂದ ಭರಣಿ-ಕೃತ್ತಿಕೆ ನಾಟಕಗಳು ಪ್ರದರ್ಶನಗೊಳ್ಳಲಿದೆ. ಫೆ.11 ರಂದು ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಅಧ್ಯಕ್ಷ ಪ್ರವೀಣ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

