Friday, March 29, 2024
spot_img
More

    Latest Posts

    ಉಡುಪಿ: ಟ್ರಾವೆಲ್ ಬ್ಯಾಗ್ ನಲ್ಲಿ ಯುವಕನೊಂದಿಗೆ ಹಾಸ್ಟೆಲ್ ಗೆ ಬಂದ ಯುವತಿ

    ಉಡುಪಿ: ಯುವತಿಯೊಬ್ಬಳು ಸೂಟ್ ಕೇಸ್ ನಲ್ಲಿ ಯುವಕರ ಹಾಸ್ಟೆಲ್ ಗೆ ಎಂಟ್ರಿ ಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

    ಹಾಸ್ಟೆಲ್ ಗೆ ಬಂದ ಯುವಕನೊಬ್ಬ ತಂದಿದ್ದ ಟ್ರಾವೆಲ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಬ್ಯಾಗ್ ನಿಂದ ಹೊರಬಂದ ಯುವತಿಯನ್ನು ಕಂಡು ಭದ್ರತಾ ಸಿಬ್ಬಂದಿಗಳೇ ಶಾಕ್ ಆಗಿದ್ದಾರೆ.

    ಉಡುಪಿಯ ಮಣಿಪಾಲ್ ಕಾಲೇಜು ಕ್ಯಾಂಪಸ್ ನಲ್ಲಿರುವ ಹುಡುಗರ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಹಾಸ್ಟೆಲ್ ಭದ್ರತಾ ಸಿಬ್ಬಂದಿಗಳು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ. ಅಲ್ಲದೇ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಕೂಡ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಇದು ಹಳೇ ವಿಡಿಯೋ ಆಗಿದ್ದು, ಇದೀಗ ಮತ್ತೆ ವೈರಲ್ ಆಗಿದೆ ಎಂದು ಹೇಳಲಾಗುತ್ತಿದೆ.

    ಒಟ್ಟಾರೆ ಹುಡುಗರ ಹಾಸ್ಟೆಲ್ ಗೆ ಯುವಕನೊಬ್ಬ ಟ್ರಾವೆಲ್ ಬ್ಯಾಗ್ ನಲ್ಲಿ ಯುವತಿಯನ್ನು ಪಾರ್ಸಲ್ ರೀತಿ ತರಲು ಕಾಣವೇನು ? ಭದ್ರತಾ ಸಿಬ್ಬಂದಿಗಳಿಗೆ ಸಾಕಷ್ಟು ದಿನಗಳಿಂದ ಅನುಮಾನ ಇದ್ದೇ ಟ್ರಾವಲ್ ಬ್ಯಾಗ್ ತಪಾಸಣೆ ನಡೆಸಿದರೆ ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಅಸಲಿಯತ್ತೇನು ? ಎಂಬ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿದ್ದು ತನಿಖೆಯಿಂದಷ್ಟೇ ಸತ್ಯಾಸತ್ಯತೆ ಗೊತ್ತಾಗಬೇಕಿದೆ. ಈ ವಿಡಿಯೋ ಸಾಕಷ್ಟು ಮೆಮೆಗಳಿಗೂ ಕಾರಣವಾಗಿದೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss