ವಿಟ್ಲ:ಅಕ್ರಮ ಮಾದಕವಸ್ತುಗಳ ಸಾಗಾಟದ ವೇಳೆ ಕಾರ್ಯಾಚರಣೆ ನಡೆಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಿವಾಸಿ ಡ್ರಗ್ ಪೆಡ್ಲರ್ ರಹಿಮಾನ್, ಜಲಲೂದ್ಧಿನ್, ಪೈಝಲ್ ಎಂದು ಗುರುತಿಸಲಾಗಿದೆ
ಬಂಧಿತರಿಂದ ಸಾವಿರಾರು ರೂ ಮೌಲ್ಯದ ಎಂಡಿಎಮ್ಎ, ಗಾಂಜಾ, ಒಂದು ಆಟೋ ರಿಕ್ಷಾ ಹಾಗೂ ಒಂದು ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ಕಳ್ಳತನ, ದರೋಡೆ ಸೇರಿ ಹಲವು ಪ್ರಕರಣಗಳು ದಾಖಲಾಗಿದ್ದು, ಕೇರಳದಿಂದ ಕರ್ನಾಟಕ ಭಾಗಗಳಿಗೆ ಮಾದಕ ವಸ್ತುಗಳನ್ನು ಸಾಗಾಟ ಮಾಡುವ ಇವರು ಅಂತರಾಜ್ಯ ಡ್ರಗ್ ಪೆಡ್ಲರ್ ಗಳಾಗಿದ್ದಾರೆ ಎಂದು ಹೇಳಲಾಗಿದೆ.
