ಬೆಂಗಳೂರು,ಡಿ.31- ಆಡಳಿತ ವರ್ಗಕ್ಕೆ ಮೇಜರ್ ಸರ್ಜರಿ ನೀಡಿರುವ ರಾಜ್ಯ ಸರ್ಕಾರ 42 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದೆ. ಕೆಲವು ಅಕಾರಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಿದ್ದರೆ, ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕ್ಕಾಣಿ ಹೂಡಿದ್ದ ಅಕಾರಿಗಳನ್ನು ಸಹ ಎತ್ತಂಗಡಿ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಡಳಿತಕ್ಕೆ ಚುರುಕು ಮುಟ್ಟಿಸಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ವರ್ಗಾವಣೆಗೊಂಡಿರುವ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ.
- ತುಷಾರ್ ಗಿರಿನಾಥ್- ಮುಖ್ಯ ಆಯುಕ್ತರು, ಬಿಬಿಎಂ
- ಎಸ್.ಉಮೇಶ್ ಶಂಕರ್- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಹಕಾರ ಇಲಾಖೆ.
- ರಿತ್ವಿಕ್ ರಾಜನಂ ಪಾಂಡೆ- ಜಂಟಿ ಕಾರ್ಯದರ್ಶಿ, ಕಂದಾಯ ಇಲಾಖೆ
- ಮಣಿವಣ್ಣನ್.ಪಿ.- ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
- ನವೀನ್‍ರಾಜ್-ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
- ಮೌನಿಶ್ ಮೌದ್ಗಲ್ -ಆಯುಕ್ತರು, ಕಂದಾಯ ಮತ್ತು ಭೂ ದಾಖಲೆ
- ಡಾ.ತ್ರಿಲೋಕಚಂದ್ರ – ವಿಶೇಷ ಆಯುಕ್ತರು, ಬಿಬಿಎಂಪಿ
- ಮೋಹನ್ ರಾಜ್ – ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ನೈರ್ಮಲೀಕರಣ ಮಂಡಳಿ
- ರಿಚರ್ಡ್ ವಿನ್ಸೆಂಟ್ ಡಿಸೋಜ- ಕಾರ್ಯದರ್ಶಿ ಸರ್ಕಾರಿ ಯೋಜನೆ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಅಂಕಿಅಂಶಗಳ ಇಲಾಖೆ.
- ಯಶ್ವಂತ್ ವಿ. ಗುರುಕರ್- ಜಿಲ್ಲಾಕಾರಿ, ಕಲಬುರಗಿ
- ನಕುಲ್.ಎಸ್.ಎಸ್ – ಕೇಂದ್ರ ಹಣಕಾಸು ಇಲಾಖೆ ಆಪ್ತ ಕಾರ್ಯದರ್ಶಿ
- ವಿದ್ಯಾ.ಪಿ.ಐ – ಮುಖ್ಯ ಕಾರ್ಯ ನಿರ್ವಹಣಾಕಾರಿ- ಇ.ಗೌರ್ನಮೆಂಟ್
- ಕನಗವಲ್ಲಿ- ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ
- ಶಿವಕುಮಾರ್.ಕೆ.ಬಿ- ಆಪ್ತ ಕಾರ್ಯದರ್ಶಿ, ಕೌಶಲ್ಯಾಭಿವೃದ್ದಿ ಇಲಾಖೆ
- ಡಾ.ರಾಮ್‍ಪ್ರಸಾದ್ ಮನೋಹರ್- ವಿಶೇಷ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಎಸ್ಟೇಟ್)
- ವಾಸಿರೆಡ್ಡಿ ವಿಜಯ ಜೋತ್ಸ್ನಾ – ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್(ಕೆಎಸ್‍ಐಸಿ)
- ಮಂಜುಶ್ರೀ.ಎನ್ – ನಿರ್ದೇಶಕರು, ಪೌರಾಡಳಿತ
- ವೆಂಕಟೇಶ್‍ಕುಮಾರ್.ಆರ್- ಮುಖ್ಯ ಚುನಾವಣಾಕಾರಿ ಮತ್ತು ಡಿಪಿಎಆರ್
- ವಿನೋದ್ ಪ್ರಿಯ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಖನಿಜ ನಿಗಮ
- ಕೃಷ್ಣ ಬಜ್ಪೈ- ಪ್ರಾದೇಶಿಕ ಆಯುಕ್ತರು, ಕಲಬರುಗಿ
- ಡಾ.ರಾಜೇಂದ್ರ.ಕೆ- ಸಹಕಾರ ಸಂಘಗಳ ರಿಜಿಸ್ಟ್ರಾರ್
- ರಮೇಶ್.ಬಿ.ಎಸ್- ಜಿಲ್ಲಾಕಾರಿ, ಚಾಮರಾಜನಗರ
- ಮಂಜುನಾಥ್.ಜೆ – ಆಯುಕ್ತರು, ಆಯುಷ್ ಇಲಾಖೆ
- ಗಿರೀಶ್.ಆರ್ – ಆಯುಕ್ತರು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಲಿ
- ಡಾ.ಮಮತ.ಬಿ.ಆರ್- ಆಯುಕ್ತರು, ಇನ್‍ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಅಂಚೆ ವಿಭಾಗ
- ಹಿರೇಮಠ- ಪ್ರಾದೇಶಿಕ ಆಯುಕ್ತರು, ಬೆಳಗಾವಿ
- ದಿವ್ಯಾ ಪ್ರಭು- ಜಿಲ್ಲಾಕಾರಿ, ಚಿತ್ರದುರ್ಗ
- ಶುಭ ಕಲ್ಯಾಣ್- ನಿರ್ದೇಶಕರು, ಇ- ಆಡಳಿತ, ಆರ್‍ಡಿಪಿಆರ್, ಬೆಂಗಳೂರು
- ಶಿಲ್ಪಾ ನಾಗ್- ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖ
- ನಲ್ಮಿ ಅತುಲ್- ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ
- ಪ್ರಶಾಂತ್‍ಕುಮಾರ್ ಮಿಶ್ರ- ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ
- ಗುರುದತ್ತ ಹೆಗಡೆ- ಜಿಲ್ಲಾಕಾರಿ, ಧಾರವಾಡ
- ರಘುನಂದನ್ ಮೂರ್ತಿ- ಜಿಲ್ಲಾಕಾರಿ, ಹಾವೇರಿ
- ಗಂಗಾಧರ ಸ್ವಾಮಿ- ಉಪಕಾರ್ಯದರ್ಶಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆ
- ವಿದ್ಯಾಕುಮಾರಿ- ಸಿಇಒ, ತುಮಕೂರು
- ವರ್ಣಿತ್ ನೇಗಿ- ಜಂಟಿ ನಿರ್ದೇಶಕರು, ಆಡಳಿತ ತರಬೇತಿ ಕೇಂದ್ರ ಮೈಸೂರು
- ರಾಹುಲ್ ಶರಣಪ್ಪ ಸಂಕನೂರು- ಬಿಬಿಎಂಪಿ, ಉಪಾಯುಕ್ತರು
- ಡಾ.ಆಕಾಶ್ .ಎಸ್ – ಸಿಇಒ, ಕೊಡುಗು
- ಪ್ರತೀಕ್ ಬಾಯಲ್- ವಿಶೇಷ ಭೂಸ್ವಾನಾಕಾರಿ, ಬಿಬಿಎಂಪಿ
- ಅಶ್ವಿಜ.ಬಿ.ವಿ – ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ
- ಮೋನಾ ರೋತ್- ಆಯುಕ್ತರು, ಕಲಬರುಗಿ ಮಹಾನಗರ ಪಾಲಿಕೆ.
- ಆನಂದ್ ಪ್ರಕಾಶ್ ಮೀನಾ- ಉಪಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳ
