Saturday, April 20, 2024
spot_img
More

    Latest Posts

    ಮಂಗಳೂರು: ಇನ್ಮುಂದೆ ಸಂಚಾರ ಪೊಲೀಸರಿಗೆ ‘ಬಾಡಿ ಕ್ಯಾಮರಾ’ ಅಳವಡಿಕೆ ಪ್ರಕ್ರಿಯೆ ಆರಂಭ

    ಮಂಗಳೂರು: ಅಹಿತಕರ ಘಟನೆಗಳನ್ನು ಸೆರೆ ಹಿಡಿಯಲು ಮತ್ತು ರಕ್ಷಣೆಯ ದೃಷ್ಟಿಯಿಂದ ಮಂಗಳೂರು ನಗರ ಸಂಚಾರ ಪೊಲೀಸರು ‘ಬಾಡಿ ಕ್ಯಾಮರಾ’ ಅಳವಡಿಕೆ ಪ್ರಕ್ರಿಯೆ ಆರಂಭಿಸಿದ್ದಾರೆ. ಅಹಿತಕರ ಘಟನೆಗಳ ಸಂದರ್ಭ ಸತ್ಯಾಸತ್ಯತೆಯನ್ನು ಅರಿಯಲು ಇದು ಸಹಕಾರಿ ಎಂದು ಹೇಳಲಾಗುತ್ತಿದೆ.

    ವಾಹನಗಳ ತಪಾಸಣೆಯ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆಯುವುದು ಸಾಮಾನ್ಯವಾಗಿದೆ. ಆವಾಗ ‘ಬಾಡಿ ಕ್ಯಾಮರಾ’ ಸೂಕ್ತ ‘ರಕ್ಷಣೆ’ ಒದಗಿಸಲಿದೆ ಎಂಬ ವಿಶ್ವಾಸದೊಂದಿಗೆ ಮಂಗಳೂರು ಸಂಚಾರ ಪೊಲೀಸರು ‘ಬಾಡಿ ಕ್ಯಾಮರಾ’ ಅಳವಡಿಸತೊಡಗಿದ್ದಾರೆ.

    ಸಾರ್ವಜನಿಕರು ಅಥವಾ ಪೊಲೀಸರು ಆಕ್ರೋಶಭರಿತರಾಗುವುದು, ದರ್ಪ ತೋರುವುದು, ಒರಟಾಗಿ ವರ್ತಿಸುವುದು, ಮಾತಿನ ಚಕಮಕಿಗಿಳಿಯುವುದು, ಸಂಘರ್ಷದ ವಾತಾವರಣ ಸೃಷ್ಟಿಸುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭ ‘ಬಾಡಿ ಕ್ಯಾಮರಾ’ ಅಳವಡಿಸಿದರೆ ವಾಸ್ತವಾಂಶ ತಿಳಿಯಬಹುದಾಗಿದೆ. ಈಗಾಗಲೆ ಮಂಗಳೂರಿನ ಕೆಲವೇ ಪೊಲೀಸರ ಬಳಿ ‘ಬಾಡಿ ಕ್ಯಾಮರಾ’ ಇದ್ದು, ಇನ್ನಷ್ಟು ಪೊಲೀಸರಿಗೆ ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ.

    ಈ ‘ಬಾಡಿ ಕ್ಯಾಮರಾ’ಗಳು ಧ್ವನಿ ಮತ್ತು ದೃಶ್ಯ ಎರಡನ್ನೂ ಚಿತ್ರೀಕರಿಸಿಕೊಳ್ಳುತ್ತವೆ. ಸಾರ್ವಜನಿಕರು ಅಥವಾ ಕರ್ತವ್ಯದಲ್ಲಿರುವ ಪೊಲೀಸರು ದುರ್ವರ್ತನೆ ತೋರಿದಾಗ ‘ಬಾಡಿ ಕ್ಯಾಮರಾ’ದಲ್ಲಿ ದಾಖಲಾಗುವುದರಿಂದ ಅಗತ್ಯ ಬಿದ್ದಾಗ ಪರಿಶೀಲಿಸಬಹುದಾಗಿದೆ. ಹಾಗಾಗಿ ಯಾರೇ ತಪ್ಪು ಮಾಡಿದರು ಅದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಸಂಯಮದಿಂದ ವರ್ತಿಸುವಂತೆ ಸಂಚಾರ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಸಾರ್ವಜನಿಕರ ಸಹಕಾರವೂ ಅಗತ್ಯವಿದೆ. ಕೆಲವೊಮ್ಮೆ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳಿರುವುದರಿಂದ ‘ಬಾಡಿ ಕ್ಯಾಮರಾ’ಗಳನ್ನು ಬಳಸುವುದು ಅನಿವಾರ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ವಾಹನಗಳ ತಪಾಸಣೆ, ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು, ಟೋಯಿಂಗ್ ಸಂದರ್ಭ ಕೆಲವರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದ ಘಟನೆಗಳಾಗಿದ್ದವು. ಇದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಪ್ರಕ್ರಿಯೆಗಳಾಗಿರುತ್ತದೆ. ಈ ಮಧ್ಯೆ ಪೊಲೀಸರು ಸಂಯಮ ಕಳೆದುಕೊಂಡು ವರ್ತಿಸಿರುವ ಬಗ್ಗೆಯೂ ದೂರುಗಳು ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ‘ಬಾಡಿ ಕ್ಯಾಮರಾ’ ಅಳವಡಿಕೆ ಅನಿವಾರ್ಯವಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss