Thursday, April 25, 2024
spot_img
More

    Latest Posts

    ವಿಚಿತ್ರ ಮಗು: ಹುಟ್ಟಿನಿಂದಲೇ ಈ ಮಗುವಿಗೆ 4 ಕೈ – 4 ಕಾಲು: ಶಸ್ತ್ರಚಿಕಿತ್ಸೆಗಾಗಿ ಬಡ ಪೋಷಕರ ಪರದಾಟ

    ನವಾಡ (ಬಿಹಾರ): ಬಿಹಾರದ ನವಾಡ ಜಿಲ್ಲೆಯಲ್ಲಿ ವಿಚಿತ್ರವಾದ ಮಗುವೊಂದು ಜನಿಸಿದೆ. ನಾಲ್ಕು ಕಾಲು ಮತ್ತು ನಾಲ್ಕು ಕೈಗಳನ್ನು ಹೊಂದಿರುವ ಮಗುವಿನ ಶಸ್ತ್ರಚಿಕಿತ್ಸೆಗಾಗಿ ಪೋಷಕರು ಜಿಲ್ಲಾಡಳಿತದ ಮೊರೆ ಹೋಗಿದ್ಧಾರೆ. ಇದೇ ವೇಳೆ, ಮಗುವನ್ನು ನೋಡಲು ಜನರು ಮುಗಿಬೀಳುತ್ತಿದ್ಧಾರೆ.

    ಇಲ್ಲಿನ ಹೇಮಜಾ ಪಂಚಾಯಿತಿ ವ್ಯಾಪ್ತಿಯ ವರ್ಸಲಿಗಂಜ್​ ಪ್ರದೇಶದ ಬಸಂತ್​ ಕುಮಾರ್​ ಮತ್ತು ಉಷಾ ದೇವಿ ಎಂಬುವವರ ದಂಪತಿಯ ಪುತ್ರಿ ಚೌಮುಖಿ ಕುಮಾರಿಗೆ ತಲಾ ನಾಲ್ಕು ಕೈ-ಕಾಲುಗಳ ಇವೆ. ಎರಡೂವರೆ ವರ್ಷದ ಈ ಚೌಮುಖಿ ಹುಟ್ಟಿನಿಂದಲೂ ಹೀಗೆ ಇದ್ದು, ತಂದೆ ಬಸಂತ್​ ಕೂಲಿ ಕಾರ್ಮಿಕ ಆಗಿರುವುದರಿಂದ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ.

    ಮಗು ಹುಟ್ಟಿದ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ನಮ್ಮಲ್ಲಿ ಹಣದ ಕೊರತೆಯಿಂದ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರಾಕರಿಸಿದರು ಎಂದು ಬಸಂತ್ ಹೇಳಿದ್ಧಾರೆ. ಹೀಗಾಗಿ ಇದೀಗ ಜಿಲ್ಲಾಡಳಿತದ ನೆರವು ಕೋರಲೆಂದು ಮಗುವಿನ ಸಮೇತವಾಗಿ ಈ ದಂಪತಿ ನವಾಡ ಜಿಲ್ಲಾ ಕೇಂದ್ರಕ್ಕೆ ಬಂದಿದ್ದಾರೆ. ವಿಚಿತ್ರವಾದ ಮಗುವನ್ನು ನೋಡಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಮತ್ತು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಸೆರೆಹಿಡಿದು ಕೊಳ್ಳುತ್ತಿದ್ಧಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss