ಶಿರ್ವ: ಅಪರಿಚಿತರಿಬ್ಬರು ಗ್ರಾಹಕರ ಸೋಗಿನಲ್ಲಿ ಶಿರ್ವ ಪೇಟೆಯಲ್ಲಿನ ಕೃಪಾ ಜ್ಯುವೆಲ್ಲರ್ಸ್ ಗೆ ಬಂದು 1.49 ಲಕ್ಷ ರೂ. ಮೌಲ್ಯದ ನೆಕ್ಲೇಸ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಶಿರ್ವ ಕುತ್ಯಾರು ರಸ್ತೆ ಬಳಿಯಿರುವ ಕೃಪಾ ಜ್ಯುವೆಲ್ಲರ್ಸ್ ನಲ್ಲಿ ಜೂ. 9ರಂದು 1.49 ಲಕ್ಷ.ರೂ ಮೌಲ್ಯದ 28.79 ಗ್ರಾಂ. ಚಿನ್ನದ ನೆಕ್ಲೇಸ್ ಕಾಣೆಯಾಗಿತ್ತು. ಮಾಲಕರು ಅಂಗಡಿಯ ಸಿಸಿ ಕೆಮರಾ ಪರಿಶೀಲಿಸಿದಾಗ ಜೂ. 6ರಂದು ಮಧ್ಯಾಹ್ನ ಜ್ಯುವೆಲ್ಲರಿಗೆ ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತರು ಕೆಲಸದವರಿಗೆ ತಿಳಿಯದಂತೆ ಚಿನ್ನದ ನೆಕ್ಲೇಸ್ ನ್ನು ಕಳ್ಳತನ ಮಾಡುವ ಕೃತ್ಯ ಸೆರೆಯಾಗಿದೆ.ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.